Kantara 2: ʼಕಾಂತಾರ-2ʼ ಶೂಟಿಂಗ್ ಆರಂಭಕ್ಕೆ ಡೇಟ್ ಫಿಕ್ಸ್; ಯಾವಾಗ ರಿಲೀಸ್?
Team Udayavani, Aug 21, 2023, 5:29 PM IST
ಬೆಂಗಳೂರು: ಕನ್ನಡದ ʼಕಾಂತಾರʼ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆದದ್ದು ಗೊತ್ತೇ ಇದೆ. ವರ್ಲ್ಡ್ ವೈಡ್ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ʼಕಾಂತಾರʼ ದ 2ನೇ ಭಾಗ ಅಂದರೆ ಪ್ರೀಕ್ವೆಲ್ ಬಗ್ಗೆ ಜನರಿಗೆ ದೊಡ್ಡಮಟ್ಟದ ನಿರೀಕ್ಷೆಯಿದೆ.
16 ಕೋಟಿ ರೂ. ಬಜೆಟ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ತಯಾರಾದ ʼಕಾಂತಾರʼ ತುಳುನಾಡಿನ ದೈವದ ಕಥೆಯನ್ನು ಒಳಗೊಂಡಿದೆ. ತುಳುನಾಡಿನ ಮಣ್ಣಿನ ಕಥೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಸಿನಿಮಾ, ಬಳಿಕ ಇತರ ಭಾಷೆಗೆ ಡಬ್ ಆಗಿ ತೆರೆಕಂಡಿತ್ತು.
ಪ್ರಾದೇಶಿಕ ಭಾಷೆಯಲ್ಲೂ ಹಿಟ್ ಆದ ಬಳಿಕ ಸಿನಿಮಾದ ಪ್ರೀಕ್ವೆಲ್ ನ್ನು ತೆರೆಗೆ ತರುವುದಾಗಿ ರಿಷಬ್ ಶೆಟ್ಟಿ ಇದೇ ವರ್ಷದ ಫೆಬ್ರವರಿಯಲ್ಲಿ ಸಿನಿಮಾದ 100 ದಿನದ ಸಂಭ್ರಮದಲ್ಲಿ ಹೇಳಿದ್ದರು. ನೀವು ನೋಡಿರುವುದು ಸಿನಿಮಾದ 2ನೇ ಭಾಗ ಮುಂದೆ ಬರಲಿರುವುದು ಸಿನಿಮಾದ ಪ್ರೀಕ್ವೆಲ್ ಎಂದು ಹೇಳಿ ಕುತೂಹಲ ಹುಟ್ಟಿಸಿದ್ದರು.
ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎನ್ನುವುದನ್ನು ಈ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದರು.“ರಿಷಬ್ ಶೆಟ್ಟಿ ಅವರು ʼಕಾಂತಾರ-2” ಸಿನಿಮಾದ ಕಥೆ ಬರೆಯುತ್ತಿದ್ದಾರೆ. ಅದರ ತಯಾರಿಗಾಗಿ, ಚಿತ್ರಕ್ಕಾಗಿ ಸಂಶೋಧನೆ ನಡೆಸಲು ಎರಡು ತಿಂಗಳು ತಮ್ಮ ರೈಟಿಂಗ್ ಟೀಮ್ ನೊಂದಿಗೆ ರಿಷಬ್ ಕರಾವಳಿ ಕರ್ನಾಟಕದ ಕಾಡುಗಳನ್ನು ಸುತ್ತಲಿದ್ದಾರೆ”ಎಂದು ಹೇಳಿದ್ದರು.
ಇದೀಗ ʼಕಾಂತಾರ-2ʼ ಬಗ್ಗೆ ಹೊಸ ಅಪ್ಡೇಟ್ ವೊಂದು ಹೊರ ಬಂದಿದ್ದು, ಶೂಟಿಂಗ್ ಶೆಡ್ಯೂಲ್ ನ್ನು ಚಿತ್ರತಂಡ ಹಾಕಿಕೊಂಡಿದೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ರಿಷಬ್ ಮತ್ತು ತಂಡದವರು ʼಕಾಂತಾರ-2ʼ ಬರವಣಿಗೆ ಹಂತವನ್ನು ಮುಗಿಸಿದ್ದಾರೆ. ಸದ್ಯ ಪ್ರೀ-ಪ್ರೊಡಕ್ಷನ್ ನಲ್ಲಿ ಚಿತ್ರತಂಡ ನಿರತವಾಗಿದೆ. ಮೊದಲ ಹಂತದ ಶೂಟ್ ಗಾಗಿ ಕಾಡು, ಭೂಮಿ ಮತ್ತು ನೀರಿನ ಅಗತ್ಯವಿರುವುದರಿಂದ ಮೊದಲ ಭಾಗವನ್ನು ರಿಷಬ್ ಹುಟ್ಟೂರಾದ ಕುಂದಾಪುರದಲ್ಲಿ ಚಿತ್ರೀಕರಿಸಿದರೆ, ಆ ಬಳಿಕ ಕೆಲ ದೃಶ್ಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ʼಪಿಂಕ್ ವಿಲ್ಲಾʼಗೆ ಮೂಲಗಳು ಹೇಳಿರುವುದಾಗಿ ವರದಿ ಮಾಡಿದೆ.
ʼಕಾಂತಾರ-2ʼ ಬಿಗ್ ಬಜೆಟ್ ಮತ್ತು ಪಾತ್ರವರ್ಗದಲ್ಲಿ ದೊಡ್ಡದಾಗಿರಲಿದೆ. ಒಟ್ಟು 4 ತಿಂಗಳು ಸಿನಿಮಾವನ್ನು ಚಿತ್ರೀಕರಿಸಲಾಗುತ್ತದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಶೂಟ್ ಮುಗಿಯಲಿದ್ದು,2024 ರ ಕೊನೆಯಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆಯಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.