‘ಕಬ್ಜ’ ಸೆಟ್‌ಗೆ ಸುದೀಪ್ ಎಂಟ್ರಿ: ಖಡಕ್ ಲುಕ್ ನಲ್ಲಿ ಭಾರ್ಗವ್ ಭಕ್ಷಿ
Team Udayavani, Dec 18, 2021, 11:23 AM IST
ಆರ್.ಚಂದ್ರು ನಿರ್ದೇಶನದ “ಕಬ್ಜ’ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಕನ್ನಡ ಚಿತ್ರರಂಗದಿಂದ ತಯಾರಾಗುತ್ತಿರುವ ಮತ್ತೂಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ದಿನದಿಂದ ದಿನಕ್ಕೆ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದ್ದ “ಕಬ್ಜ’ಗೆ ಮತ್ತೂಬ್ಬ ಸ್ಟಾರ್ ನಟನ ಎಂಟ್ರಿಯಾಗಿರೋದು ನಿಮಗೆ ಗೊತ್ತೇ ಇದೆ. ಅದು ಸುದೀಪ್. ಈ ಮೂಲಕ ಸಿನಿಮಾದ ಕ್ರೇಜ್ ಕೂಡಾ ದುಪ್ಪಟ್ಟಾಗಿದೆ.
ಸುದೀಪ್ “ಕಬ್ಜ’ ಚಿತ್ರಕ್ಕೆ ಎಂಟ್ರಿಕೊಡುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಎದ್ದ ಪ್ರಶ್ನೆ ಎಂದರೆ, ಸುದೀಪ್ ಅವರ ಗೆಟಪ್ ಹೇಗಿರಬಹುದು ಎಂದು. ಈಗ ಸ್ವತಃ ಸುದೀಪ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಫೋಟೋವೊಂದನ್ನು ಟ್ವೀಟ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಮೂಲಕ ಮತ್ತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಚಿತ್ರದಲ್ಲಿ ಸುದೀಪ್ ಅವರ ಹೇರ್ ಸ್ಟೈಲ್‌ನಿಂದ ಹಿಡಿದು ಸಂಪೂರ್ಣ ಲುಕ್ ಬದಲಾಗಲಿದೆ. ಚಿತ್ರದಲ್ಲಿ ಸುದೀಪ್ ಭಾರ್ಗವ್ ಭಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,1947ರಿಂದ1986ರ ಕಾಲಘಟ್ಟದ ಪಾತ್ರವಾಗಿದ್ದು, ಮಾಫಿಯಾ ಕೊನೆಗೊಳಿಸಲು ಭಕ್ಷಿ ಹೊರಡುತ್ತಾನೆ ಎಂಬ ಕ್ಯಾಪ್ಶನ್ ಅನ್ನು “ಕಬ್ಜ’ ಚಿತ್ರದ ಪೋಸ್ಟರ್‌ನಲ್ಲಿ ನೀಡಲಾಗಿದೆ.
ಈಗಾಗಲೇ ಸುದೀಪ್ ಹಾಗೂ ಉಪೇಂದ್ರ “ಮುಕುಂದ ಮುರಾರಿ’ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈಗ “ಕಬ್ಜ’ದಲ್ಲಿ ಮತ್ತೂಮ್ಮೆ ನಟಿಸುತ್ತಿದ್ದಾರೆ. “ಕಬ್ಜ’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಸುದೀಪ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ಚಂದ್ರು ಆಸೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ವಿಶೇಷ ಸೆಟ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರವನ್ನು ಆರ್ ಚಂದ್ರ, ಶ್ರೀಸಿದ್ಧೇಶ್ವರ ಎಂಟರ್‌ಪ್ರೈಸಸ್ ಬ್ಯಾನನರ್‌ಡಿ ನಿರ್ಮಿಸುತ್ತಿದ್ದು, ಉಪೇಂದ್ರ ಮತ್ತು ಸುದೀಪ್ ಅವರ ಜೊತೆಗೆ ರಾಹುಲ್, ಅನೂಪ್ ರೇವಣ್ಣ, ಜಾನ್‌ಕೊಕ್ಕಿನ್, ರಾಹುಲ್ ದೇವ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.
ಇದನ್ನೂ ಓದಿ:ಕನ್ನಡ ಭಾಷೆಯನ್ನು ನಾವು ಬಿಟ್ಟು ಕೊಡಬಾರದು… ರಚ್ಚು ಮಾತು
ಇನ್ನು ಸುದೀಪ್ ಅವರ “ವಿಕ್ರಾಂತ್ ರೋಣ’ ಫೆ.24ರಂದು ಚಿತ್ರ ಬಿಡುಗಡೆಯಾಗಲಿದೆ. “ವಿಕ್ರಾಂತ್ ರೋಣ’ ಆ್ಯಕ್ಷನ್ ಅಡ್ವೆಂಚರ್ ಶೈಲಿಯ ಚಿತ್ರವಾಗಿದ್ದು,55 ದೇಶಗಳಲ್ಲಿ,14 ಭಾಷೆಗಳಲ್ಲಿ3ಡಿ ಬಿಡುಗಡೆಯನ್ನುಕಾಣಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗೂ ಶಾಲಿನಿ ಮಂಜುನಾಥ್ ರವರ ನಿರ್ಮಾಣ, ಅಲಂಕಾರ್ ಪಾಂಡಿಯನ್ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ಜಾಕ್ವೆಲಿನ್ ಕೇವಲ ಹಾಡಿನಲ್ಲಷ್ಟೇಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಾಕ್ವೆಲಿನ್ “ವಿಕ್ರಾಂತ್ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು. ಜಾಕ್ವೆಲಿನ್‌ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್ ಕಲರ್‌ಫುಲ್ ಸೆಟ್ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.