Toofaan; ಭರವಸೆ ಮೂಡಿಸಿದ ತೂಫಾನ್ ನೋಟ
Team Udayavani, Jul 8, 2024, 5:40 PM IST
ಸಂಪೂರ್ಣ ಹೊಸಬರ ತಂಡ ಸೇರಿ ಮಾಡಿರುವ “ತೂಫಾನ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಾರ್ ಸಿನಿಮಾಗಳ ಮೇಕಿಂಗ್ ರೀತಿಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದ ಜೊತೆಗೆ ಪರಭಾಷೆಯಿಂದಲೂ ಟೀಸರ್ ಗೆ ಜೈ ಎಂದಿದ್ದಾರೆ. ಶರೀಫ ಬೇಗಂ ನದಾಫ್, ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಆರ್.ಚಂದ್ರ ಕಾಂತ್ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ಅನುಷಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಆರ್. ಚಂದ್ರಕಾಂತ್, “ಈ ಸಿನಿಮಾ ನಾಯಕ ರೋಶನ್ ಅವರ ಕನಸು. ಅವರು ಕಥೆ ಹೇಳಿ ನಾನೇ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡರು. 1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಎಳೆಯನ್ನು ಹೊಂದಿದೆ. ಶೇ 50ರಷ್ಟು ಚಿತ್ರೀಕರಣ ಮುಗಿದಿದೆ. ನಿರ್ಮಾಪಕರ ಒತ್ತಾಯದ ಮೇರೆಗೆ ಮೊದಲ ನೋಟ ತೋರಿಸಲಾಗಿದೆ. ಇದು ಟೀಸರ್, ಟ್ರೇಲರ್ ಅಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ನಮ್ಮ ಚಿತ್ರ ಹೇಗೆ ಬರುತ್ತಿದೆ, ಯಾವ ತರಹದಲ್ಲಿ ಇದೆ ಎಂಬುದನ್ನು ತೋರಿಸಲು ಇದನ್ನು ಸಿದ್ಧಪಡಿಸಲಾಗಿದೆ. ಹಿಂದೆ “ಭೈರ್ಯ-07′ ಹೆಸರು ಇತ್ತು. ಭೈರ್ಯ ನಾಯಕನ ಹೆಸರು ಆಗಿದ್ದು, ಬೇರೆ ತಿರುವು ಇರಲಿ ಅಂತ ತೂಫಾನ್ ಟೈಟಲ್ ಇಡಲಾಗಿದೆ. ಮುಖ್ಯ ಖಳನಾಯಕನಾಗಿ ಭೀಷ್ಮರಾಮಯ್ಯ ಉಳಿದಂತೆ ರಂಗಾಯಣ ರಘು, ಅಶ್ವಿನ್ ಹಾಸನ್, ಸೂರ್ಯ ಪ್ರವೀಣ್, ಅಯ್ಯಪ್ಪ ಶರ್ಮಾ, ಬಿ.ಸುರೇಶ್, ಉಗ್ರಂ ರವಿ ನಟಿಸಿದ್ದಾರೆ’ ಎಂದರು.
ನಾಯಕ ರೋಶನ್ ಮಾತನಾಡಿ, “ಕನ್ನಡ ಸಿನಿಮಾಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲವೆಂಬ ಆಪಾದನೆ ಇದೆ. ಪ್ರತಿಭೆ ಇರುವ ಇಂತಹ ನಿರ್ದೇಶಕರಿಗೆ ಅವಕಾಶ ಕೊಡಬೇಕು. ನಾನು ಯಶ್ ಗರಡಿಯಲ್ಲಿ ಪಳಗಿದವನು. ಅವರು ಸಿನಿಮಾದ ತುಣುಕುಗಳನ್ನು ನೋಡಿಲ್ಲ. ಖಂಡಿತವಾಗಿಯೂ ಅವರಿಗೆ ತೋರಿಸುತೇನೆ. ಒನ್‌ಲೈನ್ ನನ್ನದು. ಅದಕ್ಕೆ ಸುಂದರವಾದ ಆಕಾರ ಕೊಡುತ್ತಿರುವುದು ನಿರ್ದೇ ಶಕರು. ವಿದ್ಯಾವಂತರ ಮಕ್ಕಳು ಮುಂದು ಬರುವಂತೆ, ಒಬ್ಬ ಆಟೋ ಚಾಲಕನ ಮಗನಾಗಿ ಚಿಕ್ಕ ಕನಸು ಕಂಡಿಲ್ಲ. ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ತರುವ ಛಲ ಬಂದಿದೆ. ಎರಡು ವರ್ಷದ ಶ್ರಮ ಇಲ್ಲಿಯವರೆಗೂ ತಂದು ನಿಲ್ಲಿಸಿದೆ’ ಎಂದರು.
ನಾಯಕಿ ಅನುಷಾ ರೈ ಅವರಿಗೂ ಈ ಸಿನಿಮಾ ಮೇಲೆ ವಿಶ್ವಾಸವಿದೆ. “ಮುಗ್ಧ ಹುಡುಗಿ, ಯಾರಿಗೂ ಹೆದರದ ಹಾಗೂ ಮಹಾರಾಜರ ಮಗಳು ಯುವರಾಣಿ ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು’ ನಾಯಕಿ ಅನುಷಾ ರೈ ಪಾತ್ರದ ಪರಿಚಯ ಮಾಡಿ ಕೊಂಡರು.
ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ, ಗಂಗು ಛಾಯಾಗ್ರಹಣ, ನರಸಿಂಹ ಸಾಹಸವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.