ಶಿವಣ್ಣ ನೇತೃತ್ವದ ತಂಡಕ್ಕೆ ಕೆಸಿಸಿ ಕಪ್
Team Udayavani, Apr 9, 2018, 11:26 AM IST
ಸುದೀಪ್ ನೇತೃತ್ವದಲ್ಲಿ ಶನಿವಾರವಷ್ಟೇ ಶುರುವಾಗಿದ್ದ “ಕೆಸಿಸಿ ಟಿ 10′ (ಕನ್ನಡ ಚಲನಚಿತ್ರ ಕ್ರಿಕೆಟ್ ಕಪ್) ಲೀಗ್‌ನಲ್ಲಿ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ತಂಡ ಅಂತಿಮ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಶಿವರಾಜಕುಮಾರ್ ಅವರು ಸ್ಟಾರ್ ಆಟಗಾರರಾಗಿರುವ ವಿಜಯನಗರ ಪೇಟ್ರಿಯಾಟ್ಸ್ ತಂಡ “ಕೆಸಿಸಿ ಟಿ 10′ ಲೀಗ್‌ನ ಮೊದಲ ಬಾರಿಗೆ ಕಪ್ ಗೆದ್ದು ಚಾಂಪಿಯನ್ಸ್ ಎನಿಸಿಕೊಂಡಿದೆ.
ಶನಿವಾರ ಕಿಚ್ಚ ಸುದೀಪ್ ಅವರು ಸ್ಟಾರ್ ಪ್ಲೇಯರ್ ಆಗಿದ್ದ ಹೊಯ್ಸಳ ಈಗಲ್ಸ್ ವಿರುದ್ಧ ಮೊದಲ ಪಂದ್ಯಾವಳಿಯಲ್ಲೇ ಗೆಲುವು ಸಾಧಿಸಿದ್ದ ಶಿವರಾಜಕುಮಾರ್ ನೇತೃತ್ವದ ತಂಡ, ನಂತರ ನಡೆದ ಎರಡನೇ ಪಂದ್ಯವನ್ನು ಇಂದ್ರಜಿತ್ ಲಂಕೇಶ್ ಮೆಂಟರ್ ಆಗಿರುವ ರಾಷ್ಟ್ರಕೂಟ ಪ್ಯಾಂಥರ್ಸ್ ಎದುರು ಸೆಣೆಸಾಟ ನಡೆಸಿ, ಫೈನಲ್ ಹಂತವನ್ನು ತಲುಪಿತ್ತು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸದಾಶಿವ ಶೆಣೈ ಮೆಂಟರ್ ಆಗಿರುವ ಒಡೆಯರ್ ಚಾರ್ಜಸ್ ವಿರುದ್ಧ ಗೆಲುವು ಸಾಧಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅಂದಹಾಗೆ, ಕೃಷ್ಣ ಅವರು ಶಿವರಾಜಕುಮಾರ್ ಸ್ಟಾರ್ ಆಟಗಾರರಾಗಿರುವ ವಿಜಯನಗರ ಪೇಟ್ರಿಯಾಟ್ಸ್ ತಂಡದ ನಾಯಕರಾಗಿದ್ದಾರೆ.
ಮೊದಲ ಬಾರಿಗೆ ನಡೆದ “ಕನ್ನಡ ಚಲನಚಿತ್ರ ಕಪ್’ ಶಿವರಾಜಕುಮಾರ್ ನೇತೃತ್ವದ ತಂಡ ಗೆಲುವು ಸಾಧಿಸಿರುವುದರಿಂದ ಅವರ ಅಭಿಮಾನಿ ವಲಯದಲ್ಲಿ ಖುಷಿ ಮೂಡಿಸಿದೆ. ಅತ್ತ, ಶಿವರಾಜಕುಮಾರ್ ಅಭಿನಯದ “ಟಗರು’ ಸಿನಿಮಾ ಕೂಡ 50 ದಿನವನ್ನು ಪೂರೈಸಿದ ಖುಷಿಯಲ್ಲೂ ಅಭಿಮಾನಿಗಳು ತೆಲುತ್ತಿದ್ದರೆ, ಇತ್ತ “ಕೆಸಿಸಿ ಟಿ 10′ ಗೆಲುವು ಕೂಡ ಇನ್ನಷ್ಟು ಸಂಭ್ರಮಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.