KGF 2 ದಾಖಲೆ; 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಯಶ್ ಸಿನಿಮಾ
Team Udayavani, Apr 11, 2022, 12:00 PM IST
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಫ್-2′ ಸಿನಿಮಾದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ಗುರುವಾರ (ಏ.14ಕ್ಕೆ) ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲೂ “ಕೆಜಿಎಫ್-2′ ಬಿಡುಗಡೆ ಆಗಲಿದ್ದು, ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದೇ ವೇಳೆ ಮಾತಿಗೆ ಸಿಕ್ಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚಿತ್ರತಂಡ “ಕೆಜಿಎಫ್-2′ ಬಿಡುಗಡೆಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್
“ಕೆಜಿಎಫ್-2′ ಭಾರತದಲ್ಲಿ ದಾಖಲೆಯ ಸ್ಕ್ರೀನ್‌ಗಳಲ್ಲಿ ತೆರೆ ಕಾಣಲಿದೆ ಎಂದು ಮೊದಲಿನಿಂದಲೂ ಹೇಳಲಾಗುತ್ತಿತ್ತು. ಆದರೆ ಅಧಿಕೃತವಾಗಿ ಆ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ಈಗ ಚಿತ್ರತಂಡದಿಂದ ಬಂದಿರುವ ಉತ್ತರ 5 ಸಾವಿರ. ಹೌದು, “ಕೆಜಿಎಫ್-2′ ಸಿನಿಮಾ ಭಾರತದಲ್ಲೇ ದಾಖಲೆಯ ಐದು ಸಾವಿರಕ್ಕೂ ಹೆಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ “ಕೆಜಿಎಫ್-2′ ನಿರ್ಮಾಪಕ ವಿಜಯ್ ಕಿರಗಂದೂರು, “ಭಾರತದಲ್ಲಿ ಸರಿಸುಮಾರು 9500 ಚಿತ್ರಮಂದಿರಗಳಿದ್ದು, ಈ ಪೈಕಿ ಐದು ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ “ಕೆಜಿಎಫ್-2′ ರಿಲೀಸ್‌ಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು ಕರ್ನಾಟಕದಲ್ಲೇ 500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ.
ವಿದೇಶಗಳಲ್ಲೂ ಭರ್ಜರಿ ಡಿಮ್ಯಾಂಡ್, ಭಾರೀ ರೆಸ್ಪಾನ್ಸ್
ಇನ್ನು “ಕೆಜಿಎಫ್-2′ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಏಕಕಾಲಕ್ಕೆ ತೆರೆ ಕಾಣುತ್ತಿದೆ. “ಅಮೆರಿಕಾದಲ್ಲಿ ಕೂಡ ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಟಿಕೆಟ ಬುಕ್ಕಿಂಗ್ ಆಗುತ್ತಿದೆ. ಅಲ್ಲಿ ತೆಲುಗು ಮಾತನಾಡುವವರ ಜನಸಂಖ್ಯೆ ಜಾಸ್ತಿ ಇರುವುದರಿಂದ, ತೆಲುಗು ವರ್ಶನ್‌ಗೆ ಡಿಮ್ಯಾಂಡ್ ಹೆಚ್ಚಿದೆ. ಈಗಾಗಲೇ ತಮಿಳು, ಹಿಂದಿ ಭಾಷೆಗಳಲ್ಲಿ ಬೇರೆ ಸಿನಿಮಾಗಳಿಂದ ಕಾಂಪಿಟೇಶನ್ ಇರುವುದರಿಂದ, ಅಡ್ವಾನ್ಸ್ ಬುಕಿಂಗ್ ಶುರು ಮಾಡಲಾಗಿದೆ. ವಿದೇಶಗಳಲ್ಲೂ “ಕೆಜಿಎಫ್-2’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ’ ಎನ್ನುತ್ತಾರೆ ವಿಜಯ್ ಕಿರಗಂದೂರು.
ಸದ್ಯಕ್ಕಂತೂ ಲಾಭ ಬಂದಿಲ್ಲ; ಬಜೆಟ್ ಗುಟ್ಟು ಬಿಟ್ಟುಕೊಡುವುದಿಲ್ಲ…
“ಕೆಜಿಎಫ್-2′ ಸಿನಿಮಾಕ್ಕೆ ಡಿಮ್ಯಾಂಡ್ ಹೆಚ್ಚಾಗಿರುವುದರಿಂದ, ಬಿಝಿನೆಸ್ ಚೆನ್ನಾಗಿ ಆಗಿರಬಹುದು, ಚಿತ್ರತಂಡ ಲಾಭದಲ್ಲಿರಬಹುದು. “ಕೆಜಿಎಫ್-2′ ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗು ತ್ತಿರುವುದರಿಂದ ಅದರ ಬಜೆಟ್ ಎಷ್ಟಿರಬಹುದು ಎಂಬುದು ಸಹಜವಾಗಿಯೇ ಸಿನಿಪ್ರಿಯರ ಕುತೂಹಲ. ಇದೇ ಪ್ರಶ್ನೆಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮುಂದಿಟ್ಟರೆ ಅವರಿಂದ ಬರುವ ಉತ್ತರ ಹೀಗಿದೆ. “ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಿಸಿರುವುದೇನೋ ನಿಜ. ಸಿನಿಮಾದ ಸಬೆjಕ್ಟ್ ಏನು ಡಿಮ್ಯಾಂಡ್ ಮಾಡಿತ್ತೋ, ಅದೆಲ್ಲವನ್ನು ಕೊಟ್ಟು ಸಿನಿಮಾ ಮಾಡಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಿನಿಮಾಗಳ ಬಜೆಟ್ ಬಹಿರಂಗಪಡಿಸಿಲ್ಲ. ಹಾಗಾಗಿ ಬಜೆಟ್ ಹೇಳುವುದಕ್ಕೆ ಇಷ್ಟವಿಲ್ಲ. ಇನ್ನು ರಿಲೀಸ್‌ಗೂ ಮುಂಚೆಯೇ ಸಿನಿಮಾ ಲಾಭ ಮಾಡಿಕೊಟ್ಟಿದೆ ಎಂದು ಈಗಲೇ ಹೇಳುವಂತಿಲ್ಲ. ಸಿನಿಮಾವನ್ನು ನಾವು ಮಾರಾಟ ಮಾಡಿಲ್ಲ. ಹೀಗಾಗಿ ಲಾಭದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ’ ಎನ್ನುವುದು ವಿಜಯ್ ಕಿರಗಂದೂರು ಮಾತು
ಪೈರಸಿ ತಡೆಯುವುದು ಜನರ ಕೈಯಲ್ಲಿದೆ
ಈಗಾಗಲೇ ಬಿಡುಗಡೆಯಾಗಿರುವ ಬಿಗ್‌ಸ್ಟಾರ್ ಸಿನಿಮಾಗಳಿಗೆ ಎದುರಾಗಿದ್ದ ಪೈರಸಿ ಕಾಟ “ಕೆಜಿಎಫ್-2’ಗೂ ಇದೆ. ಯಾವುದೇ ದೊಡ್ಡ ಸಿನಿಮಾಕ್ಕಾದರೂ ಪೈರಸಿ ದೊಡ್ಡ ಶತ್ರು. ಅಂತೆಯೇ “ಕೆಜಿಎಫ್-2′ ಸಹ ಈ ಸಮಸ್ಯೆಯಿಂದ ಹೊರತಲ್ಲ. ಪೈರಸಿ ತಡೆಯಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಯಶ್ ಉತ್ತರ ಹೀಗಿದೆ. “ನಾವು ಚಾಪೆ ಕೆಳಗೆ ತೂರಿದರೆ, ಅವರು ರಂಗೋಲಿ ಕೆಳಗೆ ತೂರುತ್ತಾರೆ. ಹಾಗಾಗಿ, ಜನ ತೀರ್ಮಾನಿಸಬೇಕು. ಚರ್ಮ ಖರೀದಿಸುವುದನ್ನು ನಿಲ್ಲಿಸಿದರೆ, ಪ್ರಾಣಿಗಳನ್ನು ಕೊಲ್ಲುವುದು ಸಹ ತಪ್ಪುತ್ತದೆ. ಹಾಗೆಯೇ, ಪೈರಸಿ ನೋಡಬಾರದು ಎಂದು ಜನ ತೀರ್ಮಾನಿಸಿದರೆ, ಪೈರಸಿ ಸಹ ನಿಲ್ಲುತ್ತದೆ. ಜನ ಪೈರಸಿ ಸಿನಿಮಾವನ್ನೇ ನೋಡಬೇಕು ಎಂದು ತೀರ್ಮಾನಿಸಿದರೆ, ಅದು ಅವರ ನಷ್ಟ. ಥಿಯೇಟರ್‌ಗಳಲ್ಲಿ ಸಿನಿಮಾ ಚೆನ್ನಾಗಿ ಕಾಣಿಸಬೇಕು, ಕೇಳಿಸಬೇಕು ಎಂದು ಬಹಳ ಕೆಲಸ ಮಾಡಿರುತ್ತೀವಿ. ಹಾಗಾಗಿ, ಜನ ಯಾವುದು ಒಳ್ಳೆಯದು ಅನ್ನೋದನ್ನ ತೀರ್ಮಾನಿಸಬೇಕು’ ಎನ್ನುತ್ತಾರೆ.
“ಕೆಜಿಎಫ್’ ಸರಣಿ ಮತ್ತೆ ಮುಂದುವರೆಯುತ್ತಾ?
ಇನ್ನು “ಕೆಜಿಎಫ್’ ಅನ್ನೋ ಹೆಸರಿಗೆ ತನ್ನದೇ ಆದ ಬ್ರ್ಯಾಂಡ್ ವ್ಯಾಲ್ಯೂ ಇರೋದ್ರಿಂದ್ರ, “ಕೆಜಿಎಫ್-2′ ಬಳಿಕ ಮತ್ತೆ ಸರಣಿ ಮುಂದುವರೆಯಲಿದೆಯಾ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಶಾಂತ್ ನೀಲ್, “”ಅವೆಂಜರ್’ ತರಹವೇ “ಕೆಜಿಎಫ್’ ಸರಣಿಗೂ ತನ್ನದೇ ಆದ ಬ್ರ್ಯಾಂಡ್ ವ್ಯಾಲ್ಯೂ ಇದೆ ಅನ್ನೋದೇನೋ ನಿಜ. ಆದರೆ, “ಕೆಜಿಎಫ್-2′ ನಂತರ “ಕೆಜಿಎಫ್-3′ ಮಾಡುವ ಯೋಚನೆ ಏನಾದರೂ ಇದೆಯಾ ಅನ್ನೋದನ್ನ ಏ. 14ರ ನಂತರ ನೋಡೋಣ’ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ…. “ಕೆಜಿಎಫ್’ ಸಿನಿಮಾವನ್ನು ಮುಂದುವರೆಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ, ಸದ್ಯಕ್ಕೆ ಚಿತ್ರವನ್ನು ಮುಂದುವರೆಸುವ ಯೋಚನೆ ಇಲ್ಲ. “ಕೆಜಿಎಫ್-2′ ಯಶಸ್ವಿಯಾದರೆ ಮುಂದೆ ನೋಡೋಣ’ ಎನ್ನುವುದು ಪ್ರಶಾಂತ್ ನೀಲ್ ಮಾತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.