ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅಪರೂಪದ ಗಾಯಕ: ಕವಿರಾಜ್
Team Udayavani, Sep 25, 2020, 3:30 PM IST
ಬಹುಭಾಷಾ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ದಶಕಗಳ ಕಾಲ ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ಬಾಲು ಸರ್ ಬಗ್ಗೆ ಚಿತ್ರ ಸಾಹಿತಿ ಕವಿರಾಜ್ ಬರೆಯುತ್ತಾರೆ..
ನಾನು ಅತಿ ಚಿಕ್ಕ ವಯಸ್ಸಿನಿಂದಲೇ ಎಸ್‌ಪಿಬಿ ಅವರ ಹಾಡು ಕೇಳುತ್ತ ಬೆಳೆದವನು. ರೇಡಿಯೋದಲ್ಲಿ ಎಸ್‌ಪಿಬಿ ಅವರ ಹಾಡು ಬರುತ್ತಿದ್ದರೆ, ಅದರೊಳಗೆ ಇದ್ದುಕೊಂಡು ಹಾಡ್ತಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಚಿಕ್ಕಂದಿನಲ್ಲಿ ಭಾವಿಸಿದ್ದವನು ನಾನು. ಕನ್ನಡ ಸಿನಿಮಾದಲ್ಲಿ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟರ ಮಟ್ಟಿಗೆ ಹುಚ್ಚು ಹಿಡಿಸಿದ್ದ ಅಪರೂಪದ ಗಾಯಕ.
ಇದನ್ನೂ ಓದಿ: ಸರಳತೆಯಲ್ಲಿ ಇಂದಿನ ಕಲಾವಿದರಿಗೆ ಎಸ್ ಪಿಬಿ ಮಾದರಿ: ಗುರುಕಿರಣ್ ನೆನಪಿಸಿಕೊಂಡಂತೆ…
ನಾನು ಬರೆದ ‘ಗರನೆ.. ಗರಗರನೆ…’, ‘ಚಾಮುಂಡಿ ತಾಯಿಯಾಣೆ…’ ಹೀಗೆ ಸುಮಾರು ಐವತ್ತಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಅದನ್ನು ಜನರ ಬಾಯಲ್ಲಿ ಗುನುಗುಡುವಂತೆ ಮಾಡಿದ ಮಹಾನ್ ಗಾಯಕ. ಎದುರು ಸಿಕ್ಕಾಾಗಲೆಲ್ಲ ಆತ್ಮೀಯ ಅಪ್ಪುಗೆಯ ಮೂಲಕ ಪ್ರೀತಿ ತೋರಿಸುತ್ತಿದ್ದ, ಹೊಸಬರನ್ನು ಪ್ರೋತ್ಸಾಾಹಿಸುತ್ತಿದ್ದಂತಹ ಎಸ್‌ಪಿಬಿ ನಮ್ಮ ನಡುವೆಯೇ ಸಾಧನೆಯ ಮೇರು ಶಿಖರವೇರಿದ ಸಾಧಕ. ಇವತ್ತು ಅವರಿಲ್ಲ ಅಂದರೆ, ನಂಬಲಾಗುತ್ತಿಲ್ಲ. ಸಂಗೀತ ಕ್ಷೇತ್ರದ ಮಟ್ಟಿಗೆ ನಿಜವಾದ ಅರ್ಥದಲ್ಲಿ ಇದು ತುಂಬಲಾರದ ನಷ್ಟ. ಕನ್ನಡದ ಮಟ್ಟಿಗೆ ಎಸ್‌ಪಿಬಿ ದೈಹಿಕವಾಗಿ ಇಲ್ಲದಿದ್ದರೂ, ಹಾಡುಗಳ ಮೂಲಕ ಯಾವತ್ತೂ ಜೀವಂತವಾಗಿರುತ್ತಾರೆ. ಕನ್ನಡ ಚಿತ್ರರಂಗ, ಸಂಗೀತ ಕ್ಷೇತ್ರ, ಕೇಳುಗರು ಎಲ್ಲರಿಗೂ ಹೃದಯ ಭಾರವಾಗಿದೆ’
– ಕವಿರಾಜ್, ಚಿತ್ರ ಸಾಹಿತಿ
ಇದನ್ನೂ ಓದಿ: ‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB
ಇದನ್ನೂ ಓದಿ: ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್ ನಗು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
Challenging Star; ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ! ;ಇಂದು ‘ಡೆವಿಲ್’ ಡಬ್ಬಿಂಗ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು
America: ಹೊಸ ವರ್ಷದ ಸಂಭ್ರಮಾಚರಣೆ-ಜನರ ಗುಂಪಿನ ಮೇಲೆ ನುಗ್ಗಿದ ಟ್ರಕ್-ಹಲವು ಸಾ*ವು
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.