ಕೇರಳದಲ್ಲಿ ಖ್ಯಾತ ನಟಿ ಅಪಹರಣ: ಕಾರಿನಲ್ಲೇ ಲೈಂಗಿಕ ಕಿರುಕುಳ
Team Udayavani, Feb 18, 2017, 9:11 AM IST
ಎರ್ನಾಕುಳಂ: ಶೂಟಿಂಗ್ ಮುಗಿಸಿ ವಾಪಾಸಾಗುತ್ತಿದ್ದ ಬಹುಭಾಷಾ ನಟಿಯೊಬ್ಬರನ್ನು ಗ್ಯಾಂಗ್‌ವೊಂದು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಕೇರಳದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ತ್ರಿಶೂರ್‌ನಿಂದ ಎರ್ನಾಕುಳಂ ಗೆ ಪ್ರಯಾಣಿಸುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಟಿಟಿ ವಾಹನದಲ್ಲಿ ಬಂದ ಗ್ಯಾಂಗ್ ಕಾರನ್ನು ಅಡ್ಡಗಟ್ಟಿ ಡ್ರೈವರ್‌ನನ್ನು ಎಳೆದು ಹಾಕಿ ಕಾರಿಗೆ ನುಗ್ಗಿದ್ದಾರೆ. ನಟಿಗೆ ಕಾರಿನಲ್ಲೇ 1 ಗಂಟೆಗಳ ಕಾಲ ಸುತ್ತಾಡಿಸಿ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.
ಪಳರಿವಟ್ಟಂ ಎಂಬಲ್ಲಿ ನಟಿಯನ್ನು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆ ಬಳಿಕ ಭಾವನಾ ಕಾಕನಾಡದ ನಿರ್ದೇಶಕರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಘಟನೆ ನಡೆಯುವ ವೇಳೆ ಕಾರಿನಲ್ಲಿ ನಟಿ ಮತ್ತು ಚಾಲಕ ಇಬ್ಬರೇ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ನಟಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಪ್ರರಕಣಕ್ಕೆ ದಾಖಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಶಂಕಿತ ಆರೋಪಿಯಾದ, ಈ ಹಿಂದೆ ನಟಿಯ ಕಾರು ಚಾಲಕನಾಗಿದ್ದ ಮಾರ್ಟಿನ್‌ನನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಇನ್ನೋರ್ವ ಆರೋಪಿ ಎನ್ನಲಾದ ಆತನ ಸ್ನೇಹಿತ ಸುನಿಲ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ಮುಂದುವರಿಸಿದ್ದಾರೆ.
30 ರ ಹರೆಯದ ನಟಿ ಭಾವನಾ ಮಲಯಾಳಂನಲ್ಲಿ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆ ಬಳಿಕ ಕೆಲ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.