ಎಚ್ ಡಿ ಕೋಟೆಯಲ್ಲಿ 77ನೇ ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನೇರಿ ಸಿನಿಮಾ
ಕನ್ನೇರು ಈ ಪರಿಯಾಗಿ ಜನರ ಮನಸ್ಸಗೆ ನಾಟುತ್ತೆ ಎಂಬ ಯಾವ ನಿರೀಕ್ಷೆಯೂ ಅವರಲ್ಲಿರಲಿಲ್ಲ.
Team Udayavani, May 23, 2022, 1:14 PM IST
ಬೆಂಗಳೂರು: ನೈಜ ಘಟನೆಯನ್ನು ನೈಜವಾಗಿಯೇ ತೋರಿಸಿದಾಗ ಆ ಸಿನಿಮಾ ಕಥೆಯಾಗಿ ಜನಮಾನಸದಲ್ಲಿ ಉಳಿದು ಬಿಡುತ್ತೆ. ಪದೇ ಪದೇ ವೀಕ್ಷಿಸಿದರೂ ಅದೊಂದು ಸಿನಿಮಾವಾಗಿ ಕಾಡುವುದಕ್ಕಿಂತ ಹೆಚ್ಚಾಗಿ, ನಮ್ಮ ಅಕ್ಕ ಪಕ್ಕದವರ ವ್ಯಥೆ ಏನೋ ಎಂಬ ಫೀಲ್ ಆಗುತ್ತದೆ. ಅಂಥದ್ದೊಂದು ಭಾವವನ್ನು ಮನಸ್ಸಿನಾಳದಲ್ಲಿ ಹುದುಗಿಡುವಂತೆ ಮಾಡಿರುವ ಸಿನಿಮಾ ಕನ್ನೇರಿ.
ಇದೊಂದು ಬುಡಕಟ್ಟು ಜನಾಂಗದ ಒಡಲ ಕಥೆ. ಕಾಡೇ ಸರ್ವಸ್ವ, ಕಾಡೇ ಜೀವನ, ಕಾಡು ಬಿಟ್ಟರೇ ಮತ್ತೊಂದು ಪ್ರಪಂಚದ ಅರಿವೇ ಇಲ್ಲದವರನ್ನು ಏಕಾಏಕಿ ಒಕ್ಕಲೆಬ್ಬಿಸಿದಾಗ, ಆ ಹೋರಾಟವೊಂದು ನಡೆದು ಕಡೆಗೆ ಹಸಿರು ತುಂಬಿದ ಪ್ರಕೃತಿಯ ನಡುವಿನ ಬದುಕು, ಪಟ್ಟಣಕ್ಕೆ ಬಂದು, ಹಕ್ಕಿಗಳ ಕಲರವ ಕೇಳಿದ ಕಿವಿ, ವಾಹನಗಳ ಶಬ್ಧವನ್ನು ಆಲಿಸುವಂತಾದಾಗ ಏನೆಲ್ಲಾ ಸಮಸ್ಯೆಗಳಾಗುತ್ತವೆ. ಮುಗ್ಧ ಹೆಣ್ಣು ಮಕ್ಕಳ ಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಟ್ಟಿದ್ದು ನೀನಾಸಂ ಮಂಜು.
ನಿರ್ದೇಶಕರು ಈ ಹಿಂದೆ ಮೂಕಹಕ್ಕಿ ಎಂಬ ನೈಜ ಚಿತ್ರಣವನ್ನು ತೆರೆದಿಟ್ಟ ಅನುಭವವಿತ್ತಾದರೂ, ಕನ್ನೇರು ಈ ಪರಿಯಾಗಿ ಜನರ ಮನಸ್ಸಗೆ ನಾಟುತ್ತೆ ಎಂಬ ಯಾವ ನಿರೀಕ್ಷೆಯೂ ಅವರಲ್ಲಿರಲಿಲ್ಲ. ಕಂಟೆಂಟ್ ಕೊಟ್ಟರೆ ಖಂಡಿತಾ ಜನಮಾನಸದಲ್ಲಿ ಇಂಥದ್ದೊಂದು ಸಿನಿಮಾ ಉಳಿಯುತ್ತೆ ಎಂಬುದಾಗಿತ್ತು. ಆದರೆ ಇದೀಗ ನಿರೀಕ್ಷೆಗೂ ಮೀರಿ ಕನ್ನೇರಿ ಮೇಲೆ ಪ್ರೇಕ್ಷಕರು ಪ್ರೀತಿ ತೋರುತ್ತಿದ್ದಾರೆ. ಎಚ್.ಡಿ.ಕೋಟೆಯ ಮಂಂಜುನಾಥ ಚಿತ್ರಮಂದಿರದಲ್ಲಿ 77ನೇ ದಿನ ಪೂರೈಸಿದೆ.
ಮತ್ತೊಂದು ಖುಷಿ ಎಂದರೆ 77ನೇ ದಿನ ದಾಟಿ, ನಂತರವೂ ಕೂಡ ಚಿತ್ರಮಂದಿರದಲ್ಲಿ ಜನ ಸಿನಿಮಾ ವೀಕ್ಷಿಸುತ್ತಿದ್ದಾರೆ. ನಮ್ಮ” ಕನ್ನೇರಿ ಸಿನಿಮಾ” ಜನಭರಿತ ಪ್ರದರ್ಶನ ಕಾಣುತ್ತಿದೆ ಗೆಳೆಯರೇ ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣಲು ಅಲ್ಲಿನ ಮುಖಂಡರು ,ಶಾಸಕರು ,ಸಚಿವರು ಮತ್ತು ಅಲ್ಲಿನ ಜನತೆ ಸಾಕಷ್ಟು ನಮ್ಮ ಚಿತ್ರ ತಂಡದ ಬೆನ್ನಿಗೆ ನಿಂತಿದ್ದಾರೆ. ಅವರೆಲ್ಲರಿಗೂ ನಮ್ಮ ತಂಡದ ವತಿಯಿಂದ ಧನ್ಯವಾದಗಳು ಎಂದು ಚಿತ್ರತಂಡ ಕೃತಜ್ಞತೆ ತಿಳಿಸಿದೆ.
ಚಿತ್ರದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತಾ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.