ಶೂಟಿಂಗ್ ಶುರುವಾಗೋ ಮುನ್ನವೇ ʼಕಾಂತಾರ-1ʼ ಓಟಿಟಿ ಹಕ್ಕನ್ನು ಖರೀದಿಸಿದ ಅಮೇಜಾನ್ ಪ್ರೈಮ್
Team Udayavani, Mar 20, 2024, 10:40 AM IST
ಬೆಂಗಳೂರು: ರಿಷಬ್ ಶೆಟ್ಟಿ ಅವರ ʼಕಾಂತಾರ-1ʼ ಅನೌನ್ಸ್ ಆದ ದಿನದಿಂದ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ʼಕಾಂತಾರʼ ಸೃಷ್ಟಿಸಿದ ದಾಖಲೆ ಎಂದರೆ ತಪ್ಪಾಗದು. ಸಿನಿಮಾ ಪ್ರೀಕ್ವೆಲ್ ದೊಡ್ಡಮಟ್ಟದಲ್ಲಿ ತೆರೆ ಕಾಣಲಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತಷ್ಟು ಹೈಪ್ ಹೆಚ್ಚಿಸಿ ಪ್ರೇಕ್ಷಕರನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ.
ʼಕಾಂತಾರʼ ಸಿನಿಮಾ ಮೊದಲು ಕನ್ನಡದಲ್ಲಿ ರಿಲೀಸ್ ಆಗಿತ್ತು. ಆ ಬಳಿಕ ನಾನಾ ಭಾಷೆಗೆ ಡಬ್ ಆಗಿ ಪ್ಯಾನ್ ಇಂಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಸಿನಿಮಾದ ಪ್ರೀಕ್ವೆಲ್ ತೆರೆಗೆ ತರಲು ರಿಷಬ್ ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ. ಮುಹೂರ್ತದ ಬಳಿಕ ಚಿತ್ರೀಕರಣದ ಆರಂಭಕ್ಕೆ ಪೂರ್ವ ತಯಾರಿಯನ್ನು ನಡೆಸುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಇದೀಗ ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಸಿನಿಮಾದ ಓಟಿಟಿ ಖರೀದಿ ಹಕ್ಕನ್ನು ಪ್ರತಿಷ್ಠಿತ ಓಟಿಟಿ ಫ್ಲಾಟ್ ಫಾರ್ಮ್ ವೊಂದು ಖರೀದಿಸುವ ಮೂಲಕ ʼಕಾಂತಾರ-1ʼ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರʼ ಸಿನಿಮಾವನ್ನು ಅಮೇಜಾನ್ ಪ್ರೈಮ್ ಓಟಿಟಿಗೆ ಖರೀದಿಸಿತ್ತು. ಇದೀಗ ʼಕಾಂತಾರ-1ʼ ಸಿನಿಮಾವನ್ನೂ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಅಮೇಜಾನ್ ಪ್ರೈಮ್ ಖರೀದಿಸಿದೆ. ಥಿಯೇಟರ್ ನಲ್ಲಿ ರಿಲೀಸ್ ಆದ ಒಂದೂವರೆ ಅಥವಾ ಎರಡು ತಿಂಗಳ ಬಳಿಕ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ʼಕಾಂತಾರ-1ʼ ಸಿನಿಮಾದ ಓಟಿಟಿ ಹಕ್ಕು ದೊಡ್ಡಮಟ್ಟದ ಮೊತ್ತಕ್ಕೆ ಪ್ರೈಮ್ ಖರೀದಿಸಿದೆ ಎನ್ನಲಾಗಿದೆ. ಫೋಸ್ಟರ್ ವೊಂದನ್ನು ಹಂಚಿಕೊಂಡು ಅಮೇಜಾನ್ ಪ್ರೈಮ್ ʼಕಾಂತಾರ-1ʼ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆದ ಬಳಿಕ ಪ್ರೈಮ್ ನಲ್ಲಿ ಸಿಗುತ್ತದೆ ಎಂದು ಹೇಳಿದೆ.
ಮುಂಬೈನಲ್ಲಿ ನಡೆದ ಅಮೇಜಾನ್ ಪ್ರೈಮ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ಭಾಗವಹಿಸಿದ್ದರು. “ನಮ್ಮ ಹಳ್ಳಿಯ ಕಥೆ ಮತ್ತು ಜಾನಪದವನ್ನು ಬಿಗ್ ಸ್ಕ್ರೀನ್ ನಲ್ಲಿ ತುರುವುದು ನನ್ನ ಕನಸಾಗಿತ್ತು. ಈ ಕನಸನ್ನು ʼಕಾಂತಾರʼ ಮೂಲಕ ನೀವೆಲ್ಲ ಸಾಕಾರಗೊಳಿಸಿದ್ದೀರಿ. ಸಿನಿಮಾದ ಚಿತ್ರೀಕರಣಕ್ಕೆ ನಮ್ಮ ಊರಿನಲ್ಲಿ ದೊಡ್ಡ ಸೆಟ್ ನ್ನು ಹಾಕಲಾಗಿದೆ. ಶೀಘ್ರದಲ್ಲಿ ಅಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ” ಎಂದು ರಿಷಬ್ ಹೇಳಿದ್ದಾರೆ.
ಇನ್ನು ಸಿನಿಮಾದ ನಾಯಕಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿಗೌಡ, ರುಕ್ಮಿಣಿ ವಸಂತ್ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿದೆ. ಈ ಪೈಕಿ ರುಕ್ಮಿಣಿ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ. ಆದರೆ ಇದು ಇನ್ನಷ್ಟೇ ಅಧಿಕೃತವಾಗಬೇಕಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.