Murphy: ʼಮರ್ಫಿʼಗೆ ಸಾಥ್ ನೀಡಿದ ನಟಿಮಣಿಯರು
Team Udayavani, Oct 14, 2024, 11:46 AM IST
ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ “ಮರ್ಫಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನವರಾತ್ರಿ ಹಬ್ಬದ ಸುಂದರ್ಭದಲ್ಲಿ ಚಿತ್ರತಂಡ ಸ್ಯಾಂಡಲ್ ವುಡ್‌ನ 9 ನಟಿಯರ ಕೈಯಿಂದ ಟ್ರೇಲರ್ ರಿಲೀಸ್ ಮಾಡಿಸಲಾಯಿತು. ಪ್ರಿಯಾಂಕಾ ಉಪೇಂದ್ರ, ಅಮೃತಾ ಅಯ್ಯಂಗಾರ್, ರಾಗಿಣಿ ದ್ವಿವೇದಿ, ಖುಷಿ ರವಿ, ಮೇಘನಾ ಗಾಂವ್ಕರ್, ಸಪ್ತಮಿ ಗೌಡ, ಧನ್ಯ ರಾಮ್ ಞಕುಮಾರ್, ರೀಶ್ಮಾ ನಾಣಯ್ಯ, ಅಂಕಿತಾ ಅಮರ್ ಭಾಗಿಯಾಗಿದ್ದರು.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಾಯಕ ಪ್ರಭು ಮುಂಡ್ಕೂರು, ಕೆಲವೊಮ್ಮೆ ನಟರಿಗೆ ಒಂದು ಕಥೆ ಕಾಡುತ್ತಿರುತ್ತದೆ. ಈ ರೀತಿ ಕಥೆ ಮಾಡಬೇಕು ಅನಿಸುತ್ತದೆ. ಮರ್ಫಿ ಕಥೆ ಕೂಡ ನನ್ನ ತುಂಬಾ ಕಾಡಿತ್ತು. ಈ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದೇವೆ. ನಾನು ತುಂಬಾ ಸಿನಿಮಾದಲ್ಲಿ ನಟಿಸಿದ್ದೇನೆ. 9 ನಟಿಯರು ನನ್ನ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಮರ್ಫಿ ಜನರಿಗೆ ಸಿನಿಮ್ಯಾಟಿಕ್ ಫೀಲ್ ಕೊಡುತ್ತದೆ, ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅದ್ಭುತ ಟೆಕ್ನಿಕಲ್ ಟೀಂ ನಮ್ಮ ಚಿತ್ರಕ್ಕಾಗಿ ದುಡಿದಿದೆ ಎಂದರು.
ನಿರ್ದೇಶಕರಾದ ಬಿಎಸ್‌ಪಿ ವರ್ಮಾ ಮಾತನಾಡಿ, ಅದ್ಭುತ ತಂಡದ ಜೊತೆ ಕೆಲಸ ಮಾಡಿದ ಖುಷಿ ನನ್ನಲ್ಲಿದೆ. ಇದೇ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರು.
ಪ್ರಭು ಮುಂಡ್ಕೂರ್, ಚಿತ್ರಕಥೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್. ಕ್ಯಾಮೆರಾ ಹಿಡಿದ್ದಾರೆ. ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್‌ನಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್‌ಪಿ ವರ್ಮಾ ಮರ್ಫಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಮರ್ಫಿಯಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ, ರಜತ್ ಹೆಗ್ಡೆ, ಕೀರ್ತನ್ ಹೊಳ್ಳ ಮತ್ತು ಸಿಲ್ವೆಸ್ಟರ್ ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್ ಪ್ರದೀಪ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರ 18ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.