ಶಿವರಾತ್ರಿಗೆ ಶಿವಣ್ಣನ ಭರ್ಜರಿ ಗಿಫ್ಟ್…ಹ್ಯಾಟ್ರಿಕ್ ಹೀರೋನ 125ನೇ ಸಿನಿಮಾ ಘೋಷಣೆ
Team Udayavani, Mar 11, 2021, 2:11 PM IST
ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಬಳಗಕ್ಕೆ ಶಿವರಾತ್ರಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಅವರ 125ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಚಂದನವನದಲ್ಲಿ ನೂರು ಸಿನಿಮಾಗಳನ್ನು ಪೂರೈಸಿ 125 ನೇ ಚಿತ್ರಕ್ಕೆ ಶಿವಣ್ಣ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಹೊಸ ಸಿನಿಮಾ ಬಗ್ಗೆ ಕೌತುಕದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಸಿಹಿ ಸುದ್ದಿ ನೀಡಿದ್ದಾರೆ.
ಶಿವಣ್ಣ ನಿನ್ನೆ (ಬುಧವಾರ) ಫೇಸ್‍ಬುಕ್ ವಿಡಿಯೋ ಮೂಲಕ ತಮ್ಮ ಹೊಸ ಸಿನಿಮಾ ಘೋಷಣೆಯ ಸುಳಿವು ನೀಡಿದ್ದರು. ಅದರಂತೆ ಇಂದು ಮುಂಜಾನೆ ತಮ್ಮ125ನೇ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಗಾಳಿಪಟ-2 ಫೋಟೋ ಹಂಚಿಕೊಂಡ ಗಣಿ ಟೀಮ್
‘ವೇದ’ನ ವೇಷದಲ್ಲಿ ಹ್ಯಾಟ್ರಿಕ್ ಹೀರೋ
ಇನ್ನು ಶಿವರಾಜ್ ಕುಮಾರ್ ಅವರ 125 ಸಿನಿಮಾ ಶೀರ್ಷಿಕೆ ‘ವೇದ’ ಎಂದು ಇಡಲಾಗಿದೆ. ಭಜರಂಗಿ ಸಿನಿಮಾ ಖ್ಯಾತಿಯ ಎ ಹರ್ಷ ‘ವೇದ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.
ಖಡಕ್ ಲುಕ್ :
ಇಂದು ರಿಲೀಸ್ ಆಗಿರುವ ‘ವೇದ’ ಚಿತ್ರದ ಲುಕ್ ಖಡಕ್ ಆಗಿದೆ. ಮುಖದ ಮೇಲೆ ಬಿಳಿ ಗಡ್ಡ ಹೊತ್ತು ಕಾಣಿಸಿಕೊಂಡಿರುವ ಶಿವಣ್ಣನ ಖದರ್ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ. ‘ವೇದ’ನ ಲುಕ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಕಥೆ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲವಾದರೂ, ಇದು 1960’ರ ಬ್ಯಾಕ್‍ಡ್ರಾಪ್ ಕಥೆ ಹೊಂದಿದೆ ಎನ್ನುವುದು ಸಿನಿಮಾ ಫಸ್ಟ್ ಲುಕ್‍ನಲ್ಲಿ ಚಿತ್ರತಂಡ ಸುಳಿವು ನೀಡಿದೆ.
ಇನ್ನು ಶೀಘ್ರದಲ್ಲೇ ಶಿವರಾಜ್ ಕುಮಾರ್ ಅವರು ‘ಭಜರಂಗಿ 2’ ಸಿನಿಮಾ ತೆರೆ ಮೇಲೆ ಬರಲಿದೆ. ಈ ಚಿತ್ರಕ್ಕೂ ಎ ಹರ್ಷ ಅವರ ನಿರ್ದೇಶನ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.