ದಾದಿಯರ ಕುರಿತಾದ ‘ಸೆಪ್ಟೆಂಬರ್ 13′ ಸಿನಿಮಾ ನ.4ಕ್ಕೆ ರಿಲೀಸ್
Team Udayavani, Oct 14, 2022, 4:10 PM IST
ಕೋವಿಡ್ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳು ಮಾಡುತ್ತಿದ್ದ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ನೋಡಿರುತ್ತೀರಿ. ಈಗ ಇದೇ ನರ್ಸ್‌ಗಳ ಸೇವೆಯನ್ನು ಕುರಿತಾದ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಸೆಪ್ಟೆಂಬರ್ 13′.
ಕೋವಿಡ್ ಸಂಕಷ್ಟದ ಸಮಯದಲ್ಲಿ ನರ್ಸ್‌ಗಳು ಎದುರಿಸಿದ ಕಷ್ಟಗಳು, ಅವರ ತ್ಯಾಗ ಮತ್ತು ಸಾಧನೆಯ ಮೇಲೆ ಬೆಳಕು ಚೆಲ್ಲಲು ಹೊರಟಿರುವ “ಸೆಪ್ಟೆಂಬರ್ 13′ ಸಿನಿಮಾ ಇದೇ ನವೆಂಬರ್ 4ರಂದು ತೆರೆಗೆ ಬರುತ್ತಿದೆ.
“ರೂಬಿ ಫಿಲಂಸ್’ ಬ್ಯಾನರ್‌ನಲ್ಲಿ ತಯಾರಾಗಿರುವ “ಸೆಪ್ಟೆಂಬರ್ 13′ ಸಿನಿಮಾಕ್ಕೆ ಐವಾನ್ ನೆಗ್ಲಿ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಯುನೆಸ್ಕೋ ಸಂಬಂಧಿಸಿದಂತೆ ಹಲವು ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ ಅನುಭವವಿರುವ, ಡಾ. ರಾಜ ಬಾಲಕೃಷ್ಣನ್ “ಸೆಪ್ಟೆಂಬರ್ 13′ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
“ಸೆಪ್ಟೆಂಬರ್ 13′ ಚಿತ್ರದಲ್ಲಿ ಶ್ರೇಯಾ ರಿಧೀಬನ್, ಚಿಂತನ್ ರಾವ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಜೈ ಜಗದೀಶ್, ವಿನಯಾ ಪ್ರಸಾದ್, ಯಮುನಾ ಶ್ರೀನಿಧಿ, ನಾಗೇಶ್ ಮಯ್ಯ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಕಲಾವಿದರು “ಸೆಪ್ಟೆಂಬರ್ 13′ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ
ಅಭಿನಯಿಸಿದ್ದಾರೆ. ಮಾಜಿ ಸಚಿವ ಯು. ಟಿ ಖಾದರ್ ಕೂಡ ಚಿತ್ರದಲ್ಲಿ ಶಾಸಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, “ಸೆಪ್ಟೆಂಬರ್ 13′ ಸಿನಿಮಾದ ಗೀತೆಯೊಂದರಲ್ಲಿ ಸುಮಾರು 100ಕ್ಕೂ ಹೆಚ್ಚು ನರ್ಸ್‌ಗಳು ಹೆಜ್ಜೆಹಾಕಿ, ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
“ಕನ್ನಡದಲ್ಲಿ ಇಲ್ಲಿಯವರೆಗೆ ಬೇರೆ ಬೇರೆ ಕ್ಷೇತ್ರದಲ್ಲಿ ಕಷ್ಟಪಟ್ಟವರ, ಸಾಧನೆ ಮಾಡಿದವರ ನೂರಾರು ಸಿನಿಮಾಗಳು ಬಂದಿವೆ. ಆದರೆ ನರ್ಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದವರ, ಸಾಧಕರ ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ಹಾಗಾಗಿ ನರ್ಸ್‌ಗಳ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಪರಿಚಯಿಸುವುದಕ್ಕಾಗಿ ಈ ಸಿನಿಮಾ ನಿರ್ಮಿಸಿದ್ದೇವೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಜೊತೆಗೊಂದು ಸಂದೇಶ ಇರುವಂಥ ಸಿನಿಮಾ ಇದಾಗಿದೆ’ ಎನ್ನುವುದು ಚಿತ್ರತಂಡದ ಒಕ್ಕೊರಲ ಮಾತು.
ಈಗಾಗಲೇ “ಸೆಪ್ಟೆಂಬರ್ 13′ ಸಿನಿಮಾದ ಮೊದಲ ಪೋಸ್ಟರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸದ್ಯ ತನ್ನ ಪೋಸ್ಟರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ “ಸೆಪ್ಟೆಂಬರ್ 13′ ಚಿತ್ರವನ್ನು ಇದೇ ನವೆಂಬರ್ 4ರಂದು ತೆರೆಮೇಲೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಬಹಳ ಸಮಯದ ನಂತರ ವೈದ್ಯರು ಮತ್ತು ನರ್ಸಗಳ ವೃತ್ತಿ ಜೀವನವನ್ನು ತೆರೆಮೇಲೆ ತರಲು ಹೊರಟಿರುವ “ಸೆಪ್ಟೆಂಬರ್ 13′ ಥಿಯೇಟರ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಮತ್ತು ಗಮನ ಸೆಳೆಯಲಿದೆ ಎಂಬುದು ನವೆಂಬರ್ ಮೊದಲವಾರ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.