ಕವಲುದಾರಿ ಕಲೆಕ್ಷನ್‌ 6 ಕೋಟಿ! ಮೊದಲ ಚಿತ್ರ ಹಿಟ್‌ಲಿಸ್ಟ್‌ಗೆ

ಪುನೀತ್‌ ನಿರ್ಮಾಣದ ಮೊದಲ ಚಿತ್ರ ಹಿಟ್‌ಲಿಸ್ಟ್‌ಗೆ

Team Udayavani, Apr 27, 2019, 12:55 PM IST

Kavaludaari

ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರ “ಕವಲುದಾರಿ’ ಎರಡು ವಾರಗಳ ಹಿಂದೆ ಬಿಡುಗಡೆಯಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಒಂದು ಹೊಸ ಜಾನರ್‌ನ ಸಿನಿಮಾವಾಗಿ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಸಿನಿಮಾ ಸ್ವಲ್ಪ ನಿಧಾನವಾಯಿತು, ನಿರೂಪಣೆಯಲ್ಲಿ ವೇಗ ಬೇಕಿತ್ತು ಎಂಬ ಮಾತುಗಳೂ ಕೇಳಿಬಂದುವು.

ಆದರೆ, “ಕವಲುದಾರಿ’ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಬಿಡುಗಡೆಯಾದ ಮೂರನೇ ವಾರದಲ್ಲೂ ಪ್ರೇಕ್ಷಕರ ಕೊರತೆ ಕಾಡದಂತೆ ಸಿನಿಮಾ ಮುನ್ನುಗ್ಗುತ್ತಿದೆ. ಹಾಗಾದರೆ ಸಿನಿಮಾದ ಕಲೆಕ್ಷನ್‌ ಏನಿರಬಹುದು, ಇಲ್ಲಿವರೆಗೆ ಎಷ್ಟು ಕಲೆಕ್ಷನ್‌ ಮಾಡಿರಬಹುದೆಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಅದಕ್ಕೆ ಸಿಗುವ ಉತ್ತರ ಆರು ಕೋಟಿ.

ಹೌದು, “ಕವಲುದಾರಿ’ ಚಿತ್ರದ ಇದುವರೆಗಿನ ಕಲೆಕ್ಷನ್‌ ಆರು ಕೋಟಿ ದಾಟಿದೆಯಂತೆ. ಸಿನಿಮಾದ ಸಕ್ಸಸ್‌ಮೀಟ್‌ನಲ್ಲಿ ಚಿತ್ರದ ವಿತರಕ ಧೀರಜ್‌, ಕಲೆಕ್ಷನ್‌ ಬಗೆಗಿನ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದ ವೇಳೆ, ಹಿರಿಯ ನಟ ಅನಂತ್‌ನಾಗ್‌ ಚಿತ್ರದ ಕಲೆಕ್ಷನ್‌ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. ಈ ಮೂಲಕ “ಕವಲುದಾರಿ’ ಗೆದ್ದ ಖುಷಿಯಲ್ಲಿದೆ ಚಿತ್ರತಂಡ.

ನಿರ್ದೇಶಕ ಹೇಮಂತ್‌ ರಾವ್‌ ಅವರಿಗೆ ಜನ ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಸಣ್ಣ ಭಯ, ಗೊಂದಲವಿತ್ತಂತೆ. ಆದರೆ, ಅನಂತ್‌ನಾಗ್‌ ಅವರಿಗೆ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಡುವ ವಿಶ್ವಾಸವಿತ್ತಂತೆ. ಹೇಮಂತ್‌ರಾವ್‌ಗೆ ಧೈರ್ಯ ತುಂಬಿದ್ದೇ ಅನಂತ್‌ ನಾಗ್‌ ಅವರಂತೆ.

“ಸಿನಿಮಾದ ಬಗೆಗಿನ ನನ್ನ ಗೊಂದಲವನ್ನು ಪರಿಹರಿಸಿ, ಧೈರ್ಯ ತುಂಬಿದವರು ಅನಂತ್‌ನಾಗ್‌. ಈ ಸಿನಿಮಾವನ್ನು ಖಂಡಿತಾ ಪ್ರೇಕ್ಷಕರು ಇಷ್ಟಪಡುತ್ತಾರೆಂದು ಹೇಳಿದ್ದರು. 275ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರ ಅನುಭವದ ಮಾತು ಈಗ ನಿಜವಾಗಿದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಹೇಮಂತ್‌ರಾವ್‌.

ಸದ್ಯ ಚಿತ್ರ ಅಮೆರಿಕಾದಲ್ಲೂ ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಚಿತ್ರದ ರೀಮೇಕ್‌ ರೈಟ್ಸ್‌ಗಳಿಗೂ ಬೇಡಿಕೆ ಬರುತ್ತಿದೆಯಂತೆ. ಚಿತ್ರದಲ್ಲಿ ರಿಷಿ, ಅನಂತ್‌ನಾಗ್‌, ಅಚ್ಯುತ್‌, ರೋಶನಿ ಪ್ರಕಾಶ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಟಾಪ್ ನ್ಯೂಸ್

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

1-saasds

Mysore Dasara;ದೀಪಾಲಂಕಾರ 12 ದಿನ ವಿಸ್ತರಣೆ: ಡಿ.ಕೆ.ಶಿವಕುಮಾರ್‌

Bhatakal

Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್

1-ewss

T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು

Joshi

Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada cinema maryade prashne

Kannada cinema: ನವೆಂಬರ್‌ 22ಕ್ಕೆ ʼಮರ್ಯಾದೆ ಪ್ರಶ್ನೆʼ ತೆರೆಗೆ

Sandalwood: ಟೀಸರ್‌ ನಲ್ಲಿ ʼಆಪರೇಶನ್‌ ಡಿʼ

Sandalwood: ಟೀಸರ್‌ ನಲ್ಲಿ ʼಆಪರೇಶನ್‌ ಡಿʼ

Nisha Ravikrishnan: ಮಹಿಳಾ ಪ್ರಧಾನ ʼಅಂಶುʼ: ಕುತೂಹಲ ಮೂಡಿಸಿದ ಟ್ರೇಲರ್‌

Nisha Ravikrishnan: ಮಹಿಳಾ ಪ್ರಧಾನ ʼಅಂಶುʼ: ಕುತೂಹಲ ಮೂಡಿಸಿದ ಟ್ರೇಲರ್‌

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

Sangeetha Santhosha Kannada Movie

Sangeetha Santhosha: ನವತಂಡದ ಸಂತೋಷದ ಪಯಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

HDK (4)

H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.