ಮಲ್ಲಿಗೆ ಚಿತ್ತಾರ ಮನಸು ಝೇಂಕಾರ
Team Udayavani, Apr 1, 2017, 4:13 PM IST
ಅವಳು ಸಂಜು. ಅವನು ಪರಶು. ಇಬ್ಬರದೂ ನಿಷ್ಕಲ್ಮಶ ಪ್ರೀತಿ. ಆ ಪ್ರೀತಿ ಬೆರೆತಾಗ ಅವರ ಮುಂದೆ ಬೆಟ್ಟದಷ್ಟು ಕನಸುಗಳು. ಇಬ್ಬರೂ ಭವಿಷ್ಯದಲ್ಲಿ ಮದ್ವೆಯಾಗಿ ಸುಂದರ ಬದುಕನ್ನು ಹೇಗೆಲ್ಲಾ ಕಟ್ಟಿಕೊಳ್ಳಬೇಕೆಂಬ ತುಂಟ ಮಾತುಗಳ ಅಬ್ಬರದಲ್ಲೇ ಮುಳುಗಿರುತ್ತಾರೆ. ಪ್ರೇಮಶಿಖರದಿ ತೇಲುವ ಸಂಜು ಮತ್ತು ಪರಶು ನಡುವಿನ ಪ್ರೀತಿಯ ಮಾತುಗಳಿಗೆ ಹೊಟ್ಟೆ ಕಿಚ್ಚುಪಡದವರಿಲ್ಲ. ಎಲ್ಲ ಎಲ್ಲೆಗಳನ್ನು ಮೀರಿ, ಪ್ರೀತಿಗೆ ಅಂಟಿಕೊಂಡ ಆ ಎರಡು ಹೃದಯಗಳ ಮಾತುಕತೆಯನ್ನೊಮ್ಮೆ ಆಲಿಸಿದಾಗ…
ಸಂಜು- ಬಾಗಿಲು ತೆಗೆದರೆ ಮನೆ ಅಂಗಳದಲ್ಲಿ ದೊಡ್ಡ ತೋಟವಿರಬೇಕು, ಅದರ ತುಂಬ ಬರೀ ಗುಲಾಬಿ ಗಿಡ ಇರಬೇಕು
ಪರಶು- ನಾನು ದುಡಕ್ಕೊಂಡ್ ಬರಿ¤àನಿ.
ಸಂಜು- ನಾನು ಒಳ್ಳೇ ಅಡುಗೆ ಮಾಡ್ತೀನಿ.
ಪರಶು- ನಾನು ಸೌದೆ ಹೊತ್ಕೊಂಡ್ ಬರಿ¤àನಿ.
ಸಂಜು- ನಾನು ಬಾಗಿಲಲ್ಲಿ ನಿಂತ್ಕೊಂಡು ಕಾಯ್ತಾ ಇರಿ¤àನಿ.
ಪರಶು- ನಾನು ಯಾವಾಗ ಮನೆಗೆ ಬರಿ¤àನಿ ಆಂತ ಒದ್ದಾಡ್ತಿರಿ¤àನಿ…
ಸಂಜು- ಮಕ್ಕಳೆಷ್ಟು ಬೇಕು.
ಪರಶು- ನೀನು ಕೊಟ್ಟಷ್ಟು.
ಸಂಜು- ನೀನು ಕೇಳಿದಷ್ಟು…
– ಹೀಗೆ ಲವಲವಿಕೆಯಿಂದ ಲವ್ ಮಾಡುವ ಸಂಜು ಮತ್ತು ಪರಶು ಬದುಕಲ್ಲಿ ಸಿಹಿಗಾಳಿ ಬೀಸುತ್ತಾ, ಬಿರುಗಾಳಿ ಬೀಸುತ್ತಾ ಅನ್ನೋದೇ ಚಿತ್ರದ ಕಥೆ ಮತ್ತು ವ್ಯಥೆ. ಇದು “ಮನಸು ಮಲ್ಲಿಗೆ’ಯ “ಪರಿ’ಮಳ. ನಿರ್ದೇಶಕ ಎಸ್.ನಾರಾಯಣ್, ಮರಾಠಿಯ ಯಶಸ್ವಿ “ಸೈರಾತ್’ ಚಿತ್ರವನ್ನು ಯಥಾವತ್ತಾಗಿ ಇಲ್ಲಿ ಅನುಕರಿಸಿದ್ದಾರೆ. ಹಾಗಂತ, ಎಲ್ಲವನ್ನೂ ಹಾಗೇ
ತೋರಿಸಿಲ್ಲ, ಹಾಗೆಯೇ ಹೇಳಿಲ್ಲ. ಮುಖ್ಯವಾಗಿ ಇಲ್ಲಿ ಅವಧಿಯನ್ನು ಮನದಲ್ಲಿಟ್ಟುಕೊಂಡು ಒಂದು ನವಿರಾದ ಪ್ರೇಮಕಥೆಯನ್ನು ಹೇಗೆ ಹೇಳಬೇಕು, ಎಷ್ಟು ಹೇಳಬೇಕು, ಯಾವ ರೀತಿ ತೋರಿಸಬೇಕು ಎಂಬುದರ ಸ್ಪಷ್ಟತೆ ಅವರಿಗಿದೆ. ಆ ಕಾರಣಕ್ಕೆ “ಮನಸು ಮಲ್ಲಿಗೆ’ ಆರಂಭದಲ್ಲಿ ಮೆಲ್ಲಗೆ ತೆರೆಯ ಮೇಲೆ ಗಂಧದ ಮಳೆ ಸುರಿಸುವಷ್ಟು, ಸುಗಂಧದ ಕಳೆ ತರಿಸುವಷ್ಟು ಇಷ್ಟವಾಗುತ್ತೆ. ಇಲ್ಲಿ ಮುಖ್ಯವಾಗಿ ಗಮನಸೆಳೆಯೋದು ಸಂಭಾಷಣೆ ಮತ್ತು ಹಿನ್ನೆಲೆ ಸಂಗೀತ. ಇವೆರೆಡರ ಪಾಕ ಸರಿಯಾಗಿ ಬೆರೆತಿರುವುದರಿಂದಲೇ “ಮಲ್ಲಿಗೆ’ ಘಮಿಸುತ್ತೆ.
ಮೂಲ ಸಿನಿಮಾ ನೋಡಿದವರಿಗೆ ಇಲ್ಲಿ ಒಂದಷ್ಟು ಕೊರತೆ ಕಾಣಬಹುದು. ಯಾಕೆಂದರೆ, “ಸೈರಾತ್’ನಲ್ಲಿ ನೈಜತೆಗೆ
ಹೆಚ್ಚು ಒತ್ತು ಕೊಡಲಾಗಿತ್ತು. ಇಲ್ಲೂ ಆ ನೈಜತೆಯ ಜಾಡು ಬಿಟ್ಟಿಲ್ಲವಾದರೂ, ತೆರೆಯ ಮೇಲೆ ಅಲ್ಲಲ್ಲಿ ಒಂದಷ್ಟು ಶ್ರೀಮಂತಿಕೆ ಹೆಚ್ಚಾಗಿರುವುದರಿಂದ ಆ “μàಲ್’ ಇಲ್ಲಿ ಸಿಗುವುದಿಲ್ಲ. ಆದರೂ, ಮಾತುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ
ಭಾವನೆಗಳನ್ನು ಹಿಡಿದಿಡುವ ತಾಕತ್ತು ಇದೆ. ಅನುಭಾವಗಳನ್ನು ಹೊರಹೊಮ್ಮಿಸುವ ಶಕ್ತಿ ಇದೆ. ಆ ಕಾರಣಕ್ಕೆ ಮಲ್ಲಿಗೆ ಮನಸನ್ನ ಅರಳುಸುತ್ತಾ ಹೋಗುತ್ತೆ. ಇಲ್ಲಿ ತೋರಿಸಿರುವ ತಾಣಗಳೂ ಕೂಡ ಕಥೆ ಮತ್ತು ದೃಶ್ಯಕ್ಕೆ ಪೂರಕವಾಗಿವೆ. ನಾರಾಯಣ್ ಎಂದಿನಂತೆ ಇಲ್ಲಿಯೂ ಗ್ರಾμಕ್ಸ್‌ಗೆ ಮೊರೆ ಹೋಗಿದ್ದಾರೆ. ನೈಜವಾಗಿ ಸಾಗುವ ಚಿತ್ರದ ಹಾಡೊಂದರಲ್ಲಿ “ಗ್ರಾμಕ್ಸ್’ ತೂರಿ ಬರುವ ಮೂಲಕ ಕಥೆಯ ಗುಣಮಟ್ಟಕ್ಕೆ ಸಣ್ಣದ್ದೊಂದು ಅಡ್ಡಿಯಾದಂತಾಗಿದೆ. ಆದರೂ, ತೆರೆ ಮೇಲಿನ ಪಾತ್ರಗಳು ಕೆಲ ಸಣ್ಣ ಪುಟ್ಟ ತಪ್ಪುಗಳನ್ನು ಬದಿಗಿಟ್ಟು, ನೋಡುಗನ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತವೆ.
“ಮನಸು ಮಲ್ಲಿಗೆ’ಯ ಕಥಾಹಂದರ ವಿಶೇಷವೇನೂ ಅಲ್ಲ. ಈ ಹಿಂದೆ
“ಚೆಲುವಿನ ಚಿತ್ತಾರ’ದಲ್ಲೇ ಅಂಥದ್ದೊಂದು ನಿಷ್ಕಲ್ಮಶ ಪ್ರೀತಿ, ನೋವು, ನಲಿವು, ಕಣ್ಣೀರು, ಎಲ್ಲವನ್ನೂ ನೋಡಾಗಿದೆ. ಆದರೆ, ಇಲ್ಲಿರುವ ಕೆಲ ಸೂಕ್ಷ್ಮತೆಗಳು ಮತ್ತು ಕೆಲ ಸಂದೇಶಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಮೇಲ್ಜಾತಿಯ ಶ್ರೀಮಂತ ಹುಡುಗಿಯನ್ನು ಪ್ರೀತಿಸುವ ಕೆಳಜಾತಿಯ ಬಡ ಹುಡುಗನೊಬ್ಬನ ಅಸಹಾಯಕತೆ, ಶ್ರೀಮಂತ ಹುಡುಗಿಯ ಮನೆಯವರ ದಬ್ಟಾಳಿಕೆ ಇವು ನೋಡುಗರ ಗಮನಸೆಳೆಯುತ್ತವೆ. ಅಷ್ಟೇ ಭಾವುಕತೆಗೂ ದೂಡುತ್ತವೆ. ಮೊದಲರ್ಧ ಆ ಇಬ್ಬರು ಪ್ರೇಮಿಗಳಿಗೆ ಆ ಪ್ರೇಮಲೋಕ ಎಷ್ಟೊಂದು ಸುಂದರವಾಗಿರುತ್ತೆ. ಅಲ್ಲೀತನಕ ಅವರಿಬ್ಬರೂ ಆ ಪ್ರೇಮಲೋಕವನ್ನು ಎಂದೂ ಕಂಡಿಲ್ಲ, ಕೇಳೂ ಇಲ್ಲ. ದ್ವಿತಿಯಾರ್ಧ ಸಂಭ್ರಮ ಬದಲು ಸಂಕಟ, ನಲಿವು ಬದಲು ನೋವು ಇವೆಲ್ಲವೂ ನೋಡುಗನ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ, ಮನಸ್ಸನ್ನು ಭಾರವಾಗಿಸುತ್ತವೆ. ಖುಷಿಯಾಗಿದ್ದ ಪ್ರೇಮಿಗಳ
ಬದುಕಲ್ಲಿ ನಡೆಯಬಾರದ್ದೆಲ್ಲಾ ನಡೆದು ಹೋಗುತ್ತೆ. ಅವರ ಪ್ರೀತಿಗೆ ಅಡ್ಡವಾಗುವ ಜನರು, ಊರನ್ನೇ ಬಿಟ್ಟು ಹೊರಡಲು
ರೆಡಿಯಾಗುತ್ತಾರೆ. ಮುಂದೆ ಏನಾಗುತ್ತೆ ಎಂಬ ಕುತೂಹಲವಿದ್ದರೆ ಮಲ್ಲಿಗೆ ಪರಿಮಳ ಸವಿಯಬಹುದು.
ರಿಂಕು ರಾಜಗುರು ಪಾತ್ರವನ್ನು ಜೀವಿಸಿದ್ದಾರೆ. ದಪ್ಪವಾಗಿದ್ದಾರೆ ಅನ್ನೋದು ಬಿಟ್ಟರೆ, ಖಡಕ್ ಹುಡುಗಿಯಾಗಿ ಇಷ್ಟವಾಗುತ್ತಾರೆ, ಪ್ರೀತಿಯ ತೆಕ್ಕೆಗೆ ಬಿದ್ದು ಒದ್ದಾಡುವ ಹುಡುಗಿಯಾಗಿ ಭಾವುಕತೆ ಹೆಚ್ಚಿಸುತ್ತಾರೆ. ರಿಂಕು ಪಾತ್ರಕ್ಕೆ ಡಬ್ಬಿಂಗ್ ಮಾಡಿರುವುದನ್ನು ಸ್ವಾಗತಿಸಬೇಕು. ಆದರೆ, ಅದಕ್ಕಿನ್ನೂ ಧಮ್ ಕಟ್ಟಿದ್ದರೆ ಸೊಗಸಾಗಿರುತ್ತಿತ್ತು. ನಿಶಾಂತ್‌ಗೆ
ಮೊದಲ ಸಿನಿಮಾ ಅಂತೆನಿಸುವುದಿಲ್ಲ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅರವಿಂದ್ ಹಾಗೂ ಇತರೆ ಕಲಾವಿದರು ಇರುವಷ್ಟು ಕಾಲ ಗಮನಸೆಳೆಯುತ್ತಾರೆ. ಅಜಯ್ ಅತುಲ್ ಸಂಗೀತದಲ್ಲಿ ಮೂರು ಹಾಡುಗಳು ಗುನುಗುವಂತಿವೆ. ಮನೋಹರ್ ಜೋಶಿಗೆ “ಡ್ರೋಣಾ’ಚಾರ್ಯ ಅಂತ ಕರೆಯಲ್ಲಡ್ಡಿಯಿಲ್ಲ! ಯಾಕೆಂದರೆ, ಬಹುಪಾಲಿನ ದೃಶ್ಯಗಳನ್ನು ಏರ್‌ಶಾಟ್ಸ್‌ಗೆ ಸೀಮಿತಗೊಳಿಸಿದ್ದಾರೆ. ಆದರೂ, ಮನಸು ಮಲ್ಲಿಗೆಯ ಅಂದಕ್ಕೆ ಕಾರಣವೂ ಆಗುತ್ತಾರೆ.
– ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.