ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ಧಾವಿಸೋಣ : ಶಿವಣ್ಣ ಕರೆ
‘ದೇವರಿಗೇ ಕಷ್ಟಬಂದಿದೆ, ನಾವು ನೋಡಿಕೊಂಡು ಸುಮ್ಮನಿರುವುದಿಲ್ಲ’ ; ಉತ್ತರ ಕರ್ನಾಟಕ ನೆರೆಪೀಡಿತರ ಕುರಿತು ಶಿವಣ್ಣ ಭಾವನಾತ್ಮಕ ಟ್ವೀಟ್
Team Udayavani, Aug 8, 2019, 11:15 PM IST
ಬೆಂಗಳೂರು: ಉತ್ತರ ಕರ್ನಾಟಕದ ಬಹುಭಾಗ ಭೀಕರ ನೆರೆಗೆ ತತ್ತರಿಸುತ್ತಿದೆ. ಅಲ್ಲಿನ ಜನರಲ್ಲಿ ಕ್ಷಣಕ್ಷಣವೂ ಆತಂಕ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಸ್ತ ಕರ್ನಾಟಕವೇ ಉತ್ತರ ಕರ್ನಾಟಕದ ಸಂಕಷ್ಟಕ್ಕೆ ಬೆಂಬಲವಾಗಿ ನಿಲ್ಲುತ್ತಿದೆ.
ಇದಕ್ಕೆ ಪೂರಕವಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೂ ಸಹ ಉತ್ತರ ಕರ್ನಾಟಕದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ ಮಾತುಗಳನ್ನಾಡಿದ್ದಾರೆ.
‘ಉತ್ತರ ಕರ್ನಾಟಕದ ಜನ ಭಾವನಾತ್ಮಕವಾಗಿ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಚಿತ್ರರಂಗದ ಮೇಲೆ ಅವರು ಇಟ್ಟಿರುವ ಅಭಿಮಾನ ದೊಡ್ಡದು. ಅಭಿಮಾನಿ ದೇವರುಗಳೇ ಇವತ್ತು ಕಷ್ಟದಲ್ಲಿದ್ದಾರೆ. ದೇವರಿಗೆ ಕಷ್ಟ ಬಂದಾಗ ನಾವು ಸುಮ್ಮನಿರಲಾಗುವುದಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ, ನಾನು ಮಾತ್ರವಲ್ಲ ಇಡೀ ಚಿತ್ರರಂಗವೇ ನಿಮ್ಮ ಜೊತೆಗಿರುತ್ತದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಧೈರ್ಯ ಕಳೆದುಕೊಳ್ಳದಿರಿ’ ಎಂಬ ಮಾತುಗಳನ್ನು ಶಿವಣ್ಣ ಅವರು ಆಡಿದ್ದಾರೆ.
ಮಾತ್ರವಲ್ಲದೆ, ತಾನು ಚಿಕಿತ್ಸೆಗಾಗಿ ಲಂಡನ್ ಗೆ ಹೋಗಿದ್ದ ಕಾರಣ ಈ ವಿಚಾರಕ್ಕೆ ಪ್ರತಿಕ್ರಿಯಿಸಲು ಸ್ವಲ್ಪ ತಡವಾಗಿದ್ದಕ್ಕೆ ಅಭಿಮಾನಿಗಳ ಕ್ಷಮೆಯನ್ನೂ ಅವರು ಕೋರಿದ್ದಾರೆ.
ಉತ್ತರ ಕರ್ನಾಟಕದ ಜನರ ನೆರವಿಗೆ ನಿಂತ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್.!@Shivarajkumar_ @NimmaShivanna #UttaraKarnatakafloods #PrayForUttaraKarnataka #Shivarajkumar #Shivanna pic.twitter.com/6eAlewx7H7
— Dr.Shivarajkumar (@Shivarajkumar_) August 8, 2019
ಉತ್ತರ ಕರ್ನಾಟಕದ ಜೊತೆ ಸದಾ ನಾವಿದ್ದೇವೆ. ಬನ್ನಿ ಎಲ್ಲರೂ ನೆರವಿನ ಹಸ್ತ ಕೈ ಚಾಚೋಣ#UttaraKarnataka #Rain #Pravaha #PrayForUttarKarnataka pic.twitter.com/vD9o9s37AZ
— Dr.Shivarajkumar (@Shivarajkumar_) August 8, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.