ಟೀಸರ್‌ನಲ್ಲಿ ಕಪಾಲ ದರ್ಶನ: ಹೊಸಬರ ಹಾರರ್ ಸಿನಿಮಾ ಬಿಡುಗಡೆಗೆ ಸಿದ್ಧ
Team Udayavani, Aug 24, 2022, 11:13 AM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಕಪಾಲ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಸೆನ್ಸಾರ್‌ನಿಂದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಕಪಾಲ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ಕಪಾಲ’ ಸಿನಿಮಾದ ಮೊದಲ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
“ಎಸ್‌ಕಾರ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಸೌಮ್ಯಾ ಕೆ. ಶೆಟ್ಟಿ ನಿರ್ಮಿಸಿರುವ “ಕಪಾಲ’ ಚಿತ್ರಕ್ಕೆ ವಿನಯ್ ಯದುನಂದನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆಗಳಾದ ಅಭಿಮನ್ಯು ಪ್ರಜ್ವಲ್, ಆರ್ಯನ್ ಚೌಧರಿ, ಸುಷ್ಮಾ ಗೌಡ, ಪ್ರತೀಕ್ಷಾ ಗೌಡ, ಅಶೋಕ್ ಹೆಗ್ಡೆ, ಬಿ. ಎಂ. ಗಿರಿರಾಜ್, ಯುಮುನಾ ಶ್ರೀನಿಧಿ, ಗವಿಸಿದ್ಧಯ್ಯ ಆರ್, ನಿತಿನ್ ಬಸವರಾಜು, ನಾಗಭೂಷಣ್ ದ್ರಾವಿಡ್, ಸಂಧ್ಯಾ ಅರಕೆರೆ, ಪೃಥ್ವಿ ದ್ರಾವಿಡ್, ವಿಲಾಸ್ ರಾವ್, ಅನಿಲ್ ಚಿಮ್ಮಯ್ಯ, ಸಾಯಿನಾಗ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಕಪಾಲ’ ಟೀಸರ್ ಬಿಡುಗಡೆಯ ಬಳಿಕ ಮಾತನಾಡಿದ, ನಿರ್ದೇಶಕ ವಿನಯ್ ಯದುನಂದನ್, “ಇದೊಂದು ಸಸ್ಪೆನ್ ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾ. ಕೋವಿಡ್ ಆತಂಕದ ನಡುವೆಯೇ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಮೂರು ಕಾಲಘಟ್ಟದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಆರಂಭವಾಗುವ ಸಿನಿಮಾದ ಕಥೆ, ಹಳೆಯ ಮನೆಯೊಂದರಲ್ಲಿ ಹೋಗಿ ನಿಲ್ಲುತ್ತದೆ. ಹೊಸಥರದಲ್ಲಿ ಕಥೆಯನ್ನು ಸ್ಕ್ರೀನ್ ಮೇಲೆ ಹೇಳುತ್ತಿದ್ದೇವೆ. ಬೆಚ್ಚಿಬೀಳಿಸುವಂಥ ಅಂಶಗಳು ಸಿನಿಮಾದ ಹೈಲೈಟ್ಸ್’ ಎಂದು ಕಥೆಯ ಬಗ್ಗೆ ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕಿ ಸೌಮ್ಯಾ ಕೆ. ಶೆಟ್ಟಿ, “ಸಿನಿಮಾ ಮಾಡಬೇಕೆಂಬ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಬಹುತೇಕ ಎಲ್ಲ ಹೊಸಬರೇ ಸೇರಿಕೊಂಡು, ಬಹಳಷ್ಟು ಕಷ್ಟಪಟ್ಟು ಆಡಿಯನ್ಸ್‌ಗೆ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಗೂ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
“ಕಪಾಲ’ ಚಿತ್ರಕ್ಕೆ ಪ್ರವೀಣ್ ಎಂ. ಪ್ರಭು ಛಾಯಾಗ್ರಹಣ, ಶಾಂತ ಕುಮಾರ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ತುಮಕೂರು, ಮಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಟೀಸರ್ ಬಿಡುಗಡೆಯ ಮೂಲಕ “ಕಪಾಲ’ ಚಿತ್ರೀಕರಣಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಸೆಪ್ಟೆಂಬರ್ ವೇಳೆಗೆ ತೆರೆಗೆ ಬರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.