Toxic: ಯಶ್ ʼಟಾಕ್ಸಿಕ್ʼ ಸಿನಿಮಾದಲ್ಲಿ ಕರೀನಾ ಕಪೂರ್? ದಕ್ಷಿಣಕ್ಕೆ ʼಬೇಬೋʼ ಎಂಟ್ರಿ
Team Udayavani, Jan 4, 2024, 1:38 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ʼಟಾಕ್ಸಿಕ್ʼ ಸಿನಿಮಾ ಅನೌನ್ಸ್ ಮಾಡಿದ ಬಳಿಕ ಆ ಸಿನಿಮಾದ ಅಪ್ಡೇಟ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.ʼಕೆಜಿಎಫ್ʼ ಸರಣಿ ಬಳಿಕ ರಾಕಿಭಾಯ್ ಹವಾ ಪ್ಯಾನ್ ಇಂಡಿಯಾದೆಲ್ಲೆಡೆ ಹಬ್ಬಿದೆ. ಹಾಗಾಗಿ ಅವರ ʼಟಾಕ್ಸಿಕ್ʼ ಬಗ್ಗೆ ದೊಡ್ಡಮಟ್ಟದ ಹೈಪ್ ಕ್ರಿಯೇಟ್ ಆಗಿದೆ.
ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಯಶ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಅನೌನ್ಸ್ ಆಗುವ ಮುನ್ನವೇ ರಾಕಿಂಗ್ ಸ್ಟಾರ್ ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ. ಈಗಾಗಲೇ ʼಟಾಕ್ಸಿಕ್ʼ ಟೈಟಲ್ ರಿವೀಲ್ ವಿಡಿಯೋ ಸಖತ್ ಸದ್ದು ಮಾಡಿದೆ.
ಯಶ್ ಅವರ ʼಟಾಕ್ಸಿಕ್ʼ ಪಾತ್ರವರ್ಗದ ಬಗ್ಗೆ ಯಾವ ಅಪ್ಡೇಟ್ ಹೊರಬಿದ್ದಿಲ್ಲ. ಬಿಟೌನ್ ನ ಸ್ಟಾರ್ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಹಬ್ಬಿದೆ. ಬಿಟೌನ್ ಬೇಬೋ ಕರೀನಾ ಕಪೂರ್ ಅವರು ʼಟಾಕ್ಸಿಕ್ʼ ನಲ್ಲಿ ನಟಿಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಚಿತ್ರತಂಡ ಕರೀನಾ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಅಧಿಕೃತವಾಗಿ ಇನ್ನಷ್ಟೇ ಈ ಬಗ್ಗೆ ಘೋಷಣೆ ಆಗಲಿದೆ ಎಂದು ವರದಿ ತಿಳಿಸಿದೆ. ಕರೀನಾ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ಅಧಿಕೃತವಾದರೆ ಇದೇ ಮೊದಲ ಬಾರಿಗೆ ಕರೀನಾ ದಕ್ಷಿಣದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಾಯಕಿ ಯಾರಗುತ್ತಾರೆ ಎನ್ನುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ʼಟಾಕ್ಸಿಕ್ʼ ಸಿನಿಮಾದಲ್ಲಿ ಸಾಯಿಪಲ್ಲವಿ, ಮೃಣಾಲ್ ಠಾಕೂರು ಸೇರಿದಂತೆ ಇತರೆ ಕೆಲ ನಟಿಯರ ಹೆಸರು ನಾಯಕಿಯರ ರೇಸ್ ನಲ್ಲಿ ಕೇಳಿ ಬಂದಿತ್ತು.
ಗೋವಾ ಡ್ರಗ್ಸ್ ಮಾಫಿಯಾದ ಕಥೆಯನ್ನು ʼಟಾಕ್ಸಿಕ್ʼ ಒಳಗೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲಿ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.