Kannada actress; ಲೀಲಾವತಿ ದೇಗುಲ ಡಿ. 5 ರಂದು ಲೋಕಾರ್ಪಣೆ


Team Udayavani, Dec 3, 2024, 6:25 AM IST

1-leela

ನೆಲಮಂಗಲ: ಕನ್ನಡದ ಮೇರು ನಟಿ, ಚರ್ತುಭಾಷಾ ಕಲಾವಿದೆ ಡಾ| ಲೀಲಾವತಿ ಅವರ ಪುತ್ರ ನಟ ವಿನೋದ್‌ರಾಜ್‌ ಅವರು ತಾಯಿ ಕೊನೆಯುಸಿರೆಳೆದ ಕರ್ಮಭೂಮಿಯಲ್ಲಿ ಸ್ವಸಂಪಾದನೆಯ 1 ಕೋಟಿ ರೂ. ವೆಚ್ಚದಲ್ಲಿ ಮಾತೆಯ ಮಂದಿರವನ್ನು ನಿರ್ಮಿಸಿದ್ದು, ಡಿ. 5ರಂದು ಲೋಕಾರ್ಪಣೆಯಾಗಲಿದೆ.

ತಾಲೂಕಿನ ಸೋಲದೇವನಹಳ್ಳಿಯಲ್ಲಿ (ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು ರಸ್ತೆ) 1 ಎಕರೆಯಲ್ಲಿ ಅಪರೂಪದ ಚಿತ್ರಸಂಪುಟಗಳ ಕಲಾತ್ಮಕವಾದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಒಳ ಆವರಣದ ಸುತ್ತಲೂ ಅಪರೂಪದ 62 ಚಿತ್ರಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕ ರಂಗಮಂದಿರವಿದೆ. ಸಣ್ಣಪುಟ್ಟ ರಂಗ ಪ್ರದರ್ಶನ, ಸಭೆ ಸಮಾರಂಭಕ್ಕೆ ಇಲ್ಲಿ ಅವಕಾಶವಿದೆ. ನೆಲಮಂಗಲ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಈ ಮಂದಿರವಿದ್ದು ನಿತ್ಯ ಮಂದಿರ ವೀಕ್ಷಣೆಗೆ ಬರುವವರಿಗಾಗಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ತೆರೆದಿರುತ್ತದೆ. ವಸತಿ ವ್ಯವಸ್ಥೆಗಾಗಿ ಅಲ್ಲಿಯೇ ಸುಸಜ್ಜಿತ ಎರಡು ಕೊಠಡಿಗಳು ಹಾಗೂ ಉದ್ಯಾನವನವನ್ನು ನಿರ್ಮಿಸಲಾಗುತ್ತಿದೆ ಎಂದು ಡಾ| ಲೀಲಾವತಿ ಪುತ್ರ ನಟ ವಿನೋದ್‌ರಾಜ್‌ ವಿವರಿಸಿದ್ದಾರೆ.

ಕಲಾವಿದರಿಗೆ ಸಹಾಯಧನ
ಲೀಲಾವತಿ ಅಮ್ಮನವರು ಯಕ್ಷಗಾನದಲ್ಲಿ ಪಾರಂಗತರು, ಸಂಗೀತ, ಸಾಕು ಪ್ರಾಣಿ ಪ್ರಿಯರು. ಅದಮ್ಯ ಜೀವನ ಪ್ರೀತಿಯ ಲೀಲಮ್ಮರಿಗೆ ಕೃಷಿ ಎಂದರೆ ಪ್ರೀತಿ, ವಿಶೇಷ ತಳಿಗಳ ಪರಿಷ್ಕರಣೆ ನಡೆಸಿದ ಅಮ್ಮನಿಗೆ ಪಶು ಸಂಗೋಪನೆ, ಗ್ರಾಮೀಣ ಪ್ರಕೃತಿ ಮಡಿಲ ಬದುಕು ಆಪ್ಯಾಯಮಾನವಾದದ್ದು. ಅವರ ಆಕಾಂಕ್ಷೆಯಂತೆ ಸೋಲದೇವನಹಳ್ಳಿಯಲ್ಲಿ ಜನ, ಜಾನು ವಾರು ಆಸ್ಪತ್ರೆ ನಿರ್ಮಿಸಿ ಸೇವೆಗೆ ಸಮರ್ಪಿಸಿದ್ದಾರೆ. ಬಡ ಸಣ್ಣಪುಟ್ಟ ಕಲಾವಿದರಿಗೆ ಯಾರ ಗಮನಕ್ಕೂ ಬಾರದೆ ಮಾಸಾಶನದ ರೀತಿಯಲ್ಲಿ ಪ್ರತೀ ತಿಂಗಳು ಸಹಾಯಧನ ಕಳಿಸುತ್ತಾರೆ ವಿನೋದ್‌ರಾಜ್‌. ತಮಿಳುನಾಡಿನ ಪುದುಪ್ಯಾಕಂ ಗ್ರಾಮದಲ್ಲಿಯೂ 30 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಅಭಿಮಾನದಿಂದ ಹೇಳುತ್ತ ಅಮ್ಮನ ಋಣ ಸಂದಾಯಕ್ಕೆ ನನಗೆ ಸಿಕ್ಕ ಅವಕಾಶವಿದು ಎಂದರು.

ಟಾಪ್ ನ್ಯೂಸ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1-104

Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!

fadnavis

Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

1-raga

UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ

PM Modi

Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra-3

BJP Rift; ಆರ್. ಅಶೋಕ್ ದೆಹಲಿಗೆ: ನನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ವಿಜಯೇಂದ್ರ

eart

Earthquake; ತೆಲಂಗಾಣದ ಮುಲುಗುವಿನಲ್ಲಿ ಭೂಕಂಪನ: 5.3 ತೀವ್ರತೆ

DKShivakumar

Power sharing: ನಮ್ಮಲ್ಲಿ ಒಪ್ಪಂದ ನಿಜ: ಡಿ.ಕೆ.ಶಿವಕುಮಾರ್‌ ಪ್ರಥಮ ಹೇಳಿಕೆ

ED-Raid

MUDA Scam: ಸಿದ್ದರಾಮಯ್ಯ ಪತ್ನಿ ಸಹಿತ ಸಾವಿರ ಮುಡಾ ನಿವೇಶನ ಅಕ್ರಮ ಹಂಚಿಕೆ: ಇ.ಡಿ.

Paddy-Lose

Cyclone Fengal: ಚಂಡಮಾರುತ ಪರಿಣಾಮ: ರಾಜ್ಯದ ಹಲವೆಡೆ ತೀವ್ರ ಮಳೆಗೆ ಭಾರೀ ಬೆಳೆ ಹಾನಿ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

1-ckm

Chikkamagaluru: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ

3

Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ‌ ಕಾಲು ನಜ್ಜುಗುಜ್ಜು

2

Belthangady ಕೊಳಚೆ ಮತ್ತೆ ಸೋಮಾವತಿಗೆ!

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1

Editorial: ಸಿಇಟಿ ಅಕ್ರಮ ಸೀಟ್‌ ಬ್ಲಾಕಿಂಗ್‌ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.