ಯಾರಾಗುತ್ತಾರೆ ಕೆಂಪೇಗೌಡ-2?

Team Udayavani, Apr 11, 2017, 12:03 PM IST

kempgowda.jpg

ಸುದೀಪ್‌ ನಿರ್ದೇಶಿಸಿ, ನಟಿಸಿರುವ “ಕೆಂಪೇಗೌಡ’ ಚಿತ್ರ ಹಿಟ್‌ ಆಗುತ್ತಿದ್ದಂತೆ, “ಕೆಂಪೇಗೌಡ-2′ ಸಿನಿಮಾ ಬರುತ್ತದೆ ಎಂಬ ಸುದ್ದಿ ಓಡಾಡುತ್ತಲೇ ಇತ್ತು. ಆದರೆ, ಯಾವಾಗ ಸೆಟ್ಟೇರುತ್ತದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಬಹುತೇಕ ಅಂತಿಮವಾಗಿದೆ. ಇದೇ ಶುಕ್ರವಾರದಂದು “ಕೆಂಪೇಗೌಡ-2′ ಚಿತ್ರ ಲಾಂಚ್‌ ಆಗುತ್ತಿದೆ. “ಕೆಂಪೇಗೌಡ’ ಚಿತ್ರ ನಿರ್ಮಿಸಿದ ಶಂಕರೇಗೌಡ ಅವರೇ “ಕೆಂಪೇಗೌಡ-2′ ಚಿತ್ರವನ್ನು ಮಾಡುತ್ತಿದ್ದಾರೆ. 

ಹಾಗಾದರೆ, ಸುದೀಪ್‌ ಅವರೇ “ಕೆಂಪೇಗೌಡ-2’ನಲ್ಲಿ ಮುಂದುವರೆಯುತ್ತಾರಾ ಎಂಬ ಕುತೂಹಲವಂತೂ ಅನೇಕರಿಗಿದೆ. ಆದರೆ, ಚಿತ್ರತಂಡ ಮಾತ್ರ ನಿರ್ದೇಶಕರಿಂದ ಹಿಡಿದು ನಾಯಕ-ನಟರವರೆಗೆ ಎಲ್ಲವನ್ನು ಗೌಪ್ಯವಾಗಿಟ್ಟಿದೆ. ಮೂಲಗಳ ಪ್ರಕಾರ, ಶಂಕರೇಗೌಡ ಅವರು ನಿರ್ಮಿಸುತ್ತಿರುವ “ಕೆಂಪೇಗೌಡ-2′ ಚಿತ್ರದಲ್ಲಿ ಸುದೀಪ್‌ ನಟಿಸುತ್ತಿಲ್ಲ. ಬದಲಾಗಿ ಬೇರೆ ನಾಯಕ ನಟರೊಬ್ಬರು ಪೊಲೀಸ್‌ ಆಗಿ ಅಬ್ಬರಿಸಲಿದ್ದಾರೆಂಬುದು ಗಾಂಧಿನಗರದ ಮಾಹಿತಿ.

ಹಾಗಂತ ಯಾರು ಎಂಬುದನ್ನು ತಿಳಿಯುವ ಕುತೂಹಲಕ್ಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು. ಒಂದು ದೊಡ್ಡ ಗ್ಯಾಪ್‌ನ ನಂತರ ಮತ್ತೆ ನಿರ್ಮಾಣಕ್ಕೆ ಮರಳಿರುವ ಶಂಕರೇಗೌಡ ಈ ಬಾರಿ ಇನ್ನೊಂದು ಬಿಗ್‌ ಬಜೆಟ್‌ ಸಿನಿಮಾ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ. ಬೇಗನೇ ಚಿತ್ರೀಕರಣ ಮುಗಿಸಿ, ಅಷ್ಟೇ ಬೇಗ ಚಿತ್ರ ಬಿಡುಗಡೆ ಮಾಡಲಿದ್ದಾರೆನ್ನಲಾಗಿದೆ. 

ಇದು ಶಂಕರೇಗೌಡ ನಿರ್ಮಾಣದ “ಕೆಂಪೇಗೌಡ-2′ ಸುದ್ದಿಯಾದರೆ, “ಹೆಬ್ಬುಲಿ’ ಬಿಡುಗಡೆಯಾದ ಬೆನ್ನಲ್ಲೇ ಆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಉಮಾಪತಿ “ಕೆಂಪೇಗೌಡ-2′ ಸಿನಿಮಾ ಮಾಡುತ್ತಾರೆಂಬ ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ ಅವರು ತಮ್ಮ ಟ್ವೀಟರ್‌ನಲ್ಲಿ ಅಭಿಮಾನಿ ಮಾಡಿದ “ಕೆಂಪೇಗೌಡ-2′ ಪೋಸ್ಟರ್‌  ಶೇರ್‌ ಮಾಡಿದ್ದಾರೆ.

ಹಾಗಾದರೆ ಎರಡೆರಡು “ಕೆಂಪೇಗೌಡ-2′ ಬರಲು ಸಾಧ್ಯನಾ ಎಂಬ ಪ್ರಶ್ನೆ, ಗೊಂದಲ ಹುಟ್ಟುತ್ತದೆ. ಆ ಎಲ್ಲಾ ಪ್ರಶ್ನೆ, ಗೊಂದಲಗಳಿಗೆ ಸದ್ಯದಲ್ಲೇ ತೆರೆಬೀಳಲಿದೆ. ಇದರ ಜೊತೆಗೆ ಎಲ್ಲರನ್ನು ಕಾಡುವ ಪ್ರಶ್ನೆ “ಕೆಂಪೇಗೌಡ-2’ನಲ್ಲಿ ಈ ಬಾರಿ ಯಾರು ಘರ್ಜಿಸುತ್ತಾರೆಂಬುದು. ಕೆಲವೇ ದಿನಗಳಲ್ಲಿ ಅದಕ್ಕೂ ಉತ್ತರ ಸಿಗಲಿದೆ.

ಟಾಪ್ ನ್ಯೂಸ್

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.