![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 22, 2021, 9:30 AM IST
ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್’ ಚಿತ್ರ ಬಾಕ್ಸಾಫೀಸ್‌ನಲ್ಲಿ 50 ಕೋಟಿ ಕ್ಲಬ್ ಸೇರಿ ಸುದ್ದಿಯಾಗಿತ್ತು. ಚಿತ್ರತಂಡ ಕೂಡ ಈ ಸಂಭ್ರಮವನ್ನು ಭರ್ಜರಿಯಾಗಿಯೇ ಆಚರಿಸಿತ್ತು. ಈಗ “ರಾಬರ್ಟ್’ ಶತಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ. ಇದರ ನಡುವೆಯೇ, “ರಾಬರ್ಟ್’ ಚಿತ್ರದ ಹಾಡು ಮತ್ತೂಂದು ದಾಖಲೆ ಬರೆದಿದೆ.
ಹೌದು, “ರಾಬರ್ಟ್’ ಚಿತ್ರದಲ್ಲಿ ಬರುವ “ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ… ನೀನಾ ಹೇಳಲೇ ಮಗನ, ನಿನ್ನ ನೋಡಿ ಸುಮ್ನೆ ಹೆಂಗಿರ್ಲಿ…’ ಎಂಬ ಉತ್ತರ ಕನ್ನಡ ಸೊಗಡಿನ ಹಾಡನ್ನು ನೀವೆಲ್ಲ ಕೇಳಿರುತ್ತೀರಿ. ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಇದೀಗ ಈ ಹಾಡಿನ ಲಿರಿಕಲ್ ವಿಡಿಯೋ ಯು-ಟ್ಯೂಬ್‌ನಲ್ಲಿ ಎರಡು ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ:‘ಮಹಾನಟಿ ನಾಪತ್ತೆ’ .. ನಟನ ತಮಾಷೆ ಟ್ವಿಟ್‍ಗೆ ಪೊಲೀಸರು ಏನಂದ್ರು ಗೊತ್ತಾ ?
ಕಳೆದ ಒಂದೂವರೆ ದಶಕದಿಂದ ಶ್ರೇಯಾ ಘೋಷಲ್ ಕನ್ನಡದಲ್ಲಿ ನೂರಾರು ಗೀತೆಗಳನ್ನು ಹಾಡಿದ್ದರೂ, ಉತ್ತರ ಕರ್ನಾಟಕ ಶೈಲಿಯ ಗೀತೆಗೆ ಧ್ವನಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ. ಮೊದಲ ಬಾರಿಗೆ ಹಾಡಿರುವ ಈ ಶೈಲಿಯ ಹಾಡಿಗೆ ಇಷ್ಟೊಂದು ದೊಡ್ಡ ಪ್ರತಿಕ್ರಿಯೆ ಸಿಗುತ್ತಿರುವುದರಿಂದ, ಶ್ರೇಯಾ ಘೋಷಾಲ್ ಕೂಡ ಫುಲ್ ಖುಷಿ ಆಗಿದ್ದಾರೆ. ಯು-ಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿರುವ ಈ ಹಾಡಿನ ಬಗ್ಗೆ, ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಾ ಸಂತಸ ವ್ಯಕ್ತಪಡಿಸಿದ್ದಾರೆ
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಶ್ರೇಯಾ ಘೋಷಾಲ್, “ಕಣ್ಣು ಹೊಡಿಯಾಕ… ಹಾಡು 20 ಮಿಲಿಯನ್ ವೀವ್ಸ್ ಪಡೆದು ಕೊಂಡಿದೆ. ಮೊದಲ ಬಾರಿಗೆ ನಾನು ಉತ್ತರ ಕರ್ನಾಟಕದ ಶೈಲಿಯಲ್ಲಿ ಈ ಹಾಡು ಹೇಳಿದ್ದೇನೆ. ಎಂತಹ ಸುಂದರವಾದ ಭಾಷೆ ಇದು. ಈ ಹಾಡಿನಿಂದ ನಾನು ತುಂಬ ಖುಷಿಪಟ್ಟಿದ್ದೇನೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಹಾಡು ಬರೆದ ಯೋಗರಾಜ್ ಭಟ್, ನಟ ದರ್ಶನ್, ನಟಿ ಆಶಾ ಭಟ್ ಅವರಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.
ಇನ್ನು ಶ್ರೇಯಾ ಘೋಷಾಲ್ ಟ್ವೀಟ್‌ಗೆ ಪ್ರತಿಯಾಗಿ ರೀ-ಟ್ವೀಟ್ ಮಾಡಿರುವ ನಿರ್ದೇಶಕ ಯೋಗರಾಜ್ ಭಟ್ ಕೂಡ “ಅಸಾಧಾರಣ ಕಂಠದ ಒಡತಿ, ಸರಳ ಸುಂದರಿ, ನಾಡಿನ ಅತ್ಯಂತ ನೆಚ್ಚಿನ ಗಾಯಕಿ ಶ್ರೇಯಾ ಘೋಷಾಲ್ ಅವರಿಗೆ ಈ ಹಾಡು ಹಾಡಿದ್ದಕ್ಕೆ ನಮನ ಮತ್ತು ಧನ್ಯವಾದ’ ಎಂದಿದ್ದಾರೆ. ಇನ್ನು ಶ್ರೇಯಾ ಘೋಷಾಲ್ ಅವರಿಗೆ ಧನ್ಯವಾದ ಹೇಳಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, “ನಿಮ್ಮ ಅದ್ಭುತ ಧ್ವನಿಯಿಂದ ಇಂತಹ ಮ್ಯಾಜಿಕ್‌ಗಳು ಸೃಷ್ಟಿಯಾಗುತ್ತವೆ’ ಎಂದಿದ್ದಾರೆ. “ರಾಬರ್ಟ್’ ನಾಯಕ ನಟಿ ಆಶಾ ಭಟ್ ಕೂಡ “ನಿಮ್ಮ ಧ್ವನಿ ಮತ್ತೂಮ್ಮೆ ಮ್ಯಾಜಿಕ್ ಮಾಡಿದೆ’ ಎಂದಿದ್ದಾರೆ. ಶ್ರೇಯಾ ಖುಷಿಯಿಂದ ಮಾಡಿದ ಟ್ವೀಟ್‌ಗೆ ಚಿತ್ರತಂಡ ಕೂಡ ಅಭಿನಂದನೆ ತಿಳಿಸಿದೆ.
ಒಟ್ಟಾರೆ ಶ್ರೇಯಾ ಉತ್ತರ ಕರ್ನಾಟಕ ಶೈಲಿಯ ಹಾಡು ಸೂಪರ್ ಹಿಟ್ ಆಗಿದ್ದು, ಮುಂದಿನ ದಿನಗಳಲ್ಲಿ ಶ್ರೇಯಾ ಧ್ವನಿಯಲ್ಲಿ ಇನ್ನಷ್ಟು ಇಂಥದ್ದೇ ಹಾಡುಗಳು ಮೂಡಿಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಕೇಳುಗರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.