ಇತಿಹಾಸ ಬರೆದ ಕೆಜಿಎಫ್ 2: ಐದೇ ದಿನದಲ್ಲಿ 200 ಕೋಟಿ ರೂ. ಬಾಚಿದ ಹಿಂದಿ ವರ್ಷನ್
Team Udayavani, Apr 18, 2022, 3:51 PM IST
ರಾಕಿಂಗ್ ಸ್ಟಾರ್ ಯಶ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಅದರಲ್ಲೂ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಿಂದಿ ವರ್ಷನ್ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಕೇವಲ ಐದೇ ದಿನದಲ್ಲಿ 200 ಕೋಟಿ ರೂ ಬಾಚಿಕೊಳ್ಳಲಿದೆ ಎಂದು ವರದಿಯಾಗಿದೆ.
ಬಾಲಿವುಡ್ ಅನಲಿಸ್ಟ್ ತರಣ್ ಆದರ್ಶ್ ಪ್ರಕಾರ ಕೆಜಿಎಫ್ 2 ಬಿಡುಗಡೆಯಾಗಿ ಐದನೇ ದಿನವೇ (ಸೋಮವಾರ) 200 ಕೋಟಿ ಕ್ಲಬ್ ಸೇರಲಿದೆ. ಮೊದಲ ನಾಲ್ಕು ದಿನದಲ್ಲಿ ಚಿತ್ರದ ಹಿಂದಿ ವರ್ಷನ್ 193.99 ಕೋಟಿ ರೂ ಗಳಿಸಿದ್ದು, ಸೋಮವಾರ 200 ಕೋಟಿ ರೂ. ಗಡಿ ದಾಟಲಿದೆ.
ಇದನ್ನೂ ಓದಿ:ಐಪಿಎಲ್ ಮೇಲೆ ಕೋವಿಡ್ ಕರಿಛಾಯೆ; ಡೆಲ್ಲಿ ಪಾಳಯದಲ್ಲಿ ಮತ್ತಿಬ್ಬರಿಗೆ ಸೋಂಕು ದೃಢ!
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಹಿಂದಿ ವರ್ಷನ್ ಮೊದಲ ದಿನ 53.95 ಕೋಟಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ ಮತ್ತು ನಾಲ್ಕನೇ ದಿನದಲ್ಲಿ 50.35 ಕೋಟಿ ರೂ ಗಳಿಸಿದೆ.
ಈ ಮೂಲಕ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಾಹುಬಲಿ 2 ಚಿತ್ರದ ದಾಖಲೆಯನ್ನು ‘ಕೆಜಿಎಫ್ ಚಾಪ್ಟರ್ 2’ ಮುರಿಯಲಿದೆ. ಬಾಹುಬಲಿ 2 ಚಿತ್ರವು ಆರು ದಿನದಲ್ಲಿ 200 ಕೋಟಿ ಕ್ಲಬ್ ಸೇರಿತ್ತು.
R#KGF2 CREATES HISTORY AGAIN… FASTEST TO ENTER ₹ 200 CR CLUB…
⭐ #KGFChapter2: Will cross ₹ 200 cr today [Mon, Day 5]
⭐ #Baahubali2: Day 6#KGF2 is REWRITING RECORD BOOKS… Thu 53.95 cr, Fri 46.79 cr, Sat 42.90 cr, Sun 50.35 cr. Total: ₹ 193.99 cr. #India biz. #Hindi. pic.twitter.com/ysKnW2zIuV— taran adarsh (@taran_adarsh) April 18, 2022
ಹೊಂಬಾಳೆ ಫಿಲಂಸ್ ಬ್ಯಾನರಿನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.