![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 31, 2024, 3:49 PM IST
ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ “ಕೆರೆಬೇಟೆ’ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇತ್ತೀಚೆಗೆ ಈ ಸಂಭ್ರಮವನ್ನು ಚಿತ್ರತಂಡ ಆಚರಿಸಿದೆ. ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ಕೊಡುವ ಮೂಲಕ ಸಿನಿಮಾತಂಡ 50 ದಿನ ಪೂರೈಸಿದ್ದನ್ನು ಸಂಭ್ರಮಿಸಿದೆ.
ಈ ವೇಳೆ ಮಾತನಾಡಿದ ನಾಯಕ ಗೌರಿ ಶಂಕರ್ “ಸಿನಿಮಾ ಕಮರ್ಷಿಯಲ್ ಆಗಿ ದೊಡ್ಡ ಮಟ್ಟಕ್ಕೆ ಹಿಟ್ಟಾಗಿಲ್ಲ, ಆದರೆ ಜನ ಒಳ್ಳೆಯ ವಿಮರ್ಶೆ ಕೊಟ್ಟಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತ ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 50 ದಿನಗಳು ಓಡಿದೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಇದೆ. ಈ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ ಐವತ್ತು ದಿನದ ಸಂಭ್ರಮವನ್ನು ಮಾಡುತ್ತಿದ್ದೇವೆ. ಕೆರೆಬೇಟೆ ಸಿನಿಮಾ ನನಗೆ ದೊಡ್ಡ ಕನಸಾಗಿತ್ತು. ಆದರೆ ಸಕ್ಸಸ್ ಆಗದೇ ಇರುವ ಬೇಸರ ಇದೆ. ಮುಂದೆ ಒಳ್ಳೆಯ ಕಥೆ ಬಂದರೆ ನಟಿಸುತ್ತೇನೆ ಅಷ್ಟೆ. ಆದರೆ ನಿರ್ಮಾಣ ಸದ್ಯಕ್ಕೆ ಮಾಡಲ್ಲ’ ಎಂದು ಹೇಳಿದರು.
ನಿರ್ದೇಶಕ ರಾಜಗುರು ಮಾತನಾಡಿ, “ನನ್ನ ಕನಸನ್ನು ನನಸು ಮಾಡಿದ ಜನಮನ ಸಿನಿಮಾ ಸಂಸ್ಥೆಗೆ ಧನ್ಯವಾದಗಳು. ಈ ಸಿನಿಮಾಗೆ ದೊಡ್ಡ ದೊಡ್ಡ ನಿರ್ದೇಶಕರು, ಹೀರೋ ಹಾಗೂ ಹೀರೋಯಿನ್ಸ್ ಬಂದು ಬೆಂಬಲಿಸಿದ್ದಾರೆ. ಅವರೆಲ್ಲರಿಗೂ ಥ್ಯಾಂಕ್ಸ್’ ಎಂದರು. ಇನ್ನು ನಾಯಕಿ ಬಿಂದು ಗೌಡ ಕೂಡಾ ಖುಷಿ ಹಂಚಿಕೊಂಡರು.
ಅಂದಹಾಗೆ, ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಮಾರ್ಚ್ 15ಕ್ಕೆ ರಿಲೀಸ್ ಆಗಿತ್ತು. ಮಲೆನಾಡಿನ ಮೀನು ಬೇಟೆಯನ್ನಿಟ್ಟುಕೊಂಡು ಸಿನಿಮಾ ಮೂಡಿಬಂದಿತ್ತು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.