ಕನ್ನಡ ಚಿತ್ರಗಳ ರಿಮೇಕ್‌ನತ್ತ ಪರ ಭಾಷಾ ಕಲಾವಿದರ ಚಿತ್ತ
Team Udayavani, Apr 21, 2020, 10:27 AM IST
ಕೋವಿಡ್ 19 ಎಫೆಕ್ಟ್ ಸದ್ಯಕ್ಕೆ ಇಡೀ ಚಿತ್ರರಂಗವನ್ನೆ ಸ್ತಬ್ಧ ಮಾಡಿದೆ. ಚಿತ್ರ ನಿರ್ಮಾಣವಿಲ್ಲದೆ, ಪ್ರದರ್ಶನವಿಲ್ಲದೆ ಚಿತ್ರರಂಗ ಕಳೆಗುಂದಿದೆ. ಈಗಾಗಲೇ ಬಿಡುಗಡೆಗೆ ರೆಡಿಯಾಗಿರುವ ಚಿತ್ರಗಳು, ಅಧಂìಬರ್ಧ ಶೂಟಿಂಗ್ ಆಗಿರುವ ಚಿತ್ರಗಳ ನಿರ್ಮಾಪಕರು ಮುಂದೇನು ಅಂತ ತಿಳಿಯದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಒಟ್ಟಾರೆ ಸದ್ಯದ ಮಟ್ಟಿಕೆ ಕನ್ನಡ ಚಿತ್ರರಂಗ ಮಂಕು ಹಿಡಿದು ಕೂತಿದೆ.
ಇದರ ನಡುವೆಯೇ ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದ್ದ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ ಹಲವು ಚಿತ್ರಗಳನ್ನು ತಮಿಳು, ತೆಲುಗಿಗೆ ರಿಮೇಕ್ ಮಾಡಲು ಅಲ್ಲಿನ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರು ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಲವ್ ಮಾಕ್ಟೇಲ್ ಚಿತ್ರವನ್ನು ನೋಡಿದ ತೆಲುಗು ನಟ ಅಲ್ಲು ಸಿರೀಶ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅಲ್ಲದೆ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲೂ ಆಸಕ್ತಿ ತೋರಿಸಿದ್ದರು. ಇದರ ಜೊತೆಗೆ ಹಲವು ತೆಲುಗು ಮತ್ತು ತಮಿಳು ನಿರ್ಮಾಪಕರು ಲವ್ ಮಾಕ್ಟೇಲ್ ರಿಮೇಕ್ ಮಾಡಲು ಒಲವು ತೋರಿದ್ದಾರೆ.
ಸದ್ಯ ಈ ಚಿತ್ರದ ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅಧಿಕೃತ ಸುದ್ದಿ ಹೊರಬೀಳುವ ಸಾಧ್ಯತೆ ಇದೆ. ಇನ್ನು ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಚಿತ್ರ ಕೂಡ ತೆಲಪಗಿಗೆ ರಿಮೇಕ್ ಆಗುತ್ತಿದೆ. ಈಗಾಗಲೇ ಇದರ ರಿಮೇಕ್ ಕೆಲಸಗಳು ನಡೆಯುತ್ತಿದ್ದು, ನಿರ್ದೇಶಕ ದಯಾಳ್ ಪದ್ಮನಾಭನ್ ಅವರೇ ಆ ಕರಾಳ ರಾತ್ರಿ ತೆಲುಗು ರಿಮೇಕ್ ಗೆ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ ಶಿವಾಜಿ ಸುರತ್ಕಲ್, ಟಗರು, ಕೆಮಿಸ್ಟಿ$› ಆಫ್ ಕರಿಯಪ್ಪ ಸೇಪಿದಂತೆ ಹಲವು ಚಿತ್ರಗಳು ರಿಮೇಕ್ ಆಗುವ ಹಂತದಲ್ಲಿವೆ.
ತೆಲುಗು ಚಿತ್ರರಂಗದ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ಇತ್ತೀಚೆಗೆ ರಿಮೇಕ್ ಚಿತ್ರಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಈಗಾಗಲೇ ಸಮಂತಾ ಮಾಡಿರುವ ಕೆಲ ರಿಮೇಕ್ ಚಿತ್ರಗಳು ಅವರಿಗೆ ಸಾಕಷ್ಟು ಯಶಸ್ಸು ಹಾಗೂ ಹೆಸರನ್ನು ತಂದುಕೊಟ್ಟಿರುವುದರಿಂದ, ಸದ್ಯಕ್ಕೆ ಸಮಂತಾ ಚಿತ್ತ ಬೇರೆ ಭಾಷೆಗಳ ಸಕ್ಸಸ್ ಫುಲ್ ಚಿತ್ರಗಳತ್ತ ಅನ್ನೊದು ಟಾಲಿವುಡ್ ಮಂದಿಯಮಾತು.
ಈಗ ಅದೇ ರೀತಿ ಸಮಂತಾ, ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಚಿತ್ರವೊಂದರ ಮೇಲೆ ಕಣ್ಣು ಹಾಕಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು ದಿಯಾ. ಇತ್ತೀಚೆಗೆ ಸಮಂತಾ ಕನ್ನಡದ ದಿಯಾ ಚಿತ್ರ ನೋಡಿದ್ದು, ತುಂಬಾ ಇಷ್ಟಪಟ್ಟಿದ್ದಾರಂತೆ. ಹೀಗಾಗಿ ಈ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದಾರಂತೆ. ಇನ್ನು ಈ ಚಿತ್ರದಲ್ಲಿ ಸಮಂತಾ ಕೇವಲ ನಟಿಸುವುದು ಮಾತ್ರವಲ್ಲ, ಸ್ವತಃ ನಿರ್ಮಿಸುವುದಕ್ಕೂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಮಂತಾಗೆ ಕನ್ನಡದ ರಿಮೇಕ್ ಚಿತ್ರ ಹೊಸದೇನಲ್ಲ. ಈ ಹಿಂದೆ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಯೂ ಟರ್ನ್ ಚಿತ್ರವನ್ನು ನಿರ್ದೇಶಕ ಪವನ್ ಕುಮಾರ್ ತೆಲುಗು ಹಾಗೂ ತಮಿಳಿಗೆ ರಿಮೇಕ್ ಮಾಡಿದ್ದರು. ಈ ಚಿತ್ರದಲ್ಲಿ ಸಹ ಸಮಂತಾ ನಟಿಸಿದ್ದರು. ಅಲ್ಲದೆ ಇತ್ತೀಚೆಗೆ ತೆರೆ ಕಂಡ ಜಾನು ಸಹ ತಮಿಳಿನ 99 ಚಿತ್ರದ ರಿಮೇಕ್ ಆಗಿತ್ತು. ಒಟ್ಟಾರೆ ಕನ್ನಡದ ದಿಯಾ ಸಮಂತಾಗೆ ಇಷ್ಟವಾಗಿದ್ದು, ಕೋವಿಡ್ 19 ಹಾವಳಿ ಕಡಿಮೆಯಾಗುತ್ತಿದ್ದಂತೆ ರಿಮೇಕ್ ಸುದ್ದಿ ಹೊರಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ದಿಯಾ ಚಿತ್ರವನ್ನು ಕನ್ನಡದಲ್ಲಿ ಅಶೋಕ ನಿರ್ದೇಶಿಸಿದ್ದರು. ಇದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಥ್ರಿಲ್ಲರ್ ಪ್ರೇಮ ಕಥಾ ಹಂದರ ಹೊಂದಿತ್ತು. ನಟಿ ಖುಷಿ ರವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಕ್ಷಿತ್ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಕೃಷ್ಣ ಚೈತನ್ಯ ಚಿತ್ರವನ್ನು ನಿರ್ಮಿಸಿದ್ದರು. ದಿಯಾ ಬಿಡುಗಡೆಯಾದಾಗ ಆರಂಭದಲ್ಲಿ ಹೆಚ್ಚು ಜನರನ್ನು ತಲುಪದಿದ್ದರೂ ಆನ್‌ಲೈನ್ ಪ್ಲಾಟ್ ಫಾರಂನಲ್ಲಿ ಈ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ ಸಮಂತಾ ಅಕ್ಕಿನೇನಿ ಈ ಚಿತ್ರ ನೋಡಿ, ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.