ಕನ್ನಡ ಎಂದರೆ ಅಪ್ಪಾಜಿಗೆ ಹೆತ್ತವರಷ್ಟೇ ಅಕ್ಕರೆ


Team Udayavani, Oct 19, 2017, 4:17 PM IST

RAJ-1.jpg

ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಹಾಗೂ ಸದ್ಭಾವನೆಯನ್ನು ಹರಡಬಲ್ಲವರು ರಾಜಕುಮಾರ್‌ ಒಬ್ಬರೇ – ಕುವೆಂಪು

ರಾಜ ಮಹಾರಾಜರು, ಸಂತರು, ಕವಿಗಳು ಹಾಗೂ ಹಲವಾರು ಜನರಿಂದ ಸಮೃದ್ಧಗೊಂಡಿರುವ 5000 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಸಂಸ್ಕೃತಿ ನಮ್ಮದು. ಅದರಂತೆಯೇ ಅಪ್ಪಾಜಿ ತಮ್ಮ ಚಿತ್ರಗಳು ಮೂಲಕ ಜನಿರೆಗ ಅರ್ಥಗರ್ಭಿತಾದ ಸಂದೇಶಗಳನ್ನು ತಿಳಿಸಲು ಬಯಸಿದ್ದಾರೆ. ಅವರಿಗೆ ಬಂದ ಎಲ್ಲಾ ಚಿತ್ರಗಳನ್ನು ಅವರು ಕೈಚಾಚಿ ಸ್ವೀಕರಿಸುತ್ತಿರಲಿಲ್ಲ; ಬದಲಾಗಿ ತಾವು ಪರದೆಯ ಮೇಲೆ ಹೇಳಬೇಕಾಗಿದ್ದ ಪ್ರತಿಯೊಂದು ಶಬ್ದದ ಬಗ್ಗೆಯೂ ಗಹನವಾಗಿ ಆಲೋಚಿಸಿ, ಆ ಪಾತ್ರವನ್ನು ಮಾಡುವುದರ ಉಭಯತೆಗಳನ್ನು ತೂಗಿ ನೋಡುತ್ತಿದ್ದರು. ಒಂದು ರೀತಿಯಲ್ಲಿ ಅವರು ಸಾತ್ವಿಕ ನಟರಾಗಿದ್ದರು. ಯಾವುದೇ ಭಾಷೆಯಲ್ಲಿ ನಟಿಸುವ ಸಾಮರ್ಥಯ ಹಾಗೂ ಅವಕಾಶಗಳನ್ನು ಅವರು ಹೊಂದಿದ್ದರೂ, ಪ್ರಜ್ಞಾಪೂರ್ವಕವಾಗಿ ಇದರಿಂದ ಹೊರಗಿದ್ದು ಕನ್ನಡದಲ್ಲಿಯೇ ಬೇರೂರಿದ್ದರು. ಆ ದಿನಗಳಲ್ಲಿ ಇಂತಹ ಒಂದು ನಿರ್ಧಾರ ಕೈಗೊಳ್ಳುವುದು ಕಷ್ಟವಾಗಿತ್ತು. ಇದು ಅವರಿಗಿದ್ದ ಭಾಷಾಪ್ರೇಮವನ್ನು  ಸೂಚಿಸುತ್ತದೆ ಹಾಗೂ ಇದು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಕುವೆಂಪು ಅವರ ಮಾತುಗಳು ನನಗೆ ನೆನಪಿಗೆ ಬರುತ್ತವೆ. “ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಹಾಗೂ ಸದ್ಭಾವನೆಯನ್ನು ಹರಡಬಲ್ಲವರು ರಾಜಕುಮಾರ್‌ ಒಬ್ಬರೇ’.

  ಕರ್ನಾಟಕದಲ್ಲಿ ಎಲ್ಲಾ ಕಡೆ ಕನ್ನಡವನ್ನೇ ಮಾತನಾಡಿದರೂ, ಪ್ರತಿ ಪ್ರಾಂತ್ಯವೂ ತನ್ನದೇ ಆದ ಉಚ್ಛಾರಣೆ ಹಾಗೂ ವಿಶಿಷ್ಟತೆಯ ಸೊಗಡಿರುವ ಆವೃತ್ತಿಯನ್ನು ಹೊಂದಿದೆ. ಅವರಾಡುವ ಕನ್ನಡ ಕೇಳಿದ ಕೂಡಲೇ ಅವರು ಯಾವ ಕಡೆಯವರೆಂದು ಹೇಳ್ಳೋದು ಸುಲಭ. ಇಷ್ಟೊಂದು ಸೊಗಡಿರೋ ಕನ್ನಡಕ್ಕೆ ಅಪ್ಪಾಜಿ ತಮ್ಮದೇ ಆದ ಒಂದು ಛಾಪನ್ನು, ಸಾಮಾನ್ಯವಾಗಿ ರಾಜಕುಮಾರ್‌ ಕನ್ನಡವೆಂದು ಕರೆಯಲಾಗುವ ಕನ್ನಡವನ್ನು ಸೇರಿಸಿದರೆಂದು ರಾಘಣ್ಣ ಹೇಳುತ್ತಾರೆ. ಈ ಆಡುಭಾಷೆಯನ್ನು ರಾಜ್ಯದೆಲ್ಲೆಡೆ ತಮ್ಮ ಭಾಷೆಯೆಂದು ಜನ ಪರಿಗಣಿಸಿದರು. ಇಂತಹ ಒಂದು ವ್ಯಾಪಕ ಅಂಗೀಕಾರಕ್ಕೆ, ಅಪ್ಪಾಜಿಗೆ ಭಾಷೆಯ ಮೇಲಿದ್ದ ಪ್ರೀತಿ ಹಾಗೂ ಅದನ್ನು ಅವರು ಅಷ್ಟು ಸ್ಪುಟವಾಗಿ ಹಾಗೂ ಶುದ್ಧವಾಗಿ ಮಾತನಾಡುತ್ತಿದ್ದದ್ದೇ ಕಾರಣ. ಅದು ಹೇಗೇ ಇರಲಿ, ಅಪ್ಪಾಜಿಗೆ ಕನ್ನಡದ ಆದ್ಯತೆ ಪರಿವರ್ತಿಸಲಾಗದ ಅಂಶವಾಗಿತ್ತು. ಬೇರೆ ಭಾಷೆಯಲ್ಲಿ ನಟಿಸುವ ಅವಕಾಶದಿಂದ ಶಿವಣ್ಣ ಹೊರಬಂದದ್ದು ಈ ಅಂಶವನ್ನು ಸೂಕ್ತವಾಗಿ ಪ್ರದರ್ಶಿಸುತ್ತದೆ. 

   ಕನ್ನಡದ ಬಗ್ಗೆ ಇದ್ದ ಅಭಿಮಾನ ಕೇವಲ ವೈಯುಕ್ತಕವಾಗಿರಲಿಲ್ಲ, ಅದನ್ನು ಅಭಿಮಾನಿಗಳು ಸಹ ನಿರೀಕ್ಷಿಸುತ್ತಿದ್ದರು. ಈ ನಿರೀಕ್ಷೆ ಅವರ ಎರಡನೆಯ ಚಿತ್ರ ಸೋದರಿಯಿಂದಲೇ ಗಟ್ಟಿಯಾಗತೊಡಗಿತ್ತು. ಅದು ಬಿಡುಗಡೆಯಾದಾಗ ಚಿತ್ರವನ್ನು ನೋಡಲು ಅವರು ಅಮ್ಮ ನನ್ನ ಇಬ್ಬರು ಅತ್ತೆಯರು ಹಾಗೂ ಚಿಕ್ಕಪ್ಪನೊಡನೆ ಎತ್ತಿನ ಗಾಡಿಯಲ್ಲಿ ಹೋಗಿದ್ದರು. ಚಿತ್ರ ನೋಡುತ್ತಿದ್ದಾಗ, ಪ್ರೇಕ್ಷಕರೊಬ್ಬರು ಅವರನ್ನು ಗಮನಿಸಿ ಅಲ್ಲಿ ಒಂದು ರೀತಿಯ ಸಂಭ್ರಮ ಹಬ್ಬಿತು. ಇದೇ ಸಡಗರದಲ್ಲಿ ಒಬ್ಬ ಅಭಿಮಾನಿ ಎತ್ತರದ ಧ್ವನಿಯಲ್ಲಿ ಅಪ್ಪಾಜಿ ಕರ್ನಾಟಕದ ರತ್ನವೆಂದು ಕನ್ನಡದಲ್ಲಿ ಮಾತ್ರ ನಟಿಸಬೇಕೆಂದು ಹೇಳಿದರು. ಇದು ಅವರ ಮೇಲೆ ಗಾಢ ಪರಿಣಾಮ ಬೀರಿದ್ದು, ಕೊನೆಯವರೆಗೂ ಅವರಲ್ಲಿ ಉಳಿದುಕೊಂಡಿತ್ತು. ಭಾಷೆಯ ಮೇಲಿದ್ದ ಅವರ ಪ್ರಾವೀಣ್ಯತೆ ಸಹ ನಿರ್ವಿವಾದವಾಗಿತ್ತು. 

  ಆದರೆ ಇದಕ್ಕೆ ಬುನಾದಿ ಬಹಳ ಹಿಂದೆಯೇ ಹಾಕಲ್ಪಟ್ಟಿತ್ತು. ಅಪ್ಪಾಜಿಗೆ ಕನ್ನಡ ತಮ್ಮ ತಂದೆ-ತಾಯಿಯರಷ್ಟೇ ಸ್ಥಾನ ಪಡೆದಿತ್ತು. ಆದರೆ ಇತರರಿಗೂ ತಮ್ಮ ತಮ್ಮ ತಂದೆ ತಾಯಂದಿರು ಅಷ್ಟೇ ಪ್ರಿಯವೆಂದೂ ಅವರಿಗೆ ತಿಳಿದಿತ್ತು. ಕಾವೇರಿ ವಿವಾದ ಸಮಯದಲ್ಲಿ ಅಪ್ಪಾಜಿ ಏಕೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲವೆಂದು ಜನ ಪ್ರಶ್ನಿಸುತ್ತಾರೆ. ಆದರೆ ಅವರ ನಿಲುವು ಅವರ ಈ ಆಲೋಚನೆಯಿಂದ ಸ್ಪಷ್ಟವಾಗುತ್ತದೆ. “ನಮ್ಮ ಭಾಷೆ ನಮಗೆ ಬಹಳ ಪ್ರಿಯವಾಗಿರಬಹುದು. ಆದರೆ ಇತರ ಭಾಷೆಗಳನ್ನು ಹಿಯಾಳಿಸಬೇಕೆಂಬುದು ಇದರ ಅರ್ಥವಲ್ಲ’. ಯಾವುದೇ ವಿವಾದಗಳಿಗೆ ಸಿಲುಕಲು ಅವರಿಗಿಷ್ಟವಿರಲಿಲ್ಲ. ತನ್ನ ತಾಯಿ ಹರಕಲು ಸೀರೆ ಉಟ್ಟಿದ್ದರೂ, ಮಗು ಪಕ್ಕದ ಮನೆ ಹೆಂಗಸು ಸುಂದರವಾದ ರೇಶ್ಮೇ ಸೀರೆ ಉಟ್ಟಿದ್ದಾರೆ ಅಂತ, ತನ್ನ ತಾಯಿ ಮಡಿಲನ್ನು ಬಿಟ್ಟು ಎಂದೂ ಹೋಗುವುದಿಲ್ಲವೆಂದು ಅವರು ಒಂದು ಬಾರಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಇದರು ಒಳಮರ್ಮ, “ನಾನು ನನ್ನ ತಾಯಿಯನ್ನು ಗೌರವಿಸುವುದು ಸಹಜ. ಆದರೆ ನಿನ್ನ ತಾಯಿಯಬಗ್ಗೆ ನಾನೆಂದೂ ಕೆಟ್ಟದನ್ನು ಮಾತನಾಡುವುದಿಲ್ಲ’.

  ಆದರೆ ಅಪ್ಪಾಜಿ ಏಕಭಾಷಿಯಾರಾಗಿದ್ದರೆಂದು ಅರ್ಥವಲ್ಲ; ಇದಕ್ಕೆ ಪ್ರತಿಯಾಗಿ, ಅವರಿಗೆ ಕನ್ನಡ ಒಂದು ಭಾಷೆಯಾಗಿ ಎಷ್ಟು ಒಲವಿತ್ತೋ ಇತರ ಭಾಷೆಗಳನ್ನೂ ಗೌರವಿಸಬೇಕೆಂದು ಅವರು ಪ್ರತಿಪಾದಿಸುತ್ತಿದ್ದರು. ಶಿವಣ್ಣ ನಂಗೆ ಒಮ್ಮೆ ಹೇಳಿದರು. “ನಾನು ಬೆಳೆದಂತೆಲ್ಲ ನನಗೆ ಅಪ್ಪಾಜಿಯ ಸ್ಥಾನಮಾನಗಳು ನಾನಂದುಕೊಂಡಿದ್ದಕ್ಕಿಂತಲೂ ಉನ್ನತವಾಗಿತ್ತೆಂದು ಅರಿವಾಯಿತು. ಅವರು ಮದ್ರಾಸಿಗೆ ಬಂದಾಗಲೆಲ್ಲ ಮನೆ ಮುಂದೆ ನಿಂತಿರುತ್ತಿದ್ದ ಅಷ್ಟೊಂದು ಬಸ್ಸುಗಳನ್ನು ನೋಡಿ ನಂಗೆ ವಿಷ್ಯ ಏನೆಂದು ಗೊತ್ತಾಗದೇ ಆಶ್ಚರ್ಯ ಆಗುತ್ತಿತ್ತು. ನಂತರ ಅವರಿಗೆ ನಿಧಾನವಾಗಿ ಅರ್ಥವಾದ ವಿಷಯವೆಂದರೆ, ಕರ್ನಾಟಕದಿಂದ ಮದರಾಸು ನೋಡೋದಕ್ಕೆ ಅಂತ ಬರ್ತಿದ್ದ ಪ್ರವಾಸಿಗರು. ತಮ್ಮ ಪ್ರವಾಸದ ಒಂದು ಭಾಗವಾಗಿ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು ಅನ್ನುವ ಅಂಶ. 
ಎಲ್ಲರಿಗೂ ಅಪ್ಪಾಜಿ ಮೇಲಿದ್ದ ಗೌರವ ನೋಡಿಯೂ ಸಹ ಶಿವಣ್ಣನಿಗೆ ಬಹಳ ಅಚ್ಚರಿಯಾಗ್ತಿತ್ತು. ಅಪ್ಪಾಜಿಯ ಕಲಾಪ್ರಭುತ್ವವನ್ನು ಅವರು ತಮ್ಮ ಅಸಂಖ್ಯಾತ ಬೆಂಬಲಿಗರು ಹಾಗೂ ಅಭಿಮಾನಿಗಳ ದೊಡ್ಡ ಸಮೂಹದೊಡನೆ ಹಂಚಿಕೊಂಡಿದ್ದರೆಂದೂ ಅರಿತರು. ಅಪ್ಪಾಜಿಗೆ ಕರ್ನಾಟಕ, ಕರ್ನಾಟಕದ ಜನ ಮತ್ತು ಅಲ್ಲಿಯ ಸಂಸ್ಕೃತಿ ಮೇಲೆ ಅಪಾರ ಗೌರವವಿದ್ದಿದ್ದರಿಂದ ಅಭಿಮಾನಿಗಳ ಈ ಅಚಲವಾದ ಪ್ರೀತಿ ಹಾಗೂ ಮಮತೆ ಆಶ್ಚರ್ಯದ ಸಂಗತಿಯಾಗಿರಲಿಲ್ಲ.

 ಕನ್ನಡಕ್ಕೆ ಒತ್ತಾಸೆ ನೀಡಬೇಕೆಂದು ಅವರಿಗೆ ತುಂಬು ಹಂಬಲವಿದ್ದರೂ ಸಹ ಅವರೆಂದೂ ಬೇರೆ ಭಾಷೆಗಳ ವಿರುದ್ಧವಾಗಿರಲಿಲ್ಲ. ತಾವು ಮದ್ರಾಸಿನಲ್ಲಿ ಇದ್ದಷ್ಟು ಕಾಲ ಅಲ್ಲಿನವರು, ತಮ್ಮನ್ನು ಅವರಲ್ಲಿ ಒಬ್ಬ ಅಂತ ನೋಡಿಕೊಂಡಿದ್ದನ್ನು ಬಹಳಷ್ಟು ಸಲ ಅವರು ಹೇಳುತ್ತಿದ್ದರು. ಪ್ರತಿಯೊಂದು ಭಾಷೆಯೂ ಮನೆಗೆ ಕಿಟಕಿ ಇದ್ದಂತೆ, ತುಂಬು ಕಿಟಕಿಗಳು ಇದ್ದಷ್ಟೂ ಒಳ್ಳೇದು ಎಂಬು ಅವರ ಅಭಿಪ್ರಾಯವಾಗಿತ್ತು. 

  ತಾಳ್ಮೆ, ಸಹನೆಯನ್ನು ಪ್ರತಿಪಾದಿಸುವ ಇಂತಹ ಹೇಳಿಕೆಗಳು ಕೇವಲ ಮಾತನಾಡಿದ್ದು ಶಬ್ದಗಳಾಗಿದ್ದರೆ, ಚಿತ್ರಗಳಲ್ಲೂ ಸಹ ಬಲವಾಗಿ ಬೇರೂರಿತ್ತು. ಉದಾಹರಣೆಗೆ, ಚರಿತ್ರೆಯಲ್ಲಿ ಒಂದು ಘನವಾದ ಸ್ಥಾನ ಪಡೆದಿರುವ ರಣಧೀರ ಕಂಠೀರವದಲ್ಲಿ. ಕೆಲವು ಭಾಗಗಳು ಸಂಪೂರ್ಣವಾಗಿ ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿವೆ. ಈಗಿನ ಕಾಲದಲ್ಲಿ ಸಬ್‌ಟೈಟಲ್‌ ಕಲ್ಪನೆ ಇನ್ನೂ ತಿಳಿದೇ ಇರಲಿಲ್ಲ. ಈ ಭಾಷೆಗಳನ್ನು ಅರ್ಥಮಾಡಿಕೊಳ್ಳಬಲ್ಲವರು ಸಾಕಷ್ಟು ಜನಗಳಿದ್ದದ್ದೂ ಇದಕ್ಕೆ ಕಾರಣವಿರಬಹುದು. ತಂತ್ರಜ್ಞರು ಹಾಗೂ ತಂಡದ ಸದಸ್ಯರು ರಾಜ್ಯದ ಎಲ್ಲೆಡೆಯಿಂದ ಹಾಗೂ ಅದರಾಚೆಯಿಂದಲೂ ಬಂದಿದ್ದರೂ ಸಹ, ಅಪ್ಪಾಜಿ ಹಾಗೂ ಇತರ ಎಲ್ಲಾ ಚಲನಚಿತ್ರ ಕಲಾವಿದರು, ಯಾವುದೇ ಜಾತಿ, ಭಾಷೆ ಅಥವಾ ಇತರ ಪೂರ್ವಗ್ರಹವಿಲ್ಲದೆ ಒಂದಾಗಿದ್ದರೆಂಬ ಸತ್ಯಕ್ಕೆ ಇದು ಪೂರಕವಾಗಿದೆ. ಯಾವುದೇ ಒಂದು ಒಲವಿನ ಒತ್ತಡಕ್ಕೆ ಬಗ್ಗದೇ, ಎಲ್ಲರಿಂದಲೂ ಪ್ರೀತಿಸಲ್ಪಡುವ ತಮ್ಮದೇ ಆದ ಕುಟುಂಬವನ್ನು ಹೊಂದಿರುವುದು ಕಲಾವಿದರ ಪುಣ್ಯವೆಂದು ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು. 

  ಭಾಷೆಯ ವಿಷಯ ಬಂದಾಗ ಅಪ್ಪಾಜಿ ಯಾವುದೇ ರೀತಿಯಲ್ಲೂ ಸಂಕುಚಿತರಾಗಿರಲಿಲ್ಲ. ಅಪ್ಪಾಜಿ ತಮಗೆಂದು ಒಂದು ಹೆಸರು ಮಾಡಿದ ಮೇಲೆ, ಅವರ ಸ್ನೇಹಿತರ ಹಾಗೂ ಪರಿಚಿತರ ಬಳಗ ಬೆಳೆದು ಅವರು ಎಲ್ಲರೊಂದಿಗೂ ವ್ಯವಹರಿಸಬೇಕಾಗಿತ್ತೆಂದು ಅಮ್ಮ ನನಗೆ ಹೇಳಿದರು. ಎಲ್ಲರಿಗೂ ಕನ್ನಡ ಗೊತ್ತಿರಲಿಲ್ಲ. ಹಾಗಾಗಿ ಇವರಿಗೆ ಇಂಗ್ಲೀಷ್‌ ಕಲಿಯಬೇಕಾಗಿ ಬಂತು. ಕುಪ್ಪಂನ ವರದರಾಜು ಎನ್ನುವ ನಮ್ಮ ದೂರದ ಸಂಬಂಧಿಯೊಬ್ಬರು, ಸ್ನಾತಕೋತ್ತರ ಪದವಿ ಹೊಂದಿದ್ದು, ಅಪ್ಪಾಜಿಗೆ ಇಂಗ್ಲೀಷ್‌ ಕಲಿಸುವ ಕೆಲಸವನ್ನು ಕೈಗೆತ್ತಿಕೊಂಡು ಕೇವಲ 5 ತಿಂಗಳಲ್ಲಿ ಇಂಗ್ಲೀಷ್‌ ಕಲಿಸುವಲ್ಲಿ ಸಫ‌ಲರಾದರು. ಅಪ್ಪಾಜಿ ಹೆಚ್ಚು ಹೆಚ್ಚು ಜನರವನ್ನು ಭೇಟಿ ಮಾಡಿ ಅವರೊಡನೆ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರಿಂದ ಅವರ ನಿರ್ಗಳತೆ ಇನ್ನಷ್ಟು ಉತ್ತಮವಾಯ್ತು. 

 ಆದರೆ ಕನ್ನಡ ಚಿತ್ರರಂಗದ ಅಭಿವೃದ್ಧಿಯ ವಿಷಯ ಬಂದಾಗ, ಅಪ್ಪಾಜಿಯ ನಿಷ್ಠೆ ಯಾವಕಡೆಗಿತ್ತೆಂಬುದರ ಬಗ್ಗೆ ಯಾವುದೇ ಅಸ್ಪಷ್ಟತೆಯ ಲವಲೇಶವೂ ಇರಲಿಲ್ಲ. ಕನ್ನಡಕ್ಕೆ ಇತರ ಭಾಷೆಗಳ ಚಿತ್ರಗಳನ್ನು ಹಾಗೂ ಕಾರ್ಯಕ್ರಮಗಳನ್ನು ಡಬ್‌ ಮಾಡುವುದರ ಬಗ್ಗೆ ಅವರು ಬಹಳ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದರು. ದೆಹಲಿಯಿಂದ ರಾಮಾಯಣವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದಾಗ ಅದು ಇತರ ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಡಬ್‌ ಆದವಾದರೂ ಕನ್ನಡದಲ್ಲಿ ಆಗಲಿಲ್ಲ. ಒಂದು ವರ್ಗದ ಜನ ಇದಕ್ಕೆ ಅಪ್ಪಾಜಿಯನ್ನು ಹೊಣೆ ಮಾಡಿದರಾದರೂ, ಇದನ್ನು ಅಪ್ಪಾಜಿ ತಮ್ಮ ಸ್ವಾರ್ಥಕಲ್ಲದೆ ಕನ್ನಡ ಚಿತ್ರೋದ್ಯಮದ ಒಳಿತಿಗಾಗಿ ಮಾಡಿದರೆಂದು ನಂತರ ಅವರಿಗೆ ಅರಿವಾಗುತ್ತದೆ. ಡಬ್ಬಿಂಗ್‌ ಕನ್ನಡದಲ್ಲಿ ಮಾಡಿದ ಚಿತ್ರಗಳ ಸಂಖ್ಯೆಯನ್ನು ಕಡಿಮೆಮಾಡುತ್ತಿತ್ತು ಹಾಗೂ ಚಿತ್ರೋದ್ಯಮದ ಸಾವಿರಾರು ತಂತ್ರಜ್ಞರು ಹಾಗೂ ಕಲಾವಿದರ ಜೀವನೋಪಾಯವನ್ನು ಕಸಿದುಕೊಂಡು ಬಿಡುತ್ತಿತ್ತು. 

   ಅಪ್ಪಾಜಿಯ ಎರಡು ನಿಲುವುಗಳು ಮುಂದೆ ಬಂದಿರುವ ಇಂತಹ ಅನೇಕ ಪ್ರಕರಣಗಳ ಬಗ್ಗೆ ನಾನು ಕೇಳಿದ್ದೇನೆ. ಕನ್ನಡದ ಬಗ್ಗೆ ಅಚಲ ಭಕ್ತಿ ಹಾಗೂ ಇತರ ಭಾಷೆಗಳ ಬಗ್ಗೆ ಸಹನೆ ಹಾಗೂ ತಾಳ್ಮೆ. ಎಲ್ಲಾ ಕಡೆಯಿಂದ ಬಂದ ದಾಳಿಯ ಮಧ್ಯದಲ್ಲೂ, ತನ್ನ ತನವನ್ನು ಕಾಪಾಡಿಕೊಂಡು ಕನ್ನಡ ಚಿತ್ರೋದ್ಯಮ ಇಂದು ಉಳಿದಿದೆ ಎಂಬ ನಿಲುವನ್ನು ಅಪ್ಪಾಜಿ ಹೊಂದಿದ್ದೇ ಇದಕ್ಕೆ ಕಾರಣವೆಂದು ನನ್ನ ವೈಯುಕ್ತಕ ಅನಿಸಿಕೆ. ರಾಜ್ಯದಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರೆಯಬೇಕೆಂಬುದೇ ಅನೇಕರು ಕೈಗೊಂಡ ಇಂತರ ಆಂದೋಲನಗಳ ಗುರಿಯಾಗಿತ್ತು. ಕನ್ನಡಿಗರಲ್ಲಿ ಆತ್ಮಾಭಿಮಾನ ಹಾಗೂ ಭಾಷೆಯ ಬಗ್ಗೆ ನಿಷ್ಠೆಯನ್ನು ಮೂಡಿಸಲು ಅವರು ದೃಶ್ಯ ಮಾಧ್ಯಮವನ್ನು ಬಳಸಿಕೊಂಡರು. ಇಡೀ ಕರ್ನಾಟಕ ಅವರ ರಾಜ್ಯವಾಗಿದ್ದು ಅವರು ಕೋಟ್ಯಂತರ ಕನ್ನಡಿಗರ ಹೃದಯಗಳನ್ನು ಆಳಿದರೆಂದು ಹಾಗೂ ಈಗಲೂ ವಿಶ್ವದಾದ್ಯಂತ ಅದನ್ನೇ ಮಾಡುತ್ತಿದ್ದಾರೆಂದು ಜನರು ಮಾತನಾಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಅವರುಗಳು ಮಾಡಿದ್ದು ಸರಿಯೆಂದು ನನಗನ್ನಿಸುತ್ತದೆ.
 

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.