Kannada Cinema; ಫೆ.9ರಂದು ತೆರೆಗೆ ಬರುತ್ತಿದೆ ಎಸ್.ನಾರಾಯಣ ನಿರ್ದೇಶನದ ‘5ಡಿ’
Team Udayavani, Jan 10, 2024, 2:42 PM IST
ನಟ ಆದಿತ್ಯ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ, ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದ “5ಡಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ “5ಡಿ’ ಸಿನಿಮಾ ಇದೇ ಫೆ. 9 ರಂದು ಬಿಡುಗಡೆ ಯಾಗುತ್ತಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ, “5ಡಿ’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿತು.
ಇದೇ ವೇಳೆ ಮಾತನಾಡಿದ ಹಿರಿಯ ನಿರ್ದೇಶಕ ಎಸ್. ನಾರಾಯಣ್, “ಈಗಾಗಲೇ “5ಡಿ’ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಯಾಗುವುದಷ್ಟೇ ಬಾಕಿಯಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಸಿನಿಮಾ ಬಿಡುಗಡೆಯಾಗಿ ರಬೇಕಿತ್ತು. ಆದರೆ ಕೆಲ ಕಾರಣಾಂತರಗಳಿಂದ, ನಾವಂದು ಕೊಂಡಂತೆ ಸಿನಿಮಾದ ಬಿಡುಗಡೆ ಸಾಧ್ಯವಾಗಲಿಲ್ಲ. ಮೊದಲ ಬಾರಿಗೆ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶಿಸಿದ್ದೇನೆ. ಯಾರೂ ಕೂಡ ಊಹಿಸಲಾಗದ ಕಥೆ ಮತ್ತು ವಿಷಯ ಈ ಸಿನಿಮಾದಲ್ಲಿದೆ. ಅದನ್ನು ತೆರೆಮೇಲೆ ನೋಡಬೇಕು’ ಎಂದರು.
“5ಡಿ’ ಚಿತ್ರದ ಬಗ್ಗೆ ಮಾತನಾಡಿದ ನಟ ಆದಿತ್ಯ, “ಈ ಹಿಂದೆ ಎಸ್. ನಾರಾಯಣ್ ಅವರ ಜೊತೆಗೆ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ. ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೆ. ಆದರೆ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಎಸ್. ನಾರಾಯಣ್ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಕಥೆ, ಪಾತ್ರ ಏನೂ ಕೇಳದೆ ಈ ಸಿನಿಮಾ ಒಪ್ಪಿಕೊಂಡೆ. ಅಂದುಕೊಂಡಂತೆ ಸಿನಿಮಾ ಚೆನ್ನಾಗಿ ಬಂದಿದೆ. ತಂಡದಲ್ಲಿ ಪ್ರತಿಯೊಬ್ಬರೂ ತುಂಬ ಚೆನ್ನಾಗಿ ತಮ್ಮ ಕೆಲಸ ನಿರ್ವಹಿಸಿದ್ದಾರೆ’ ಎಂದು ತಮ್ಮ ಅನುಭವ ಹಂಚಿಕೊಂಡರು.
“ಒನ್ ಟು ಹಂಡ್ರೆಡ್ ಡ್ರೀಮ್ಸ್ ಮೂವೀಸ್’ ಬ್ಯಾನರ್‌ನಲ್ಲಿ ಸ್ವಾತಿ ಕುಮಾರ್ ನಿರ್ಮಿಸುತ್ತಿರುವ “5ಡಿ’ ಸಿನಿಮಾದಲ್ಲಿ ಆದಿತ್ಯ ಮತ್ತು ಅದಿತಿ ಪ್ರಭುದೇವ ಅವರೊಂದಿಗೆ ಜ್ಯೋತಿ ರೈ, ರಾಜೇಶ್ ರಾವ್, ಆಕಾಶ್, ರವಿಕುಮಾರ್ ಮೊದಲಾದವರು ತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ “5ಡಿ’ ಸಿನಿಮಾದ ಫಸ್ಟ್‌ಲುಕ್, ಟೀಸರ್ ಬಿಡುಗಡೆಯಾಗಿದ್ದು, ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ “5ಡಿ’ ಫೆಬ್ರವರಿಯಲ್ಲಿ ತೆರೆಗೆ ಬರುತ್ತಿದ್ದು, ಸಿನಿಮಾ ತೆರೆಮೇಲೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Udupi: ಗ್ಯಾರಂಟಿ ಯೋಜನೆಗಳ ಯಾವುದೇ ಕಾರಣಕ್ಕೂ ರದ್ದುಗೊಳಿಸಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.