KD–The Devil: ʼಕೆಡಿʼ ಸೆರೆಗೆ ʼಧಕ್ ದೇವʼನಾಗಿ ಬಂದ ಸಂಜಯ್ ದತ್; ಫಸ್ಟ್ ಲುಕ್ ಔಟ್
Team Udayavani, Jul 29, 2024, 1:21 PM IST
ಬೆಂಗಳೂರು: ನಟ ಧ್ರುವ ಸರ್ಜಾ (Dhruva Sarja) ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ʼಕೆಡಿʼ (KD–The Devil) ಚಿತ್ರತಂಡ ಸಂಜಯ್ ದತ್ (Sanjay Dutt) ಅವರ ಹುಟ್ಟುಹಬ್ಬಕ್ಕೆ ಸ್ಪೆಷೆಲ್ ಪೋಸ್ಟರ್ ರಿಲೀಸ್ ಮಾಡಿದೆ.
ಧ್ರುವ ಸರ್ಜಾ ಮಾಸ್ ಅವತಾರದಲ್ಲಿ ʼಕೆಡಿʼಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಆಗಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ.
ʼಕೆಜಿಎಫ್ʼ ಬಳಿಕ ಬ್ಯಾಕ್ ಟು ಬ್ಯಾಕ್ ಸೌತ್ ಸಿನಿಮಾಗಳಲ್ಲಿ ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ʼಮುನ್ನಾ ಭಾಯಿʼ ಪ್ಯಾನ್ ಇಂಡಿಯಾ ʼಕೆಡಿʼ ಖಡಕ್ ನೆಗಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಜಯ್ ದತ್ ಅವರ 65ನೇ ಹುಟ್ಟುಹಬ್ಬದಂದು ʼಕೆಡಿʼ ಚಿತ್ರತಂಡ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್‌ನ್ನು ರಿಲೀಸ್ ಮಾಡಿದೆ. ಖಾಕಿಯ ಲುಕ್ ನಲ್ಲಿ, ಲಾಠಿಯನ್ನಿಡಿದ ಸ್ಟೈಲ್ ನಲ್ಲಿ ಸಂಜು ಬಾಬಾ ಕಾಣಿಸಿಕೊಂಡಿದ್ದಾರೆ.
View this post on Instagram
ಸಂಜಯ್ ದತ್ ಅವರ ಮಾಸ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ʼಕೆಡಿʼ ದರ್ಶನಕ್ಕಾಗಿ ಮುಂದೆ ನೋಡುತ್ತಿದ್ದಾರೆ. ʼಕೆಡಿʼಯಲ್ಲಿ ಸಂಜಯ್ ದತ್ ʼಧಕ್ ದೇವʼನಾಗಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಚಂದನವನದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿರುವ ʼಕೆಡಿʼ ಒಂದಷ್ಟು ಗ್ಲಿಂಪ್ಸ್ ಹಾಗೂ ಪೋಸ್ಟರ್ ನಿಂದ ಸಖತ್ ಗಮನ ಸೆಳೆದಿದೆ. 1970 ದಶಕದಲ್ಲಿನ ಸತ್ಯ ಘಟನಾ ಆಧಾರಿತ ಗ್ಯಾಂಗ್‌ಸ್ಟರ್ ಕಥೆಯನ್ನು ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.
ಧ್ರುವ ಸರ್ಜಾ, ವಿ.ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ನೋರಾ ಫತೇಹಿ, ಜಿಶು ಸೆಂಗುಪ್ತ,ಸೇರಿದಂತೆ ಅನೇಕರು ನಟಿಸಿದ್ದಾರೆ.
ಇದೇ ವರ್ಷದ ಡಿಸೆಂಬರ್ ನಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.