![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 13, 2021, 4:29 PM IST
ಬೆಂಗಳೂರು: ‘ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿಯ ಒಂದು ದೃಶ್ಯದ ಹಿಂದಿರುವ ಕುತೂಹಲಕಾರಿ ವಿಷಯವೊಂದನ್ನು ನಟ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.
ರಾಜ್ ಕಿಶೋರ್ ನಿರ್ದೇಶನದ 1994ರಲ್ಲಿ ತೆರೆ ಕಂಡಿದ್ದ ‘ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿ ಜಗ್ಗೇಶ್ ಅವರು ನಾಯಕ ನಟರಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ದೃಶ್ಯವೊಂದರಲ್ಲಿ ಜಗ್ಗೇಶ್ ಕೊರಳಿನಲ್ಲಿ ಹಾವು ಇರುತ್ತದೆ. ನಾಗರ ಪಂಚಮಿಯ ಸೀನ್ ಗಾಗಿ ಈ ದೃಶ್ಯ ಸೆರೆ ಹಿಡಿಯಲಾಗಿತ್ತು. ಈ ಸೀನ್ ಇಂದೆ ಇರುವ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ.
ಇದು ಅದ್ಭುತ ದೃಶ್ಯ. ಆದರೆ ಅಂದು ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನನ್ನು ಬೈದದ್ದು. ನಂತರ ಡಬ್ಬಿಂಗ್‍ನಲ್ಲಿ ಈ ಸಂಭಾಷಣೆ ಹೇಳಿದ್ದು. ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಅದ್ಭುತ ದೃಶ್ಯ ಆದರೆ ಅಂದು ಹೃದಯ ಬಾಯಿಗೆ ಬಂದಿತ್ತು ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೆ..ಆಡಿರುವುದು ಸಂಭಾಷಣೆ ಅಲ್ಲ ಬಾಯಿಗೆ ಬಂದಂತೆ ಭಯಕ್ಕೆ ನಿರ್ದೇಶಕನ ಬೈದದ್ದು ನಂತರ ಡಬ್ಬಿಂಗ್ ನಲ್ಲಿ ಈ ಸಂಭಾಷಣೆ ಹೇಳಿದ್ದು!ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್.. ಸತ್ತು 17ವರ್ಷ ಆಯಿತು!
ಅಮರ ಹಳೆ ನೆನಪು!! https://t.co/ARJCKpQ3ql— ನವರಸನಾಯಕ ಜಗ್ಗೇಶ್ (@Jaggesh2) August 13, 2021
ನಾಗರ ಪಂಚಮಿ ದಿನವಾದ ಇಂದು ಅಭಿಮಾನಿಯೋರ್ವ ಜಗ್ಗೇಶ್ ನಟನೆಯ ಬೇಡ ಕೃಷ್ಣ ರಂಗಿನಾಟ ಚಿತ್ರದ ದೃಶ್ಯ ಹಂಚಿಕೊಂಡಿದ್ದರು. ಅದರ ಶೂಟಿಂಗ್ ನೆನಪನ್ನು ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.