Kiccha 46 ಟೀಸರ್: ಯುದ್ದದ ಅಖಾಡದಲ್ಲಿ ಕ್ಷಮೆ,ಸಂಧಾನದ ಮಾತೇ ಇಲ್ಲ; ರಕ್ತಸಿಕ್ತನಾದ ಬಾದ್ ಷಾ
Im Not a Human, Im a Demon..
Team Udayavani, Jul 2, 2023, 12:17 PM IST
ಬೆಂಗಳೂರು: ಬಾದ್ ಷಾ ಕಿಚ್ಚ ಅವರು ಲಾಂಗ್ ಗ್ಯಾಪ್ ಬಳಿಕ ತೆರೆ ಮೇಲೆ ಬರುತ್ತಿರುವ ʼಕಿಚ್ಚ46ʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಭಿಮಾನಿಗಳು ಟೀಸರ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ.
ʼವಿಕ್ರಾಂತ್ ರೋಣʼ ಸಿನಿಮಾದ ಬಳಿಕ ಕಿಚ್ಚ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಹಾಗೂ ಕ್ರಿಕೆಟ್ ನತ್ತ ಹೆಚ್ಚು ಗಮನ ಹರಿಸಿದ್ದರು. ಈ ನಡುವೆ ಅವರ 46ನೇ ಸಿನಿಮಾ ಯಾವಾಗ ಬರುತ್ತದೆ ಮತ್ತು ಯಾರು ನಿರ್ದೇಶಕರು ಎನ್ನುವುದರ ಸುತ್ತ ಹಲುವು ಗಾಸಿಪ್ ಗಳು ಹರಿದಾಡಿತ್ತಿತ್ತು. ಈ ಎಲ್ಲಾ ಕುತೂಹಲಗಳಿಗೆ ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ತೆರೆ ಎಳೆದಿದ್ದರು. ಮೂರು ಸ್ಕ್ರಿಪ್ಟ್ ಗಳು ಫೈನಲ್ ಆಗಿದೆ ಎಂದಿದ್ದರು.
ಅದರಂತೆ ಕೆಲ ದಿನಗಳ ಹಿಂದೆ ಅವರು 46ನೇ ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ್ದರು. ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ನಟಿ ಸಪ್ತಮಿ ಗೌಡ, ವಾಸುಕಿ ವೈಭವ್, ಅನುಪ್ ಭಂಡಾರಿ, ವಿನಯ್ ರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಅವರಿಂದ ‘ಡೇಟ್ ಗೊತ್ತಾಯ್ತಾʼ ಎಂದು ಹೇಳಿಸುವ ಮೂಲಕ Kiccha 46 ಸಿನಿಮಾದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು.
ದೊಡ್ಡ ಕಥೆ ಇದು ಚಿಕ್ಕ Situation ಹೇಳಾ.. ಎಂದು ಆರಂಭವಾಗುವ ಟೀಸರ್ ನಲ್ಲಿ ಗುಂಡಿನ ಏಟಿನಿಂದ ಗಾಯಗೊಂಡ ಕಿಚ್ಚ, ದೇಹಕ್ಕೆ ಹೊಕ್ಕ ಗುಂಡನ್ನು ತಾನೇ ತೆಗೆದು, ಗನ್ ನಿಂದ ವ್ಯಕ್ತಿಯ ಮೇಲೆ ಫೈರಿಂಗ್ ಮಾಡಿದ್ದಾರೆ. “ಯುದ್ಧ ಹುಟ್ಟು ಹಾಕುವವರನ್ನು ಕಂಡರೂ ನನಗೆ ಆಗಲ್ಲ,ಯುದ್ಧಕ್ಕೆ ಹೆದರಿಕೊಂಡು ಓಡಿ ಹೋಗುವವರನ್ನು ಕಂಡರೂ ನನಗೆ ಆಗಲ್ಲ. ಅಖಾಡಕ್ಕಿಳಿದು ಎದುರಾಳಿಗಳ ಎದೆ ಬಗೆದು ರಕ್ತ ಚೆಲ್ಲಾಡಿ, ರಕ್ತ ಸುರಿಸಿಕೊಂಡು ಓಡಿಹೋಗುವವರನ್ನು ನೋಡುವವನು ನಾನು. ಇಳಿದ ಮೇಲೆ ದಯೆ,ಕ್ಷಮೆ ,ಸಂಧಾನ, ಇದು ಯಾವುದು ಇರುವುದಿಲ್ಲ.” ಎನ್ನುವ ಡೈಲಾಗ್ ಗಳಿಗೆ ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಮೈಜುಮ್ ಎನ್ನುವಂತೆ ಮಾಡುತ್ತದೆ. ಸುದೀಪ್ ರಕ್ತಸಿಕ್ತವಾಗಿ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಚ್ಚರಿ ಎಂದರೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಕಾಲಿವುಡ್ ನ ನವ ನಿರ್ದೇಶಕ ವಿಜಯ್ ಕಾರ್ತಿಕೇಯ. ಕಿಚ್ಚ ನವ ನಿರ್ದೇಶಕನ ಜೊತೆ ಕೈಜೋಡಿಸಿರುವುದು ಕುತೂಹಲ ಹುಟ್ಟಿಸಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಕಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ‘ವಿ ಕ್ರಿಯೇಷನ್ಸ್’ನ ಕಲೈಪುಲಿ ಎಸ್. ಧಾನು. ‘ವಿ ಕ್ರಿಯೇಷನ್ಸ್ʼ ‘ಕಬಾಲಿ’, ‘ತುಪಾಕಿ’, ‘ಅಸುರನ್’ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.