ಸ್ಥಳೀಯ ಚಾನೆಲ್ ವಿರುದ್ಧ ಕೆಜಿಎಫ್ ತಂಡ ಗರಂ
ಸಿನಿಮಾ ಪ್ರಸಾರ ಮಾಡಿದ್ದಕ್ಕೆ ಕಾನೂನು ಹೋರಾಟದ ಎಚ್ಚರಿಕೆ
Team Udayavani, May 11, 2020, 12:09 PM IST
ಕೆಜಿಎಫ್ ಕನ್ನಡ ಸಿನಿಮಾರಂಗ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವನ್ನೇ ಹಾಗೊಮ್ಮೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಈಗ ಈ ಚಿತ್ರದ ಬಗ್ಗೆ ಯಾಕೆ ಪೀಠಿಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ತೆಲುಗಿನ ಸ್ಥಳೀಯ ವಾಹಿನಿಯೊಂದು ತೆಲುಗು ಭಾಷೆಯ ಕೆಜಿಎಫ್ ಚಿತ್ರವನ್ನು ಪ್ರಸಾರ ಮಾಡಿದೆ. ಅದು ಅಕ್ರಮ ಎಂದು ಕೆಜಿಎಫ್ ತಂಡ ಆಕ್ರೋಶ ಹೊರಹಾಕಿದ್ದು, ಆ ಚಾನೆಲ್ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ವಿಶೇಷವೆಂದರೆ, ಇನ್ನೂ, ತೆಲುಗು ಟಿವಿ ರೈಟ್ಸ್ ಸೇಲ್ ಆಗಿಲ್ಲ. ಅದಾಗಲೇ ಸ್ಥಳೀಯ ಚಾನೆಲ್ ಪ್ರಸಾರ ಮಾಡಿದೆ. ಹೀಗಾಗಿ ಹೊಂಬಾಳೆ ಬ್ಯಾನರ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಟ್ವೀಟ್ ಮೂಲಕ ಬೇಸರ ಹೊರಹಾಕಿದ್ದು, ಗರಂ ಆಗಿದ್ದಾರೆ. ಅಂದಹಾಗೆ, ತೆಲುಗಿನ ಎವೆರಿ ಎಂಬ ಸ್ಥಳೀಯ ವಾಹಿನಿಯಲ್ಲಿ ಕೆಜಿಎಫ್ ಚಿತ್ರದ ತೆಲುಗುಅವತರಣಿಕೆಯನ್ನು ಪ್ರಸಾರ ಮಾಡಿದ್ದು ವ್ಯಾಪಾರ ವಹಿವಾಟುಗೆ ಪೆಟ್ಟು ಬಿದ್ದಿದೆ.
ಹೀಗಾಗಿ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ತಮ್ಮ ಟ್ವೀಟ್ನಲ್ಲಿ ಬೇಸರ ಹೊರಹಾಕಿರುವ ಕಾರ್ತಿಕ್ ಗೌಡ, ತೆಲುಗು ಲೋಕಲ್ ಚಾನೆಲ್ ಅಕ್ರಮವಾಗಿ ಕೆಜಿಎಫ್ ಚಿತ್ರವನ್ನು ಪ್ರಸಾರ ಮಾಡಿದೆ. ನಾವು ಕಾನೂನಾತ್ಮಕವಾಗಿ ಆ ಚಾನೆಲ್ ವಿರುದ್ಧ ಹೋರಾಟ ಮಾಡುತ್ತೇವೆ. ಇನ್ನೂ ಟಿವಿ ರೈಟ್ಸ್ ಮಾರಾಟವಾಗಿಲ್ಲ. ಹೀಗಿರುವಾಗಲೇ ಕೇಬಲ್ ಚಾನೆಲ್ ಇಂತಹ ಕೆಲಸಮಾಡಿದೆ. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.
ಅಕ್ಟೋಬರ್ 23 ರಂದು ಕೆಜಿಎಫ್2 ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ಡೌನ್ ಆಗಿರುವುದರಿಂದ ಆ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆಯಾದರೂ, ಚಿತ್ರತಂಡದಿಂದ ಇನ್ನೂ ಯಾವುದೇ ಸುದ್ದಿ ಬಹಿರಂಗವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.