Karki; ಸಮಾನತೆಯ ಸುತ್ತ ಕರ್ಕಿ; ವಿಜಯದ ನಿರೀಕ್ಷೆಯಲ್ಲಿ ಜಯಪ್ರಕಾಶ್


Team Udayavani, Aug 4, 2024, 5:10 PM IST

ಸಮಾನತೆಯ ಸುತ್ತ ಕರ್ಕಿ; ವಿಜಯದ ನಿರೀಕ್ಷೆಯಲ್ಲಿ ಜಯಪ್ರಕಾಶ್

ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಪರಿಚಯವಾಗಿರುವ, ಇತ್ತೀಚೆಗೆ ಬಿಡುಗಡೆಯಾಗಿದ್ದ ವಾಟ್ಸಾಪ್‌ ಲವ್‌ ಹಾಗೂ ರಾಜರಾಣಿ ಸಿನೆಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಯುವನಟ ಜಯಪ್ರಕಾಶ್‌ ರೆಡ್ಡಿ ಈಗ “ಕರ್ಕಿ’ ಚಿತ್ರದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಇನ್ನು “ಕರ್ಕಿ’ ಸಮಾಜಕ್ಕೆ ಸಮಾನತೆಯ ಸಂದೇಶ ನೀಡುವ ಹಾಗೂ ಜಾತಿ ವ್ಯವಸ್ಥೆಯಿಂದ ಕೆಲವು ಪ್ರದೇಶಗಳಲ್ಲಿ ನಡೆಯುತ್ತಿರುವ ಶೋಷಣೆಗಳ ಸುತ್ತ ಸಾಗುವ ಕಥೆಯನ್ನುಹೊಂದಿರುವ ಸಿನೆಮಾ ಎಂಬುದು ಚಿತ್ರತಂಡದ ಮಾತು. ಕೆಳ ವರ್ಗದ ಯುವಕನೊಬ್ಬ ತನ್ನ ಜೀವನದ ಹಾದಿಯಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ, ಅವುಗಳನ್ನೆಲ್ಲ ಮೆಟ್ಟಿ ನಿಂತು ಹೇಗೆ ಸಾಧನೆ ಮಾಡುತ್ತಾನೆ ಎಂಬುದನ್ನು ಕರ್ಕಿ’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದೇವೆ. ಇಂಥ ಸಾಕಷ್ಟು ಸೂಕ್ಷ್ಮ ಅಂಶಗಳು ಈ ಸಿನೆಮಾದಲ್ಲಿದೆ. “ಕರ್ಕಿ’ ಎಂಬುದು ಈ ಸಿನೆಮಾದಲ್ಲಿ ಬರುವ ಕಪ್ಪು ಬಣ್ಣದ ನಾಯಿಯ ಹೆಸರು.

ಈ ಸಿನೆಮಾದಲ್ಲಿ ನಾಯಿಗೂ ಒಂದು ಪ್ರಮುಖ ಪಾತ್ರವಿದೆ. ಅದು ಏನು? ಹೇಗೆ ಎಂಬುದನ್ನು ಕರ್ಕಿ’ ಸಿನೆಮಾದಲ್ಲೇ ನೋಡಬೇಕು’ ಎಂಬುದು ಚಿತ್ರದ ನಾಯಕ ನಟ ಜಯ ಪ್ರಕಾಶ್‌ ರೆಡ್ಡಿ ಮಾತು.

ಸುಮಾರು ಎರಡು ವರ್ಷಗಳಿಂದ “ಕರ್ಕಿ’ ಸಿನೆಮಾದ ಕೆಲಸಗಳು ನಡೆಯುತ್ತಿದ್ದು, ಚಿತ್ರವೀಗ ಬಿಡುಗಡೆಯ ಹಂತಕ್ಕೆ ತಲುಪಿದೆ. ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಪವಿತ್ರನ್‌, “ಕರ್ಕಿ’ ಸಿನೆಮಾದ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಶಿವಮೊಗ್ಗ ದಾವಣಗೆರೆ, ಹುಬ್ಬಳ್ಳಿ, ಬಂಗಾರಪೇಟೆ, ಕೆಜಿಎಫ್, ಬೆಂಗಳೂರು, ಚನ್ನಪಟ್ಟಣ, ಕೋಲಾರ ಹಾಗೂ ಬಾಗಲಕೋಟೆ ಸುತ್ತಮುತ್ತ “ಕರ್ಕಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಿ ಅಭಿನಯದ ದೃಶ್ಯವನ್ನು ತಿರುನೆಲ್ವೇಲಿಯಲ್ಲಿ ಶೂಟ್‌ ಮಾಡಲಾಗಿದೆ. ಈಗಾಗಲೇ ಸದ್ದಿಲ್ಲದೆ ಬಹುತೇಕ ತನ್ನ ಕೆಲಸಗಳನ್ನು ಪೂರ್ಣಗೊಳಿಸಿರುವ “ಕರ್ಕಿ’ ಸಿನೆಮಾ ಸೆನ್ಸಾರ್‌ ನಿಂದ “ಯು/ಎ’ ಪ್ರಮಾಣ ಪಡೆದು ರಿಲೀಸ್‌ ಗೆ ಸಿದ್ದವಾಗಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ಟಾಪ್ ನ್ಯೂಸ್

G.parameshwar

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

Rajeev

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

1-DY

Yeah, Yes; ಕೋರ್ಟ್‌ನಲ್ಲಿ ಯಾ.. ಅನ್ನಬೇಡಿ, ಎಸ್‌ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್‌!

Sunil-kumar

BJP Leader: ಯತ್ನಾಳ್‌ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್‌

Krishna-Byregowda

Work Pressure: ಗ್ರಾಮ ಆಡಳಿತಾಧಿಕಾರಿಗಳ ಕೆಲಸದ ಒತ್ತಡ ಕಡಿಮೆಗೆ ಕ್ರಮ: ಕೃಷ್ಣ ಬೈರೇಗೌಡ

DK-Shiva-Kumar

Gandhi Jayanthi: ನಾಳೆ ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಗಾಂಧಿ ನಡಿಗೆ

yogi

Rahul Gandhi ಆಕಸ್ಮಿಕ ಹಿಂದೂ: ಸಿಎಂ ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು

BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

janaka kannada movie

Sandalwood: ತಂದೆ-ಮಗನ ಕಥಾಹಂದರ ʼಜನಕʼ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BY-Vijayendra

MUDA Case: ಸಿಎಂಗೆ ರಾಜೀನಾಮೆಯ ಅನಿವಾರ್ಯತೆ ಸೃಷ್ಟಿಯಾಗಿದೆ: ಬಿ.ವೈ.ವಿಜಯೇಂದ್ರ

G.parameshwar

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

Rajeev

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

1-DY

Yeah, Yes; ಕೋರ್ಟ್‌ನಲ್ಲಿ ಯಾ.. ಅನ್ನಬೇಡಿ, ಎಸ್‌ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್‌!

Sunil-kumar

BJP Leader: ಯತ್ನಾಳ್‌ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.