ಉಪೇಂದ್ರ ಜೊತೆ “ಕರ್ವ’ ನವನೀತ್ ಚಿತ್ರ
ತರುಣ್ ಶಿವಪ್ಪ ನಿರ್ಮಾಣ
Team Udayavani, Sep 16, 2019, 3:05 AM IST
ಉಪೇಂದ್ರ ಈಗ ಮೆಲ್ಲನೆ ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಝಿ ಆಗುತ್ತಿದ್ದಾರೆ. ಅತ್ತ “ಐ ಲವ್ ಯು’ ಹಿಟ್ ಆಗುತ್ತಿದ್ದಂತೆಯೇ, ಆರ್.ಚಂದ್ರು ಜೊತೆಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದರೆ, ಇತ್ತ, ನಿರ್ಮಾಪಕ ತರುಣ್ ಶಿವಪ್ಪ ಅವರೊಂದಿಗೂ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೌದು, ಉಪೇಂದ್ರ ಅವರ ಹೊಸ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ನವನೀತ್ ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ “ಕರ್ವ’ ಸಿನಿಮಾ ಮಾಡಿದ್ದ ನವನೀತ್, ಈಗ ಉಪೇಂದ್ರ ಅವರಿಗಾಗಿಯೇ ಹೊಸ ಬಗೆಯ ಕಥೆ ಹೆಣೆದಿದ್ದಾರೆ. ಕಥೆಯನ್ನು ಕೇಳಿದ ಉಪೇಂದ್ರ, ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ತರುಣ್ ಶಿವಪ್ಪ ಅವರ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಐದನೇ ಸಿನಿಮಾ ಇದು. ಹಾಗಾಗಿ, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಲು ನಿರ್ಮಾಪಕ ತರುಣ್ ಶಿವಪ್ಪ ಪ್ಲಾನ್ ಮಾಡಿದ್ದಾರೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಉಪೇಂದ್ರ ಅವರ ಶೈಲಿಯ ಮತ್ತೊಂದು ಸಿನಿಮಾ ಎಂಬುದು ಅವರ ಮಾತು.
ನಿರ್ದೇಶಕರು ಈ ಬಾರಿ ಹೊಸ ಜಾನರ್ ಆಯ್ಕೆ ಮಾಡಿಕೊಂಡಿದ್ದು, ಉಪೇಂದ್ರ ಮೂಲಕ ಹೊಸ ವಿಷಯವನ್ನು ಹೇಳಲು ಹೊರಟಿದ್ದಾರೆ. ಅದೊಂದು ವಿಶೇಷ ಕಥೆ ಆಗಿರುವುದರಿಂದಲೇ ಸಿನಿಮಾ ನಿರ್ಮಾಣ ಮಾಡಲು ಒಪ್ಪಿದ್ದಾಗಿ ಹೇಳುವ ತರುಣ್ ಶಿವಪ್ಪ, ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನ್ನು, ಉಪೇಂದ್ರ ಅವರ ಹುಟ್ಟುಹಬ್ಬದ (ಸೆ.18) ದಿನದಂದು ಅನೌನ್ಸ್ ಮಾಡಲು ತಯಾರಿ ನಡೆಸುತ್ತಿರುವುದಾಗಿ ಹೇಳುತ್ತಾರೆ. ಸದ್ಯಕ್ಕೆ ತರುಣ್ ಶಿವಪ್ಪ ಅವರು ಚಿರಂಜೀವಿ ಸರ್ಜಾ ಅಭಿನಯದ “ಖಾಕಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಿಮಾ ಬಿಡುಗಡೆಯ ಹೊತ್ತಿಗೆ ಉಪೇಂದ್ರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
ಉಪ್ಪಿ ಮನವಿ: ಸೆ.18 ಉಪೇಂದ್ರ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದಂದು ಅಭಿಮಾನಿಗಳು ಕೇಕ್, ಹಾರ ತರೋದು ಸಹಜ. ಆದರೆ, ಉಪೇಂದ್ರ ಅಭಿಮಾನಿಗಳಲ್ಲಿ ಕೇಕ್, ಹಾರ ಬದಲು ಗಿಡಗಳನ್ನು ತನ್ನಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ, “ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…ಸೆಪ್ಟೆಂಬರ್ 18 ಅಭಿಮಾನಿಗಳ ದಿನ. ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುತ್ಛ ಮತ್ತು ಉಡುಗೊರೆಗಳನ್ನು ತರಬೇಡಿ… ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…’ ಎಂದಿದ್ದಾರೆ.
ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…
ಸೆಪ್ಟೆಂಬರ್ 18 “ಅಭಿಮಾನಿಗಳ ದಿನ”, ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…
-ನಿಮ್ಮ ಉಪೇಂದ್ರ pic.twitter.com/LhM93lD4BI— Upendra (@nimmaupendra) September 15, 2019
ಆತ್ಮೀಯ ಆರ್. ಚಂದ್ರು ರವರೊಂದಿಗೆ ನನ್ನ ಮುಂದಿನ ಬಹು ಭಾಷಾ ಸಿನಿಮಾ “ಕಬ್ಜಾ” ಮೊದಲ ನೋಟ ನಿಮಗಾಗಿ…..
ನೋಡಿ, ಹರಸಿ, ಬೆಂಬಲಿಸಿ pic.twitter.com/XZK8byyUTg— Upendra (@nimmaupendra) September 14, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.