ಕನ್ನೇರಿ: ನೋಡ ನೋಡುತ್ತಾ ಕಾಡುವ ಚಿತ್ರ
Team Udayavani, Mar 7, 2022, 11:14 AM IST
ಹುಡುಗಿ ಮುತ್ತಮ್ಮ. ತಂದೆ-ತಾಯಿಯಿಲ್ಲದ ಈ ಹುಡುಗಿಯನ್ನು ಪ್ರೀತಿಯಿಂದ ಸಲಹುತ್ತಿರುತ್ತಾನೆ ವಯೋವೃದ್ಧ ಬೊಮ್ಮಜ್ಜ. ಕಾಡಿನ ಹಾಡಿಯಲ್ಲಿ ಸ್ವಚ್ಛಂದವಾಗಿ ಆಡಿಕೊಂಡು ಬೆಳೆಯುತ್ತಿದ್ದಮುತ್ತಮ್ಮ, ಸರ್ಕಾರ ಆದಿವಾಸಿಗಳನ್ನುಒಕ್ಕಲೆಬ್ಬಿಸಿದ್ದರಿಂದ ಕಾಡಿನಿಂದ ನಾಡಿಗೆ ಬರುವಂತಾಗುತ್ತಾಳೆ. ಹೀಗೆ ಕಾಡಿನಿಂದ ನಾಡಿಗೆ ಬರುವ ಮುತ್ತಮ್ಮನ ಜೀವನದಲ್ಲಿ ಏನೇನುತಿರುವುಗಳು ಎದುರಾಗುತ್ತವೆ? ಮುತ್ತಮ್ಮಳ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೆ? ಮುಗ್ಧ ಜನಜೀವನದ ಮೇಲೆ ನಗರೀಕರಣ ಮತ್ತು ಆಧುನಿಕತೆ ಬೀರುವ ಪರಿಣಾಮಗಳೇನು ಅನ್ನೋದು “ಕನ್ನೇರಿ’ ಚಿತ್ರದ ಕಥಾಹಂದರ.
ಕೆಲ ವರ್ಷಗಳ ಹಿಂದೆ ಕೊಡಗು ಮತ್ತು ಹಳೇ ಮೈಸೂರು ಭಾಗದಲ್ಲಿ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ, ಅದಕ್ಕೊಂದು ಸಿನಿಮಾ ರೂಪ ಕೊಟ್ಟು ತೆರೆಮೇಲೆ ತಂದಿದ್ದಾರೆ ನಿರ್ದೇಶಕನೀನಾಸಂ ಮಂಜು. ವನವಾಸಿಗಳ ಬದುಕು, ನಗರಜೀವನ ಚಿತ್ರಣ ಎರಡೂ ಎಳೆಯನ್ನೂ ಪೋಣಿಸಿಮನಮುಟ್ಟುವಂತೆ ಚಿತ್ರವನ್ನು ನಿರೂಪಣೆ ಮಾಡಿರುವ ನಿರ್ದೇಶಕರ ಪ್ರಯತ್ನ ಪ್ರಶಂಸನಾರ್ಹ.
ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರಕಥೆ ನಿರೂಪಣೆಗೆ ಇನ್ನಷ್ಟು ಹರಿತವಾಗಿದ್ದರೆ, ಮುತ್ತಮ್ಮನ ಕಥೆ ಇನ್ನಷ್ಟು ವೇಗವಾಗುವುದರ ಜೊತೆಗೆ ಇನ್ನಷ್ಟು ಆಳವಾಗಿ ಪ್ರೇಕ್ಷಕರಮನಮುಟ್ಟುವ ಸಾಧ್ಯತೆಗಳಿದ್ದವು. ಅದನ್ನು ಹೊರತುಪಡಿಸಿದರೆ “ಕನ್ನೇರಿ’ ಥಿಯೇಟರ್‌ನಹೊರಗೂ ನೋಡುಗರನ್ನು ಕಾಡುವ ಅಪರೂಪದಕಾಡಿನ ಕಥೆ ಎನ್ನಲು ಅಡ್ಡಿಯಿಲ್ಲ.ಇನ್ನು “ಕನ್ನೇರಿ’ ಮಹಿಳಾ ಪ್ರಧಾನಚಿತ್ರವಾಗಿದ್ದು, ಇಡೀ ಸಿನಿಮಾ ಮುತ್ತಮ್ಮ ಎಂಬಹರೆಯದ ಹುಡುಗಿಯ ಪಾತ್ರದ ಸುತ್ತ ಸಾಗುತ್ತದೆ.
ಮುತ್ತಮ್ಮನ ಪಾತ್ರದಲ್ಲಿ ಅರ್ಚನಾ ಮಧುಸೂಧನ್ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆಕರಿಸುಬ್ಬು, ಎಂ.ಕೆ ಮಠ, ಅನಿತಾ ಭಟ್, ಅರುಣ್ ಸಾಗರ್ ಅವರದ್ದು ಪಾತ್ರಕ್ಕೊಪ್ಪುವ ಅಚ್ಚುಕಟ್ಟು ಅಭಿನಯ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ ಗಮನ ಸೆಳೆಯುವಂತಿದೆ. ಹಸಿರಿನ ಸೌಂದರ್ಯ, ವನವಾಸಿಗಳ ಜೀವನ ಶೈಲಿ ತುಂಬ ಸೊಗಸಾಗಿ ಛಾಯಾಗ್ರಹಣದಲ್ಲಿ ಸೆರೆಹಿಡಿಯಲಾಗಿದೆ.
ಸಂಕಲನ ಕಾರ್ಯ ಮತ್ತು ಕಲರಿಂಗ್ ಕೆಲವು ಕಡೆಗೆನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು.ಕೆಲ ಲೋಪಗಳನ್ನು ಬದಿಗಿಟ್ಟರೆ, ನೋಡು ನೋಡುತ್ತಲೇ ನಿಧಾನವಾಗಿ ನೋಡುಗರನ್ನು ಒಂದು ಚಿಂತನೆ ಹಚ್ಚಿಸುವ “ಕನ್ನೇರಿ’ ಥಿಯೇಟರ್‌ನ ಹೊರಗೂ ಕೆಲಹೊತ್ತು ಕಾಡುತ್ತದೆ.
ಚಿತ್ರ: ಕನ್ನೇರಿ
ರೇಟಿಂಗ್: ***
ನಿರ್ಮಾಣ: ಬುಡ್ಡಿ ದೀಪ ಸಿನಿಮಾ ಹೌಸ್
ನಿರ್ದೇಶನ: ನೀನಾಸಂ ಮಂಜು
ತಾರಾಗಣ: ಅರ್ಚನಾ, ಕರಿಸುಬ್ಬು, ಎಂ.ಕೆ ಮಠ, ಅನಿತಾ ಭಟ್, ಅರುಣ್ ಸಾಗರ್ ಮತ್ತಿತರರು.
–ಕೆ.ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.