ಅಡೆತಡೆಗಳನ್ನು ದಾಟಿದ ‘ಗ್ರೂಫಿ’: ಹೊಸಬರ ಮುಖದಲ್ಲಿ ಮುಗುಳು ನಗು
Team Udayavani, Sep 16, 2021, 11:34 AM IST
ಕೊರೊನಾ ಮೂರನೇ ಅಲೆಯ ಆತಂಕ, ಥಿಯೇಟರ್‌ಗಳಲ್ಲಿ ಶೇಕಡ ಐವತ್ತರಷ್ಟು ಮಾತ್ರ ಪ್ರೇಕ್ಷಕರಿಗೆ ಪ್ರವೇಶಾವಕಾಶ ಹೀಗೆ ಸಾಲು ಸಾಲು ಸವಾಲುಗಳನ್ನು ಮುಂದಿಟ್ಟುಕೊಂಡು ತೆರೆಗೆ ಬಂದಿದ್ದ ಬಹುತೇಕ ಹೊಸ ಪ್ರತಿಭೆಗಳ “ಗ್ರೂಫಿ’
ಚಿತ್ರ ಸದ್ದಿಲ್ಲದೆ 25 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಗ್ರೂಫಿ’ ಬಿಡುಗಡೆ ಬಳಿಕ ಸಿಗುತ್ತಿರುವ ಪ್ರತಿಕ್ರಿಯೆ, ಬೆಳವಣಿಗೆಗಳ ಬಗ್ಗೆ ಮಾತನಾಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕೆ.ಜಿ ಸ್ವಾಮಿ, “ನಮ್ಮ ಮುಂದೆ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳಿದ್ದರೂ, ಸಿನಿಮಾ ಚೆನ್ನಾಗಿದೆ ಎಂಬ ಭರವಸೆಯಲ್ಲಿ “ಗ್ರೂಫಿ’ಯನ್ನು ಬಿಡುಗಡೆ ಮಾಡಿದ್ದೆವು. ನಮ್ಮ ನಿರೀಕ್ಷೆಯಂತೆ “ಗ್ರೂಫಿ’ ಒಳ್ಳೆಯ ಒಪನಿಂಗ್ ಪಡೆದುಕೊಂಡು, ಆಡಿಯನ್ಸ್ ಕಡೆಯಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದವರು ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇದನ್ನೂ ಓದಿ:ಪ್ರಭುದೇವ ಜತೆಗೆ ಮಸ್ತ್ ಡ್ಯಾನ್ಸ್ ಗೆ ಪುನೀತ್ ರೆಡಿ
ಸಿನಿಮಾದ ಸಬ್ಜೆಕ್ಟ್ ಮತ್ತು ತಾಂತ್ರಿಕ ಕಾರ್ಯ ಎಲ್ಲರ ಗಮನ ಸೆಳೆಯುತ್ತಿದೆ. ರಿಸ್ಕ್ ತೆಗೆದುಕೊಂಡು ಸಿನಿಮಾ ರಿಲೀಸ್ ಮಾಡಿದ್ದಕ್ಕೆ ಒಳ್ಳೆಯ ರಿಸಲ್ಟ್ ಸಿಗುತ್ತಿದೆ. ದಿನದಿಂದ ದಿನಕ್ಕೆ ಆಡಿಯನ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೊಸಬರ ಸಿನಿಮಾಕ್ಕೆ ಆಡಿಯನ್ಸ್ ಕಡೆಯಿಂದ ಇಷ್ಟೊಂದು ಸಪೋರ್ಟ್ ಸಿಗುತ್ತಿರುವುದು ನಿಜಕ್ಕೂಖುಷಿಯ ವಿಚಾರ’ ಎಂದು ಸಂತಸ ಹಂಚಿಕೊಂಡರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡಿ.ರವಿ ಅರ್ಜುನ್, “ನಮ್ಮದು ಹೊಸಬರ ಸಿನಿಮಾವಾದರೂ, ನೋಡುಗರಿಗೆ ಹೊಸತರದ ವಿಷಯವನ್ನು ಏನಾದ್ರೂ ಸಿನಿಮಾದಲ್ಲಿ ಹೇಳಬೇಕು ಎಂಬ ಉದ್ದೇಶವಿತ್ತು. ಆ ಉದ್ದೇಶ ಈಡೇರಿದೆ. ಆಡಿಯನ್ಸ್ ಮಾತ್ರವಲ್ಲದೆ, ಸಿನಿಮಾರಂಗದ ಅನೇಕರು “ಗ್ರೂಫಿ’ಯನ್ನು ಮೆಚ್ಚಿಕೊಂಡಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಿದರೆ, ನಿಧಾನವಾಗಿ ಯಾದರೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬುದು ನಮಗೆ ಗೂತ್ತಾಗಿದೆ’ ಎಂದರು.
ವೇದಿಕೆಯಲ್ಲಿ ಹಾಜರಿದ್ದ ಫಿಲಂ ಚೇಂಬರ್‌ನ ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್ “ಗ್ರೂಫಿ’ ಚಿತ್ರದ ಬಗ್ಗೆ ಮತ್ತು ತಂಡದ ಪರಿಶ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಚಿತ್ರದ ನಾಯಕ ಆರ್ಯನ್ ಸೇರಿದಂತೆ ಕಲಾವಿದರು, ತಂತ್ರಜ್ಞರು ಹಾಜರಿದ್ದು, ಚಿತ್ರದ ಅನುಭವಗಳ ನ್ನು ಹಂಚಿಕೊಂಡರು.
ಒಂದೆಡೆ “ಗ್ರೂಫಿ’ಗೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡಕ್ಕೆ ಖುಷಿತಂದರೆ, ಮತ್ತೂಂದೆಡೆ ಕೆಲವು ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷೆಯ ಸಿನಿಮಾಗಳಿಂದಾಗಿ ನಮ್ಮ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್ ಗಳು ಸಿಗುತ್ತಿಲ್ಲ ಎಂಬ ಬೇಸರವನ್ನೂ ಇದೇ ವೇಳೆ ಚಿತ್ರತಂಡ ರೆ ಹಾಕಿದೆ. ಆದರೂ ಈ ಎಲ್ಲ ಅಡೆತಡೆಗಳ ನಡುವೆಯೂ ಈ ವಾರದಿಂದ ಮತ್ತಷ್ಟು ಕೇಂದ್ರಗಳಲ್ಲಿ “ಗ್ರೂಫಿ’ಯನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೂಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.