ಪೊಲೀಸ್ ಠಾಣೆಯಲ್ಲೊಂದು ಕಥೆ ‘ಮೇರಿ’
Team Udayavani, Feb 11, 2023, 3:58 PM IST
“ಮೇರಿ’- ಹೀಗೊಂದು ಸಿನಿಮಾ ಸದ್ದಿಲ್ಲದೇ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. “ಆನ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಎರಡನೇ ಸಿನಿಮಾವಿದು.
“ಮೇರಿ’ ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ವಿಕಾಶ್ ಉತ್ತಯ್ಯ, ಅನೂಷ ಕೃಷ್ಣ, ಚೇತನ್ ವಿಕ್ಕಿ, ತೇಜಸ್ವಿನಿ ಶರ್ಮಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಶಾಂತ್, ದೀಪಕ್ ಗೌಡ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ.
ನಿರ್ದೇಶಕ ಮನೋಜ್ ಪಿ ನಡುಲುಮನೆ ಮಾತನಾಡಿ “ಮೇರಿ’ ಒಂದು ತಂಡದ ಪರಿಶ್ರಮ. ಥ್ರಿಲ್ಲರ್ ಸಬ್ಜೆಕ್ ಒಳಗೊಂಡ ಸಿನಿಮಾ. ಪೊಲೀಸ್ ಠಾಣೆಯಲ್ಲಿ ನಡೆಯುವ ಘಟನೆ ಚಿತ್ರದಲ್ಲಿದೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಿಕ್ಕಮಗಳೂರಿನ ಜಿಲ್ಲೆಯ ಕಾಡು ಮಧ್ಯದಲ್ಲಿರುವ ಒಂದು ಗ್ರಾಮದ ಪೊಲೀಸ್ ಠಾಣೆಗೆ ಹೊಸದಾಗಿ ನಿಯೋಜನೆಯಾದ ಎಸ್‌ಐ ಮುಂದೆ ಒಂದು ಹುಡುಗಿ ತನ್ನ ಮೇಲೆ ರೇಪ್ ಆಗಿದೆ ಎಂದು ಹೇಳಿದಾಗ ಆ ದಿನ ಏನೇನು ಘಟನೆ ನಡೆಯುತ್ತೆ ಅನ್ನೋದು ಈ ಸಿನಿಮಾದ ಎಳೆ’ ಎಂದು ಚಿತ್ರದ ಬಗ್ಗೆ ಹೇಳಿದರು.
ಇದನ್ನೂ ಓದಿ:ನಾಗ್ಪುರ ಟೆಸ್ಟ್ ಗೆದ್ದ ಕೂಡಲೇ ಜಡೇಜಾಗೆ ಶಾಕ್: ಪಂದ್ಯ ಶುಲ್ಕದ 25% ದಂಡ
ನಟ ವಿಕಾಶ್ ಉತ್ತಯ್ಯ ಮಾತನಾಡಿ ಈ ಚಿತ್ರದಲ್ಲಿ ಎಸ್‌ಐ ಪಾತ್ರ ಮಾಡಿದ್ದೇನೆ. ರವಿಕುಮಾರ್ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾ ತುಂಬಾ ವಿಭಿನ್ನವಾಗಿ ಸಿನಿಮಾ ಮೂಡಿ ಬಂದಿದೆ ಎಂದರು.
ನಟಿ ತೇಜಸ್ವಿನಿ ಶರ್ಮಾ ಮಾತನಾಡಿ ನನ್ನ ಪಾತ್ರ ಸಿನಿಮಾ ರಿಲೀಸ್ ಆದ ಮೇಲೆ ಮಾತನಾಡುವ ಹಾಗಿದೆ. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ ಎಂದು ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದರು. ನಟಿ ಅನೂಷ ಕೃಷ್ಣ ಮಾತನಾಡಿ, ನನ್ನ ಕ್ಯಾರೆಕ್ಟರ್ ತುಂಬಾ ಚೆನ್ನಾಗಿ ನಿರ್ದೇಶಕರು ಬರೆದಿದ್ದಾರೆ. ಈ ಪಾತ್ರ ನಾನೇ ಮಾಡಬೇಕು ಎಂದು ನಿರ್ದೇಶಕರ ಬಳಿ ಹೇಳಿದ್ದೆ. ಅಷ್ಟು ಸ್ಟ್ರಾಂಗ್ ಆಗಿದೆ ಪಾತ್ರ. ಎಲ್ಲರೂ ತುಂಬಾ ಪರಿಶ್ರಮದಿಂದ ಈ ಸಿನಿಮಾ ಮಾಡಿದ್ದೇವೆ’ ಎಂದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.