![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 12, 2021, 1:21 PM IST
ಮಾರ್ಚ್ 17- ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಏಪ್ರಿಲ್ 1 ಅವರ “ಯುವರತ್ನ’ ಚಿತ್ರದ ಬಿಡುಗಡೆ. ಅಪ್ಪು ಅಭಿಮಾನಿಗಳಿಗೆ ಸಂಭ್ರಮಿಸಲು ಇದಕ್ಕಿಂತ ಬೇರೇನು ಬೇಕು. ಸದ್ಯ ಪುನೀತ್ “ಜೇಮ್ಸ್’ ಚಿತ್ರೀಕರಣದಲ್ಲಿ ಬಿಝಿ. ಇದರ ಜೊತೆಗೆ ಅವರ ಬ್ಯಾನರ್‌ನಲ್ಲೂ ಸಿನಿಮಾ ನಡೆಯುತ್ತಿದೆ. ಇತ್ತೀಚೆಗೆ ಮಾತಿಗೆ ಸಿಕ್ಕ ಪುನೀತ್ ರಾಜ್‌ಕುಮಾರ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ…
ಚಿತ್ರರಂಗದಲ್ಲಿ 45 ವರ್ಷ ಸಿನಿ ಜರ್ನಿ ಸೆಲೆಬ್ರೆಷನ್ ಹೇಗಿದೆ?
ಸಿನಿಮಾ ಇಂಡಸ್ಟ್ರಿಯಲ್ಲಿ 45 ವರ್ಷ ಜರ್ನಿ ಅಂಥ ಕೇಳಿದಾಗ ಒಂಥರಾ ಮುಜುಗರ ಆಗುತ್ತೆ. ನಾನು ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. 45 ವರ್ಷಕ್ಕೆ ಸೆಲೆಬ್ರೆಷನ್ ಅಂತೇನೂ ಮಾಡಲಿಲ್ಲ. ಪರ್ಸನಲಿ ನನಗೇ ಈ ಥರದ ಸೆಲೆಬ್ರೆಷನ್ ಇಷ್ಟವಾಗೋದಿಲ್ಲ. ಆದ್ರೆ ಫ್ಯಾನ್ಸ್ ಪ್ರೀತಿಯಿಂದ ಡಿಪಿ ಮಾಡಿದ್ರು. ಇಂಡಸ್ಟ್ರಿ ಕಡೆಯಿಂದ ಅನೇಕ ಫ್ರೆಂಡ್ಸ್, ಹಿತೈಷಿಗಳು, ಫ್ಯಾನ್ಸ್ ಎಲ್ಲರೂ ವಿಶ್ ಮಾಡಿದರು. ಬಹಳ ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಬಂದಿದ್ದರಿಂದ, ಅಂದುಕೊಳ್ಳದೇನೇ, ಏನೇನೂ ಆಗಿದೆ. ಮುಂದೆ ಮಾಡಬೇಕಾಗಿರುವ ಕೆಲಸ ಬೇಕಾದಷ್ಟಿದೆ.
ಈ ಬಾರಿ ನಿಮ್ಮ ಬರ್ತ್‌ಡೇ ಸೆಲೆಬ್ರೆಷನ್ ಹೇಗಿದೆ?
ಇನ್ನೂ ಕೋವಿಡ್ ಭಯ ಇರುವುದರಿಂದ, ಈ ಬಾರಿ ಬರ್ತ್‌ಡೇ ಸೆಲೆಬ್ರೆಷನ್ ಮಾಡಿಕೊಳ್ಳುತ್ತಿಲ್ಲ. ಬರ್ತ್‌ಡೇ ದಿನ ಮನೆಯಲ್ಲಿ ಇಲ್ಲದಿರುವುದರಿಂದ, ಸೆಲೆಬ್ರೆಷನ್ ಅಂತೇನೂ ಇಲ್ಲ. ಮೈಸೂರಿನಲ್ಲಿ “ಯುವರತ್ನ’ ಪ್ರೀ-ರಿಲೀಸ್ ಇವೆಂಟ್ ಇರುವುದರಿಂದ, ಮೈಸೂರಿನಲ್ಲಿರುತ್ತೇನೆ.
ಈಗಾಗಲೇ ಫ್ಯಾನ್ಸ್ ನಿಮ್ಮ ಬರ್ತ್‌ಡೇಗೆ ಒಂದಷ್ಟು ತಯಾರಿ ಮಾಡಿಕೊಂಡಿರುವುದರ ಬಗ್ಗೆ ಏನು ಹೇಳ್ತೀರಿ?
ಕೋವಿಡ್‌ನಿಂದಾಗಿ ಈ ಬಾರಿಯೂ ಬರ್ತ್‌ಡೇ ಸೆಲೆಬ್ರೆಷನ್ ಮಾಡೋದು ಬೇಡ ಅಂತ ಅನೇಕ ಸಲ ಫ್ಯಾನ್ಸ್‌ಗೆ ಹೇಳಿದ್ದೇನೆ. ಆದ್ರೆ, ಫ್ಯಾನ್ಸ್ ಪ್ರೀತಿಯಿಂದ ಅವರಾಗಿಯೇ ಏನೋ ಮಾಡುತ್ತಾರೆ ಅನ್ನೋವಾಗ, ಏನೂ ಮಾಡಲೇಬೇಡಿ ಅಂತ ಹೇಳ್ಳೋದು ಕಷ್ಟ.
“ರಾಜಕುಮಾರ’ ಸಕ್ಸಸ್ ಆ ಟೀಮ್ ಜೊತೆ “ಯುವರತ್ನ’ ಒಪ್ಪಿಕೊಳ್ಳಲು ಕಾರಣವೇ?
ಸಕ್ಸಸ್‌ಗಿಂಥ ಆ ಟೀಮ್‌ಗಾಗಿ “ಯುವರತ್ನ’ ಸಿನಿಮಾ ಒಪ್ಪಿಕೊಂಡೆ. “ರಾಜಕುಮಾರ’ ಸಿನಿಮಾದ ಬಗ್ಗೆ ಜನ ಮಾತಾಡಿದ ರೀತಿ ಕಂಡು ಖುಷಿಯಾಯಿತು. ನಮ್ಮ ಕಾಂಬಿನೇಷನ್ ಅನ್ನೋದಕ್ಕಿಂತ ನಿರ್ದೇಶಕ ಸಂತೋಷ್, “ಹೊಂಬಾಳೆ ಫಿಲಂಸ್’ ಜೊತೆಗೆ ಫ್ಯಾಮಿಲಿ ಥರದ ಒಂದು ಸಂಬಂಧ ಬೆಳೆದುಬಿಟ್ಟಿದೆ. “ಯುವರತ್ನ’ ಸಿನಿಮಾ ವ್ಯಾಲ್ಯೂ ಬಹಳ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡೆ.
ಈ ವರ್ಷ ಥಿಯೇಟರ್‌ನಲ್ಲಿ ನಿಮ್ಮ ಎಷ್ಟು ಸಿನಿಮಾ ನಿರೀಕ್ಷಿಸಬಹುದು?
ಸದ್ಯ “ಯುವರತ್ನ’ ರಿಲೀಸ್‌ಗೆ ರೆಡಿಯಿದೆ. ಅದಾದ ನಂತರ “ಜೇಮ್ಸ್’ ರಿಲೀಸ್ ಆಗಲಿದೆ. ಈ ವರ್ಷ ಕನಿಷ್ಟ ಎರಡು ಸಿನಿಮಾಗಳಾದ್ರೂ ರಿಲೀಸ್ ಆಗಬೇಕು ಅನ್ನೋ ಪ್ಲಾನ್ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಲೈನ್ ನಲ್ಲಿರುವುದರಿಂದ, ಇನ್ನು ಮುಂದೆ ಇದನ್ನೇ ಮುಂದುವರೆಸಿಕೊಂಡು ಹೋಗುವ ಯೋಚನೆ ಇದೆ.
ನಿಮ್ಮ ಮುಂಬರುವ ಸಿನಿಮಾಗಳ ಬಗ್ಗೆ ಹೇಳಬಹುದೇ?
ಸದ್ಯ “ಜೇಮ್ಸ್’ ಶೂಟಿಂಗ್ ಅರ್ಧದಷ್ಟು ಮುಗಿದಿದೆ. ಅದಾದ ನಂತರ “ಹೊಂಬಾಳೆ ಫಿಲಂಸ್’ನಲ್ಲಿ ಮತ್ತೂಂದು ಸಿನಿಮಾ ಇದೆ. ದಿನಕರ್ ತೂಗುದೀಪ್, ಕೃಷ್ಣ ಹೀಗೆ ಕೆಲವರ ಸಿನಿಮಾ ಲೈನಪ್‌ನಲ್ಲಿ ಇದೆ. ಈ ಬಗ್ಗೆ ಒಂದಷ್ಟು ಮಾತುಕತೆ ನಡೆಯುತ್ತಿದೆ. ಯಾವುದು ಯಾವಾಗ ಶುರುವಾಗುತ್ತೆ ಅನ್ನೋದು ಈಗಲೇ ಹೇಳಲಾಗದು.
ನಿಮ್ಮ ಬ್ಯಾನರ್‌ನಲ್ಲಿ ನೀವು ಹೀರೋ ಆಗಿ ಮಾಡುವ ಸಿನಿಮಾ ಯಾವಾಗ?
ಈಗಿನ ಮಟ್ಟಿಗೆ ಹೇಳ್ಳೋದಾದ್ರೆ, ನನ್ನ ಬ್ಯಾನರ್‌ನಲ್ಲಿ ನನ್ನ ಸಿನಿಮಾ ಯಾವಾಗ ಅಂಥ ನನಗೂ ಗೊತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳು ಇರೋದ್ರಿಂದ, ನನ್ನ ಬ್ಯಾನರ್‌ನಲ್ಲಿ ಸಿನಿಮಾ ಮಾಡೋದಕ್ಕೆ ಸಮಯ ಸಿಗುತ್ತಿಲ್ಲ. ಮೊದಲು ಅಂದುಕೊಂಡಂತೆ ಆಗಿದ್ದರೆ, ನನ್ನ ಸಿನಿಮಾ ಕೆಲಸ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಗ್ಯಾಪ್ ಸಿಕ್ಕರೆ ಮಾಡಬಹುದು.
ಲಾಕ್‌ಡೌನ್ ಅನುಭವ ಹೇಗಿತ್ತು?
ಲಾಕ್‌ಡೌನ್‌ನಲ್ಲಿ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಿತ್ತು.ಈ ಟೈಮಲ್ಲಿ ಟಿವಿ ನೋಡುತ್ತಿದ್ದೆ. ಅಡುಗೆ ಮಾಡುತ್ತಿದ್ದೆ. ನಾನು ಮೊದಲಿನಿಂದಲೂ ಸಿಕ್ಕಾಪಟ್ಟೆ ಫುಡ್ಡಿ. ಪಕ್ಕಾ ನಾನ್ ವೆಜ್. ಹಾಗಾಗಿ, ಯೂ- ಟ್ಯೂಬ್ ನೋಡಿಕೊಂಡು ಅಡುಗೆ ಮಾಡೋದನ್ನ ಕಲಿತೆ. ಫ್ಯಾಮಿಲಿ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಂತಾಯಿತು. ಲಾಕ್‌ಡೌನ್ ಮುಗಿದ ಮೇಲೆ ಸಿಕ್ಕಾಪಟ್ಟೆ ಖುಷಿಯಾಯ್ತು.
ನಿಮ್ಮ ಬ್ಯಾನರ್ನ ಮುಂದಿನ ಸಿನಿಮಾಗಳ ರಿಲೀಸ್ ಥಿಯೇಟರ್‌ನಲ್ಲೊ, ಓಟಿಟಿಯಲ್ಲೊ?
ಮುಂದಿನ ನನ್ನ ಸಿನಿಮಾಗಳು ಥಿಯೇಟರ್‌ನಲ್ಲೋ, ಓಟಿಟಿಯಲ್ಲೋ ರಿಲೀಸ್ ಅಂಥ ಈಗಲೇ ಹೇಳ್ಳೋದು ಕಷ್ಟ. ಅದು ಬೇರೆ ಬೇರೆ ಫ್ಯಾಕ್ಟರ್‌ಗಳ ಮೇಲೆ ನಿಂತಿದೆ. ಕೆಲವು ಎಕ್ಸ್‌ಪೆರಿಮೆಂಟ್ ಸಿನಿಮಾಗಳು ಸಿಂಗಲ್ ಸ್ಕ್ರೀನ್‌ನಲ್ಲಿ ರಿಲೀಸ್ ಮಾಡೋದು ಕಷ್ಟ. ಏಕೆಂದರೆ, ಅಲ್ಲಿ ಖರ್ಚು ಜಾಸ್ತಿ ಆಗುತ್ತದೆ. ಆ ಬಜೆಟ್‌ನಲ್ಲಿ ಖರ್ಚು ನೀಗಿಸುವುದು ಕಷ್ಟ. ಹಾಗಾಗಿ ಆ ತರಹದ ಸಿನಿಮಾಗಳಿಗೆ ಓಟಿಟಿ ಹೆಚ್ಚು ಸೂಕ್ತ. ಒಟ್ಟಿನಲ್ಲಿ ಸಮಯ-ಸಂದರ್ಭ ಮತ್ತು ಸಿನಿಮಾದ ಸ್ಟ್ರೆಂಥ್ ಮೇಲೆ ನಾವು ಅದನ್ನ ಡಿಸೈಡ್ ಮಾಡಬೇಕಾಗುತ್ತದೆ. ಈ ಹಿಂದೆ ಲಾಕ್‌ಡೌನ್ ಇದ್ದಿದ್ದರಿಂದ, ಥಿಯೇಟರ್ ಗಳಿಲ್ಲದ ಕಾರಣ, ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಬೇಕಾಯ್ತು. ಮುಂದೆ ಹಾಗೆಯೇ ಮಾಡಬೇಕು ಅಂತೇನಿಲ್ಲ. ಥಿಯೇಟರ್, ಓಟಿಟಿ ಎರಡಕ್ಕೂ ಸಿನಿಮಾ ಮಾಡುವ ಯೋಚನೆಯಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.