ಮತ್ತೆ ಅಭಿನಯಕ್ಕೆ ಸಜ್ಜಾದ ರಾಗಿಣಿ…‘ಕರ್ವಾ 3’ ಚಿತ್ರದಲ್ಲಿ ತುಪ್ಪದ ಬೆಡಗಿ
2020 ಎಲ್ಲರ ಪಾಲಿಗೆ ಕಷ್ಟಕರವಾಗಿತ್ತು. ಕೆಲವೊಬ್ಬರು ಇದನ್ನು ಇನ್ನೂ ಕಠಿಣಗೊಳಿಸಿದರು.
Team Udayavani, Feb 25, 2021, 1:24 PM IST
ಬೆಂಗಳೂರು : ಚಂದನವನದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಂಕಷ್ಟದ ಸಂಕೋಲೆ ತೊಡೆದು ಮತ್ತೆ ಮುಖಕ್ಕೆ ಬಣ್ಣ ಹಾಕೋಕೆ ರೆಡಿಯಾಗಿದ್ದಾರೆ. ಈ ವರ್ಷದ (2021) ಮೊದಲ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ 10 ವರ್ಷಗಳನ್ನು ಪೂರೈಸಿರುವ ರಾಗಿಣಿ ಹಲವು ಬಗೆಯ ಪಾತ್ರ ಪೋಷಣೆ ಮೂಲಕ ಕನ್ನಡ ಸಿನಿರಸಿಕರನ್ನು ರಂಜಿಸಿದವರು. ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಂತಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಈ ನಟಿಯ ಹೆಸರು ತಳುಕುಹಾಕಿ ಕೊಂಡಿದೆ. ಈ ವಿವಾದದಲ್ಲಿ ಜೈಲು ವಾಸ ಅನುಭವಿಸಿ ಹೊರಬಂದಿರುವ ರಾಗಿಣಿ, ಸದ್ಯ ಮತ್ತೆ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಹೊಸ ನಿರ್ದೇಶಕ ವಿಶಾಲ್ ಶೇಖರ್ ಅವರ ‘ಕರ್ವಾ 3’ ಸಿನಿಮಾದಲ್ಲಿ ಅಭಿನಯಿಸಲು ರಾಗಿಣಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ತಿಲಕ್ ಹಾಗೂ ಮೇಘನಾ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಹಾಗೂ ಮೇಘನಾ ಅವರ ಪಾತ್ರಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ರಾಗಿಣಿ, ನಾನು ಪಾತ್ರಗಳಿಗಿಂತ ಕಥೆಗೆ ಪ್ರಾಮುಖ್ಯತೆ ನೀಡುತ್ತೇನೆ. ಮೊದಲಿಂದಲೂ ಕಥೆ ನಂಬಿಕೊಂಡು ಬಂದಿರುವುದರಿಂದ ಮುಖ್ಯ ನಟಿ ಇಲ್ಲವೆ ಸಹನಟಿ ಎನ್ನುವುದು ನನಗೆ ಮುಖ್ಯವಲ್ಲ ಎಂದಿದ್ದಾರೆ.
2020 ಎಲ್ಲರ ಪಾಲಿಗೆ ಕಷ್ಟಕರವಾಗಿತ್ತು. ಕೆಲವೊಬ್ಬರು ಇದನ್ನು ಇನ್ನೂ ಕಠಿಣಗೊಳಿಸಿದರು. ಈ ಅಗ್ನಿಪರೀಕ್ಷೆಯಲ್ಲಿ ನಾನು ಮತ್ತುಷ್ಟು ಗಟ್ಟಿ ಹಾಗೂ ವಿಜಯಶಾಲಿಯಾಗಿ ಹೊರಹೊಮ್ಮಿದ್ದೇನೆ ಎಂದಿದ್ದಾರೆ ರಾಗಿಣಿ. ಇನ್ನು ‘ಕರ್ವಾ 3’ ಸಿನಿಮಾ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ ಚಿತ್ರೀಕರಣಕ್ಕೆ ರಾಗಿಣಿ ಹಾಜರಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.