ದಂಗಲ್, ಬಾಹುಬಲಿ 2 ದಾಖಲೆ ಮುರಿದ ಕೆಜಿಎಫ್; 2 ದಿನದಲ್ಲಿ ಯಶ್ ಸಿನಿಮಾ ಗಳಿಸಿದ್ದೆಷ್ಟು?
Team Udayavani, Apr 16, 2022, 3:30 PM IST
ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಗೆ ಬಂದಿರುವ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಒಂದೊಂದೇ ದಾಖಲೆಗಳನ್ನು ಬದಿಗೆ ಸರಿಸಿ ಮುನ್ನುಗ್ಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರವು 9.7 ಐಎಂಡಿಬಿ ರೇಟಿಂಗ್ ಪಡೆದುಕೊಂಡಿದೆ. ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಎಚ್‍ಪಿ ಕ್ರೋಮ್‍ಬುಕ್ ಎಕ್ಸ್ 360 14 ಬಿಡುಗಡೆ; ಏನಿದರ ವಿಶೇಷತೆ? ಬೆಲೆ ಎಷ್ಟು?
ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಕೇವಲ ಎರಡು ದಿನದಲ್ಲಿ 300 ಕೋಟಿ ರೂ ಕ್ಲಬ್ ಸೇರಿದೆ ಎಂದು ವರದಿ ತಿಳಿಸಿದೆ. ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಂಡಿರುವ ಚಿತ್ರವು ಮೊದಲ ದಿನದಲ್ಲಿ 165.37 ಕೋಟಿ ರೂ ಗಳಿಸಿದ್ದರೆ, ಎರಡನೇ ದಿನ 139.25 ಕೋಟಿ ರೂ ಗಳಿಸಿದೆ.
#KGFChapter2 WW Box Office
ENTERS the PRESTIGIOUS ₹300 cr club in just 2 days.
Day 1 – ₹ 165.37 cr
Day 2 – ₹ 139.25 cr
Total – ₹ 304.62 crEXCELLENT HOLD.
In many circuits Day 2 fetched more than Day 1.#Yash #KGF2
— Manobala Vijayabalan (@ManobalaV) April 16, 2022
‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಿಂದಿ ವರ್ಷನ್ ಬಾಲಿವುಡ್ ನ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಹಿಂದಿ ಭಾಷೆಯಲ್ಲಿನ ಮೊದಲ ದಿನದ ದಾಖಲೆ ಮುರಿದಿದ್ದ ಯಶ್ ಸಿನಿಮಾ ಎರಡನೇ ದಿನವೂ ಹಲವಾರು ದಾಖಲೆಗಳನ್ನು ಬರೆದಿದೆ.
‘ಕೆಜಿಎಫ್ ಚಾಪ್ಟರ್ 2’ ಹಿಂದಿ ವರ್ಷನ್ ಕೇವಲ ಎರಡೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ಚಿತ್ರವು ಮೊದಲ ದಿನ 53.95 ಕೋಟಿ ರೂ. ಗಳಿಸಿದ್ದರೆ, ಎರಡನೇ ದಿನ 46.79 ಕೋಟಿ ರೂ ಗಳಿಸಿದೆ. ಈ ಮೂಲಕ ಎರಡೇ ದಿನದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹಿಂದಿ ವರ್ಷನ್ 100.74 ಕೋಟಿ ರೂ ಗಳಿಸಿದೆ.
ಇದೇ ವೇಳೆ ಬಾಹುಬಲಿ 2 ಮತ್ತು ದಂಗಲ್ ಚಿತ್ರಗಳ ದಾಖಲೆಯನ್ನು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಮುರಿದಿದೆ. ಬಾಹುಬಲಿ 2 ಚಿತ್ರದ ಹಿಂದಿ ವರ್ಷನ್ ಎರಡನೇ ದಿನ 40.50 ಕೋಟಿ ರೂ ಗಳಿಸಿದ್ದರೆ, ಅಮೀರ್ ಖಾನ್ ರ ದಂಗಲ್ ಚಿತ್ರವು ಎರಡನೇ ದಿನ 34.82 ಕೋಟಿ ರೂ ಗಳಿಸಿತ್ತು. ಈ ಎಲ್ಲಾ ದಾಖಲೆ ಅಳಿಸಿರುವ ‘ಕೆಜಿಎಫ್ ಚಾಪ್ಟರ್ 2’ ಎರಡನೇ ದಿನದಲ್ಲಿ 46.79 ಕೋಟಿ ರೂ ಗಳಿಸಿಕೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.