“RSS ಜಾತಿ ಧರ್ಮ ಮೀರಿದ ಮಾತೃ ಹೃದಯಿ ಸಂಘಟನೆ” : ನಟ ಜಗ್ಗೇಶ್
Team Udayavani, Oct 6, 2021, 1:52 PM IST
ಬೆಂಗಳೂರು : ಆರ್ ಎಸ್ ಎಸ್ ಕುರಿತು ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಿನಿಮಾ ನಟ ಜಗ್ಗೇಶ್ ತಿರುಗೇಟು ನೀಡಿದ್ದಾರೆ. ಸಂಘ ಪರಿವಾರದ ಬಗ್ಗೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ.
ಇಂದು ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಅವರು ಆರ್ ಎಸ್ ಎಸ್ ಸಂಘಟನೆಯ ಉದ್ದೇಶ, ಇದುವರೆಗೆ ಅದು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ.
”ನಾನು ಕಂಡ ಅರ್ ಎಸ್ ಎಸ್ (ಓಂ, ಕ್ರೈಸ್ತ, ಅಲ್ಲಾ ಚಿಹ್ನೆ) ಜಾತಿ ಧರ್ಮ ಮೀರಿದ ಮಾತೃ ಹೃದಯಿ ಸಂಘಟನೆ, ಕೋವಿಡ್ ಸಂದರ್ಭವಾಗಲಿ, ನೆರೆ ಬಂದ ಸಂದರ್ಭವಾಗಲಿ ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ, ವಿದ್ಯೆ-ದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ. ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥ ಸೇವೆ ಮಾಡುವ ಮಾತೃ ಹೃದಯಿ ಸಂಸ್ಥೆ ಎಂದರೆ ಅದು ಒಂದೇ ಆರ್ ಎಸ್ ಎಸ್” ಎಂದಿದ್ದಾರೆ.
”ಯಾರಿಗೆ ಆ ಸಂಸ್ಥೆಯ ಸಂಪರ್ಕ ದೊರಕಿದರೆ ಅಂಥವರು ತಮಗರಿಯದೆ ಸಾತ್ವಿಕನಾಗಿ ಸ್ವಾರ್ಥ ಬಿಟ್ಟು ಸಮಾಜಕ್ಕೆ ಹೆಗಲು ಕೊಡುವ ಕರ್ಮಯೋಗಿ ಆಗುತ್ತಾನೆ. ದೂರ ನಿಂತು ಬೆಟ್ಟ ನೋಡುವರಿಗು ಆ ಬೆಟ್ಟ ಏರಿದವರಿಗು ವಿವರಣೆಗೆ ವ್ಯತಾಸವುಂಟು. ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು ಕಾರಣ ಅದರ ಮಾತೃರೂಪ ಹಾಗು ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ ಸಂಘವಿದು” .
”ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿದ್ಯಾವಂತರು ರಾಷ್ಟ್ರಪ್ರೇಮಿಗಳು, ಆತ್ಮಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು. ಅವರಿಗೆ ದೇಶವೇ ಮನೆ ದೇಶವಾಸಿಗಳೇ ಬಂಧುಗಳು ಅವರ ನಿಸ್ವಾರ್ಥ ಸಮಾಜ ಸೇವೆಯೇ ದೇವರ ಪೂಜೆ. ಆ ಸಂಘದ ಬಗ್ಗೆ ಮಾತಾಡುವ ಮುನ್ನ ಅದರ ನಿಸ್ವಾರ್ಥ ಗುಣ ಅರಿಯಿರಿ” ಎಂದಿದ್ದಾರೆ ಜಗ್ಗೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.