Kerebete Movie Review: ಗ್ರಾಮೀಣ ಸೊಗಡಿನಲ್ಲಿ ಅರಳಿದ ಸೊಬಗು

Team Udayavani, Mar 16, 2024, 11:12 AM IST

Kerebete Movie Review: ಗ್ರಾಮೀಣ ಸೊಗಡಿನಲ್ಲಿ ಅರಳಿದ ಸೊಬಗು

ಮಲೆನಾಡ ಸೊಗಡು, ಹಸಿರಿನ ಸೊಬಗು, ನಿಧಾನವಾಗಿ ಕಣ್ಮರೆಯಾಗುತ್ತಿರುವ “ಕೆರೆಬೇಟೆ’ ಎಂಬ ಗ್ರಾಮೀಣ ಸಂಸ್ಕೃತಿ, ಅಂಟಿಗೆ-ಪಿಂಟಿಗೆ ಪದಗಳ ಲಾಲಿತ್ಯ, ನಡುವೆ ಯೊಂದು ನವಿರಾದ ಪ್ರೇಮಕಥೆ, ಅದರ ಹಿಂದೆ ಕಾಣದ ಕ್ರೌರ್ಯದ ಅಟ್ಟಹಾಸ, ಬಡಜೀವಗಳ ವೇದನೆ, ಜಾತಿ ವೈಷಮ್ಯ ಹೀಗೆ ನಮ್ಮ ನಡುವೆಯೇ ಬೆರೆತು ಹೋದ ಒಂದಷ್ಟು ವಿಷಯಗಳನ್ನು ಪೋಣಿಸಿ ಅದೆಲ್ಲವನ್ನೂ ಸುಂದರ ದೃಶ್ಯ ಕಾವ್ಯದಂತೆ ತೆರೆಮೇಲೆ ತೆರೆದಿಡುವ “ಚಿತ್ರ’ಣವೇ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿರುವ “ಕೆರೆಬೇಟೆ’ ಸಿನಿಮಾ.

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿರುವ “ಕೆರೆಬೇಟೆ’ ಎಂಬ ವಿಭಿನ್ನ ಕ್ರೀಡಾ ಸಂಸ್ಕೃತಿಯನ್ನು ಅನಾವರಣ ಮಾಡುತ್ತಾ¤ ತೆರೆದುಕೊಳ್ಳುವ ಸಿನಿಮಾದ ಕಥೆಯ ಆರಂಭದಲ್ಲಿಯೇ ಯಾರಿಗೂ ಹೆದರದ, ಯಾರಿಗೂ ತಲೆಬಾಗದ,  ಕಳ್ಳನಾಟ ಕುಯ್ದು ಜೈಲುಪಾಲಾಗಿದ್ದ ಹುಲಿಮನೆ ನಾಗ (ನಾಯಕ)ನ ಆಗಮನವಾಗುತ್ತದೆ. ಊರಿನವರ ಅಸಹನೆಗೆ ಗುರಿಯಾಗಿರುವ, ರೋಷಾವೇಶವನ್ನೆ ಮೈ ತುಂಬಿಕೊಂಡಿ ಕೊಂಡಿರುವ “ಮನೆಹಾಳ’ ನಾಗನ ಬದುಕಿಗೆ ನಿಧಾನವಾಗಿ ಮೀನಾ (ನಾಯಕಿ) ಅಡಿಯಿಡುತ್ತಾಳೆ. ಇಬ್ಬರ ನಡುವೆ ಪ್ರೀತಿ ಮೂಡಿ, ಈ ವಿಷಯ ಕುಟುಂಬದವರಿಗೆ ತಿಳಿಯುವ ಹೊತ್ತಿಗೆ ಕಥೆಯಲ್ಲೊಂದು ಅನಿರೀಕ್ಷಿತ ತಿರುವು ಸಿಗುತ್ತದೆ. ಆನಂತರ ನಡೆಯುವುದೆಲ್ಲವೂ ನೋಡುಗರು ಊಹಿಸಲಾಗದಂಥ ಸನ್ನಿವೇಶಗಳು.

ಮಲೆನಾಡು ಸಂಸ್ಕೃತಿಯ ಜೊತೆಗೆ ಒಂದು ಲವ್‌ಸ್ಟೋರಿ ಯನ್ನು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ “ಕೆರೆಬೇಟೆ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ರಾಜಗುರು. ನವಿರಾದ ಹಾಡು, ಕೂತಲ್ಲೇ ಕಚಗುಳಿಯಿಡುವ ಕಾಮಿಡಿ, ರಗಡ್‌ ಎನಿಸುವಂಥ ಪಾತ್ರಗಳು, ಭರ್ಜರಿ ಆ್ಯಕ್ಷನ್‌, ಮಾಸ್‌ ಡೈಲಾಗ್ಸ್‌ ಹೀಗೆ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ಪಕ್ಕಾ ಗ್ರಾಮೀಣ ಸೊಗಡಿನ ಕಥೆಯನ್ನು ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನದಲ್ಲಿ ಚಿತ್ರತಂಡ ಬಹುತೇಕ ಯಶಸ್ವಿಯಾಗಿದೆ.

ನಾಯಕ ಗೌರಿಶಂಕರ್‌ ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾದಲ್ಲಿ ಸಾಕಷ್ಟು ಮಾಡಿದ್ದಾರೆ. ಮಲೆನಾಡ ಹಳ್ಳಿ ಹುಡುಗನಾಗಿ ತಮ್ಮ ಪಾತ್ರವನ್ನು ಮನ‌ ಮುಟ್ಟುವಂತೆ ಪ್ರೇಕ್ಷಕರಿಗೆ ಒಪ್ಪಿಸಿ ಫ‌ುಲ್‌ ಮಾರ್ಕ್ಸ್ ಪಡೆ ದು ಕೊಳ್ಳುತ್ತಾರೆ. ನಾಯಕಿ ಬಿಂದು ಕೂಡ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ನಾಯಕಿ ತಂದೆಯಾಗಿ ಗೋಪಾಲ್‌ ದೇಶಪಾಂಡೆ, ನಾಯಕನ ತಾಯೊಯಾಗಿ ಹರಿಣಿ ಅವರದ್ದು ಎಂದಿನಂತೆ ಅಚ್ಚುಕಟ್ಟಾದ ಅಭಿನಯ. ಉಳಿದಂತೆ ಸಂಪತ್‌, ರಾಕೇಶ್‌ ಪೂಜಾರಿ ಮತ್ತಿತ ರರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

PIL: ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ರದ್ದು ಕೋರಿ ಸುಪ್ರೀಂಗೆ ಪಿಐಎಲ್‌

Supplying Arms: ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ರದ್ದು ಕೋರಿ ಸುಪ್ರೀಂಗೆ ಪಿಐಎಲ್‌

Road Mishap ಉದ್ಯಾವರ: ಬೈಕ್‌ಗೆ ಲಾರಿ ಢಿಕ್ಕಿ: ಸವಾರನಿಗೆ ಗಂಭೀರ ಗಾಯ

Road Mishap ಉದ್ಯಾವರ: ಬೈಕ್‌ಗೆ ಲಾರಿ ಢಿಕ್ಕಿ: ಸವಾರನಿಗೆ ಗಂಭೀರ ಗಾಯ

Peace Pact: ತ್ರಿಪುರಾದ 2 ಬಂಡಕೋರ ಸಂಘಟನೆಗಳ ಜತೆಗೆ ಕೇಂದ್ರ, ತ್ರಿಪುರ ಒಪ್ಪಂದ

Peace Pact: ತ್ರಿಪುರಾದ 2 ಬಂಡಕೋರ ಸಂಘಟನೆಗಳ ಜತೆಗೆ ಕೇಂದ್ರ, ತ್ರಿಪುರ ಒಪ್ಪಂದ

Rain1

Rain Alert: ದಕ್ಷಿಣ ಕನ್ನಡ ಸೇರಿ 10 ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಗೂಳಿಗಳ ಉಪಟಳ… ವಿದ್ಯಾರ್ಥಿನಿಗೆ ಗಾಯ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಗೂಳಿಗಳ ಉಪಟಳ… ವಿದ್ಯಾರ್ಥಿನಿಗೆ ಗಾಯ

Bihar: ಸಂಗೀತ ಕಾರ್ಯಕ್ರಮದ ವೇಳೆ ಶೀಟ್‌ ಕುಸಿದು 100 ಮಂದಿಗೆ ಗಾಯ

Bihar: ಸಂಗೀತ ಕಾರ್ಯಕ್ರಮದ ವೇಳೆ ಶೀಟ್‌ ಕುಸಿದು 100 ಮಂದಿಗೆ ಗಾಯ

Election: ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ: ರಾಮ್‌ ಮಾಧವ್‌

Election: ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ: ರಾಮ್‌ ಮಾಧವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Kantara effect‌: ಗಣೇಶನ ವಿಗ್ರಹಕ್ಕೆ ಪಂಜುರ್ಲಿ ದೈವದ ಲುಕ್.! ಕರಾವಳಿಯಲ್ಲಿ ಆಕ್ರೋಶ

Yala Kunni Movie: ದ್ವಿಪಾತ್ರದಲ್ಲಿ ಕೋಮಲ್‌

Yala Kunni Movie: ದ್ವಿಪಾತ್ರದಲ್ಲಿ ಕೋಮಲ್‌

11

Sandalwood: ಹೊಸಬರ 1990 ಲವ್‌ಸ್ಟೋರಿ

Deepika Das: ಏಕಾಂಗಿ ಸಂಚಾರಿಯ ಸಾಹಸ ಯಾತ್ರೆ

Deepika Das: ಏಕಾಂಗಿ ಸಂಚಾರಿಯ ಸಾಹಸ ಯಾತ್ರೆ

Sandalwood: ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ಆಗಬೇಕು: ಸಿಎಂಗೆ ಪತ್ರ

Sandalwood: ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ಆಗಬೇಕು: ಸಿಎಂಗೆ ಪತ್ರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Kaup ಯೋಜನೆಗಳ ಜಾರಿಗೆ ಆಡಳಿತ ವ್ಯವರ್ಸತೆ ವಿಫ‌ಲ: ಗುರ್ಮೆ ಆಕ್ರೋಶ

Kaup ಯೋಜನೆಗಳ ಜಾರಿಗೆ ಆಡಳಿತ ವ್ಯವಸ್ಥೆ ವಿಫ‌ಲ: ಗುರ್ಮೆ ಆಕ್ರೋಶ

PIL: ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ರದ್ದು ಕೋರಿ ಸುಪ್ರೀಂಗೆ ಪಿಐಎಲ್‌

Supplying Arms: ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ರದ್ದು ಕೋರಿ ಸುಪ್ರೀಂಗೆ ಪಿಐಎಲ್‌

Moodbidri: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Moodbidri: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Road Mishap ಉದ್ಯಾವರ: ಬೈಕ್‌ಗೆ ಲಾರಿ ಢಿಕ್ಕಿ: ಸವಾರನಿಗೆ ಗಂಭೀರ ಗಾಯ

Road Mishap ಉದ್ಯಾವರ: ಬೈಕ್‌ಗೆ ಲಾರಿ ಢಿಕ್ಕಿ: ಸವಾರನಿಗೆ ಗಂಭೀರ ಗಾಯ

complaint

Shirlalu ಗ್ರಾಮ ಸಭೆಯಲ್ಲಿ ಹೊಡೆದಾಟ- ಎರಡು ತಂಡಗಳ ವಿರುದ್ಧ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.