Kananda Cinema; ತೆರೆಗೆ ಸಿದ್ದವಾದ ಕ್ರೈಂ ಥ್ರಿಲ್ಲರ್ ನಟ್ವರ್ ಲಾಲ್
Team Udayavani, Feb 15, 2024, 3:51 PM IST
ನಟ್ವರ್ ಲಾಲ್- ಹೀಗೊಂದು ಸಿನಿಮಾ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿ.ಲವ ಈ ಸಿನಿಮಾದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಲವ,”ಇದೊಂದು ಕ್ರೈಂ ಥ್ರಿಲ್ಲರ್, ಆ್ಯಕ್ಷನ್ ಚಿತ್ರ. ಬೆಂಗಳೂರಿನಲ್ಲಿ ನಡೆದ ನೈಜಘಟನೆ ಈ ಚಿತ್ರಕ್ಕೆ ಸ್ಫೂರ್ತಿ. ತನುಶ್ ಶಿವಣ್ಣ ಈ ಚಿತ್ರದ ನಾಯಕ. ಸೋನಾಲ್ ಮೊಂತೆರೊ ನಾಯಕಿ. ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ಸುಜಯ್ ಶಾಸ್ತ್ರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್‌ನಲ್ಲಿ ಈ ಚಿತ್ರದ ಎರಡನೇ ಭಾಗ ಬರುವ ಸುಳಿವು ಕೂಡ ನೀಡಿದ್ದೇವೆ’ ಎಂದರು.
ತನುಶ್ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ. ನಾನು ಎಂಟು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ನಿರ್ಮಾಣ ಕೂಡ ನನ್ನದೆ. ಒಂದು ಹಂತದಲ್ಲಿ ಹಣದ ಸಮಸ್ಯೆಯಿಂದಾಗಿ ಸಿನಿಮಾ ನಿಲ್ಲಿಸಿ ಬಿಡೋಣ ಅಂದುಕೊಂಡೆ. ಆದರೆ ನಾನು ನಂಬಿರುವ ಅಮ್ಮನವರ ದಯೆಯಿಂದ ಅನೇಕ ಸ್ನೇಹಿತರು ನನ್ನ ಸಹಾಯಕ್ಕೆ ಬಂದರು. ಅವರೆಲ್ಲರ ಸಹಾಯ ಹಾಗೂ ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ 23 ಬಿಡುಗಡೆಯಾಗುತ್ತಿದೆ’ ಎಂದರು.
ಸೋನಾಲ್ ಮೊಂತೆರೋ ಈ ಚಿತ್ರದ ನಾಯಕಿ. ನಂದಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ಹರಿಣಿ ಶ್ರೀಕಾಂತ್, ರಘು ರಮಣಕೊಪ್ಪ, ಕಾಕ್ರೋಜ್ ಸುಧಿ, ವಿಜಯ್ ಚೆಂಡೂರ್ ಕೂಡಾ ಮಾತನಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.