ಕಾವ್ಯಾ ಶಾ ಜೋರು ಮಾತು
Team Udayavani, Aug 6, 2018, 11:22 AM IST
“ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ಯ ಬಜಾರಿ ಹುಡುಗಿಯಾಗಿ ಗಮನಸೆಳೆದಿದ್ದ ಕಾವ್ಯಾಶಾ, ಇದೀಗ ಜೋರು ಸೌಂಡು ಮಾಡೋಕೆ ಅಣಿಯಾಗಿದ್ದಾರೆ! ಅರೇ, ಹೀಗೆಂದಾಕ್ಷಣ, ಕಾವ್ಯಾ ಶಾ ಯಾಕಪ್ಪ ಜೋರು ಸೌಂಡು ಮಾಡುತ್ತಿದ್ದಾರೆ, ಏನು ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ, “ಮುಕುಂದ ಮುರಾರಿ’ ಬಳಿಕ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸದ ಕಾವ್ಯಾಶಾ, ತಮಿಳಿನ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದರು.
ಕನ್ನಡದಲ್ಲಿ ಬಂದ “ಲೌಡ್ ಸ್ಪೀಕರ್’ ಕಥೆ ಮತ್ತು ಪಾತ್ರದ ವಿವರಣೆ ಕೇಳಿದ ಕೂಡಲೇ, ತಮಿಳಿನ ಚಿತ್ರಗಳ ಜೊತೆ ಜೊತೆಗೆ “ಲೌಡ್ ಸ್ಪೀಕರ್’ ಚಿತ್ರಕ್ಕೂ ಡೇಟ್ ಹೊಂದಿಸಿಕೊಂಡು ಚಿತ್ರ ಮಾಡಿ ಮುಗಿಸಿದ್ದಾರೆ. ಅದಕ್ಕೆ ಕಾರಣ, “ಲೌಡ್ ಸ್ಪೀಕರ್’ ಚಿತ್ರದ ಕಥೆ ಮತ್ತು ಪಾತ್ರ ಎಂಬುದು ಕಾವ್ಯಾಶೆಟ್ಟಿ ಮಾತು. ಈ ಚಿತ್ರದಲ್ಲಿ ಅವರು ಇದೇ ಮೊದಲ ಬಾರಿಗೆ ಹೌಸ್ ವೈಫ್ ಪಾತ್ರ ನಿರ್ವಹಿಸಿದ್ದಾರಂತೆ. ಒಂದು ರಾತ್ರಿ ನಡೆಯೋ ಕಥೆಯಲ್ಲಿ ಅವರದು ರಿಯಲ್ ಲೈಫ್ಗೆ ಹತ್ತಿರವಾದಂತಹ ಕಥೆ ಇದೆಯಂತೆ.
ರೀಲ್ನಲ್ಲೂ ಅವರು ಕಾವ್ಯಾ ಪಾತ್ರದಲ್ಲೇ ಕಾಣಿಸಿಕೊಂಡಿದ್ದು, ನಿರ್ದೇಶಕ ಶಿವತೇಜಸ್ ಮತ್ತು ತಂಡ ಒಳ್ಳೆಯ ಚಿತ್ರ ಮಾಡಿದ್ದು, ಚಿತ್ರದಲ್ಲಿ ಎಲ್ಲೂ ಕಷ್ಟ ಎನಿಸಲಿಲ್ಲ ಎನ್ನುವ ಕಾವ್ಯಾ ಶಾ, “ನಾನು ಬೇಸಿಕಲಿ ಡ್ಯಾನ್ಸರ್. ನಾನು ಸಿನಿಮಾ ಒಪ್ಪಿಕೊಳ್ಳೋದೇ, ಹಾಡುಗಳು ಸಿಗುತ್ತವೆ, ಡ್ಯಾನ್ಸ್ಗೆ ಹೆಚ್ಚು ಸ್ಕೋಪ್ ಸಿಗುತ್ತೆ ಅಂತ. ಆದರೆ, “ಲೌಡ್ ಸ್ಪೀಕರ್’ನಲ್ಲಿ ನನ್ನ ಪಾಲಿಗೆ ಒಂದೇ ಹಾಡು ಸಿಕ್ಕಿದೆ. ಇಡೀ ರಾತ್ರಿ ಚಿತ್ರೀಕರಿಸಿದ ಹಾಡು ಅದು.
ಆ ಬಗ್ಗೆ ಹೇಳುವುದಾದರೆ, ನನಗೆ ಆ ಹಾಡಿನ ಚಿತ್ರೀಕರಣ ವೇಳೆ ಸಿಕ್ಕಾಪಟ್ಟೆ ಜ್ವರ ಇತ್ತು. ಹಾಡಲ್ಲಿ, ಪೆಪ್ಸಿ ತಲೆಮೇಲೆ ಹಾಕಿಕೊಳ್ಳೋ ದೃಶ್ಯವಿತ್ತು. ಜ್ವರದಿಂದ ಬಳಲುತ್ತಿದ್ದರೂ ನಾನು ಪಾಲ್ಗೊಂಡು ಮುಗಿಸಿದೆ. ಅದಕ್ಕೆ ಕಾರಣ, ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹ ಎಂಬುದು ಕಾವ್ಯಾ ಶಾ ಹೇಳಿಕೆ. ಇನ್ನು, ಇದೇ ಮೊದಲ ಸಲ ಕಾವ್ಯಾ ಶಾ, ದತ್ತಣ್ಣ ಅವರೊಂದಿಗೆ ನಟಿಸಿದ್ದಾರೆ.
ರಂಗಾಯಣ ರಘು ಅವರೊಂದಿಗೂ ಮೊದಲ ಬಾರಿಗೆ ತೆರೆ ಹಂಚಿಕೊಂಡ ಖುಷಿ ಕಾವ್ಯಾ ಶಾ ಅವರದು. ಎಲ್ಲಾ ಸರಿ, ಕಾವ್ಯಾ ಶಾ, ಕನ್ನಡದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಲ್ಲಾ? ಈ ಪ್ರಶ್ನೆಗೆ ಉತ್ತರ, ತಮಿಳು ಚಿತ್ರಗಳು. ಹೌದು, ಕಾವ್ಯಾ ಶಾ ಈವರೆಗೆ ಐದು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರೀಗ ಕಾಜಲ್ ಅಗರ್ವಾಗಲ್ ಜೊತೆ ಒಂದು ಚಿತ್ರ, ನಾಯಕ ಜೈ ಜೊತೆಗೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ದಿನದ ಚಿತ್ರೀಕರಣ ನಡೆದರೆ ಆ ಎರಡು ತಮಿಳು ಚಿತ್ರಗಳು ಪೂರ್ಣಗೊಳ್ಳಲಿವೆಯಂತೆ.
ಸೋಮವಾರ (ಇಂದು) ಹೊಸ ಚಿತ್ರ ಶುರುವಾಗಲಿದ್ದು, ಆ ಚಿತ್ರವನ್ನು ಉದಯ್ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದೆ. ಸಿನಿಮಾ ಜೊತೆಗೆ ಕಾವ್ಯಾ ಶಾ ಸ್ವಂತದ್ದೊಂದು ರೆಸ್ಟೋರೆಂಟ್ ಶುರುಮಾಡಿದ್ದಾರೆ. ಹೌದು, “ಸೆವೆನ್ ವಂಡರ್ಸ್’ ಹೆಸರಿನ ರೆಸ್ಟೋರೆಂಟ್ ಶುರು ಮಾಡಿರುವ ಕಾವ್ಯಾ ಶಾ, ನಟನೆ ಜೊತೆಯಲ್ಲಿ ಉದ್ಯಮಿಯಾಗಿ ಗುರುತಿಸಿಕೊಳ್ಳುವ ಆಸೆ ಹೊಂದಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಪಾತ್ರ ಎದುರು ನೋಡುತ್ತಿರುವ ಅವರಿಗೆ ಹೊಸ ಬಗೆಯ ಚಿತ್ರದಲ್ಲಿ ನಟಿಸುವಾಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.