ಓಳ್ ಮುನ್ಸಾಮಿ ತಂಡದಿಂದ ಕಾಶೀನಾಥ್ ಅವರಿಗೆ ಶ್ರದ್ಧಾಂಜಲಿ
Team Udayavani, Jan 31, 2018, 10:45 AM IST
ಇತ್ತೀಚೆಗೆ ನಿಧನರಾದ ಹಿರಿಯ ನಿರ್ದೇಶಕ, ನಟ ಕಾಶೀನಾಥ್ ಅವರಿಗೆ “ಓಳ್ ಮುನ್ಸಾಮಿ’ ಚಿತ್ರತಂಡ ಶ್ರದ್ಧಾಂಜಲಿ ಸಲ್ಲಿಸಿತು. ಆನಂದ ಪ್ರಿಯ ನಿರ್ದೇಶನದ “ಓಳ್ ಮುನ್ಸಾಮಿ’ ಚಿತ್ರದಲ್ಲಿ ಕಾಶೀನಾಥ್ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿನ ಮುನ್ಸಾಮಿ ಪಾತ್ರದಲ್ಲಿ ಕಾಶೀನಾಥ್ ನಟಿಸಿದ್ದಾರೆ. ಹೀಗಾಗಿ, ಆನಂದ ಪ್ರಿಯ ಅವರಿಗೆ ಒಂದು ವರ್ಷದಿಂದ ಕಾಶೀನಾಥ್ ಅವರ ಒಡನಾಟವಿತ್ತಂತೆ.
“ಸುಮಾರು ಒಂದು ವರ್ಷದಿಂದ ಕಾಶೀನಾಥ್ ಅವರ ಜೊತೆ ಒಡನಾಟವಿತ್ತು. ಚಿತ್ರದಲ್ಲಿನ ಮುನ್ಸಾಮಿ ಪಾತ್ರವನ್ನು ಯಾರಿಂದ ಮಾಡಿಸೋದೆಂದು ಯೋಚಿಸುತ್ತಿದ್ದಾಗ ನಮ್ಮ ಕಣ್ಣ ಮುಂದೆ ಬಂದಿದ್ದು ಕಾಶೀನಾಥ್ ಅವರು. ಅವರ ಬಳಿ ಹೋಗಿ ಕಥೆ ಹೇಳಿದಾಗ ಮೊದಲು ಅವರು ಹೇಳಿದ್ದು, ನನ್ನನ್ನು ನೀವು ಹಿರಿಯ ನಿರ್ದೇಶಕನಂತೆ ನೋಡಬಾರದು.
ನಿಮ್ಮ ನಿರ್ದೇಶನ ತಂಡದಲ್ಲಿ ಒಬ್ಬನಾಗಿ ಕಾಣಬೇಕು. ಬೇಕಾದರೆ ನನ್ನನ್ನು ಸಹಾಯ ನಿರ್ದೇಶಕನಂತೆ ನೋಡಿ. ನನಗೆ ಬರುವ ಆಲೋಚನೆಗಳನ್ನು ನಾನು ಹೇಳುತ್ತೇನೆ. ನಿಮಗೆ ಅದು ಒಪ್ಪಿಗೆಯಾದರೆ ಇಟ್ಟುಕೊಳ್ಳಬಹುದು ಎಂದು ತಂಡ ಸೇರಿಕೊಂಡರು. ಇಡೀ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ಚೆನ್ನಾಗಿದೆ. ತುಂಬಾ ಖುಷಿ ಖುಷಿಯಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.
ಅವರ ನೆನಪಿನ ಶಕ್ತಿ ಅದ್ಭುತವಾಗಿತ್ತು’ ಎಂದು ಕಾಶೀನಾಥ್ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು. ಇದಲ್ಲದೇ, “ಓಳ್ ಮುನ್ಸಾಮಿ’ ನಂತರ ಮತ್ತೂಂದು ಚಿತ್ರವನ್ನೂ ಕಾಶೀನಾಥ್ ಜೊತೆಗೆ ಮಾಡುವ ಆಲೋಚನೆಯೂ ಆನಂದಪ್ರಿಯ ಅವರಿಗಿತ್ತಂತೆ. ಚಿತ್ರದಲ್ಲಿ ನಟಿಸಿರುವ ನಿರಂಜನ್ ಒಡೆಯರ್, ಗೌತಮ್, ಶಿವಮೊಗ್ಗದ ರಂಗಕಲಾವಿದರು, ನಿರ್ಮಾಪಕ ಕೇಶವ್ ಗೌಡ ಕೂಡಾ ಕಾಶೀನಾಥ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್!
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.