ಕಥಾ ಸಂಗಮದಲ್ಲಿ ಹರಿಪ್ರಿಯಾರದ್ದು ನಿಗೂಢ ಪಾತ್ರ!
Team Udayavani, Dec 4, 2019, 6:26 PM IST
ಶ್ರೀದೇವಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಚಿತ್ರ ಇದೇ ಡಿಸೆಂಬರ್ ೬ರಂದು ತೆರೆಗಾಣುತ್ತಿದೆ. ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಕಥೆಯಿರುತ್ತದೆ. ಅದಕ್ಕೊಂದಷ್ಟು ಕೊಂಬೆ ಕೋವೆಗಳಿದ್ದರೂ ಸಿಕ್ಕು ಸಿಕ್ಕಾಗಿ ಬಿಡುವ ಅಪಾಯವೇ ಹೆಚ್ಚು. ಅಂಥಾದ್ದರಲ್ಲಿ ಕಥಾ ಸಂಗಮದಲ್ಲಿ ಏಳು ಕಥೆಗಳಿವೆ. ಏಳು ಮಂದಿ ನಿರ್ದೇಶಕರುಗಳು ಒಂದೊಂದು ಕಥೆಯನ್ನು ದೃಷ್ಯೀಕರಿಸಿದ್ದಾರೆ. ರಿಷಬ್ ಶೆಟ್ಟಿ ಅದೆಲ್ಲವನ್ನೂ ಸೂತ್ರದಾರನಂತೆ ಎಲ್ಲಿಯೂ ಸಿಕ್ಕಾಗದಂತೆ ಹಿಡಿದಿಟ್ಟಿದ್ದಾರೆ. ಅಂತೂ ಈ ಕಥಾ ಸಂಗಮ ಏಳು ಸಿನಿಮಾವನ್ನು ಒಟ್ಟೊಟ್ಟಿಗೆ ತೋರಿಸಲಿದೆ.
ಇತ್ತೀಚೆಗಷ್ಟೇ ಕಥಾ ಸಂಗಮದ ಸಮ್ಮೋಹಕವಾದ ಟ್ರೇಲರ್ ಬಿಡುಗಡೆಯಾಗಿದೆ. ಒಂದೇ ದಿನದಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆಯುವ ಮೂಲಕ ವಿರಾಟ್ ರೂಪವನ್ನೇ ಪ್ರದರ್ಶಿಸಿದೆ. ಇದರಲ್ಲಿ ಏಳು ಕಥೆಯ ಚಹರೆಗಳೊಂದಿಗೆ ಆಯಾ ಕಥೆಗಳ ಪಾತ್ರಗಳೂ ಕೂಡಾ ಮಿಂಚಿ ಹೋಗಿವೆ. ಅದರಲ್ಲಿ ಹರಿಪ್ರಿಯಾರ ಪಾತ್ರವೂ ಸೇರಿಕೊಂಡಿದೆ. ಅವಿನಾಶ್, ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ ಪಾತ್ರಗಳಂತೆ ಹರಿಪ್ರಿಯಾರ ಪಾತ್ರವೂ ಪರಿಚಯವಾಗಿದೆ. ಅದರಲ್ಲಿ ಅವರು ಹೈಫೈ ಲುಕ್ಕಿನಲ್ಲಿ ಮಿಂಚಿದ್ದಾರೆ. ಆದರೆ ಅವರ ಪಾತ್ರ ಏನೆಂಬುದರ ಬಗ್ಗೆ ರಿಷಬ್ ಶೆಟ್ಟಿಯಾಗಲಿ, ಇತರೇ ನಿರ್ದೇಶಕರಾಗಲಿ ಈ ವರೆಗೂ ಬಾಯಿ ಬಿಟ್ಟಿಲ್ಲ. ಈ ಕಾರಣದಿಂದ ಹರಿಪ್ರಿಯಾ ಪಾತ್ರವೆಂಬುದು ನಿಗೂಢವಾಗಿಯೇ ಉಳಿದು ಹೋಗಿದೆ.
ಅದೇನು ಅದೃಷ್ಟವೋ ಗೊತ್ತಿಲ್ಲ; ಹರಿಪ್ರಿಯಾ ಪಾಲಿಗೆ ಭಿನ್ನಾತಿ ಭಿನ್ನವಾದ ಪಾತ್ರಗಳೇ ಹುಡುಕಿ ಬರುತ್ತಿವೆ. ಯಾವ ಪಾತ್ರವನ್ನೇ ಆದರೂ ಓರ್ವ ನಟಿಯಾಗಿಯಷ್ಟೇ ದಿಟ್ಟಿಸಿ ಜೀವ ತುಂಬುವ ಸ್ವಭಾವದ ಹರಿಪ್ರಿಯಾ ಇಮೇಜುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರಲ್ಲ. ಇಂಥಾ ಮನಸ್ಥಿತಿ ಮತ್ತು ಪ್ರತಿಭೆಗಳೇ ಅವರಿಗೆ ಕಥಾ ಸಂಗಮದಂಥಾ ಚೆಂದದ ಅವಕಾಶಗಳನ್ನು, ಅಪರೂಪದ ಪಾತ್ರಗಳನ್ನು ಕೊಡಮಾಡುತ್ತಿವೆ. ಕಥಾ ಸಂಗಮದ ಒಂದು ಕಥೆಯಲ್ಲಿ ಅವರು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರತಂಡ ಆ ಪಾತ್ರದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದೆಯಾದರೂ ಹರಿಪ್ರಿಯಾರ ಪಾತ್ರ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗಿಸುವಂತೆ ಮೂಡಿ ಬಂದಿದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಹರಿಪ್ರಿಯಾ ಪಾತ್ರದ ನಿಗೂಢಗಳು ಜಾಹೀರಾಗಲು ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.