ಸಲ್ಲುಗೆ ಸುದೀಪ್ ವಿಲನ್? ಟೈಗರ್ ಜಿಂದಾ ಹೈನಲ್ಲಿ ಕಿಚ್ಚ
Team Udayavani, Mar 20, 2017, 3:52 PM IST
ಸುದೀಪ್ ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮತ್ತೂಮ್ಮೆ ಹಿಂದಿ ಸಿನಿಮಾ ವಿಷಯಕ್ಕಾಗಿ ಸುದೀಪ್ ಸುದ್ದಿಯಲ್ಲಿದ್ದಾರೆ. ಅದು ಸಲ್ಮಾನ್ ಖಾನ್ ಅವರ “ಟೈಗರ್ ಜಿಂದಾ ಹೈ’ ಸಿನಿಮಾದಿಂದ.
ಸಲ್ಮಾನ್ ಖಾನ್ ನಾಯಕರಾಗಿರುವ ಈ ಸಿನಿಮಾದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಅದು ನೆಗೆಟಿವ್ ಶೇಡ್‌ನ ಪಾತ್ರ. ಹೌದು, ಈ ಚಿತ್ರದಲ್ಲಿ ಸುದೀಪ್ ಜಾಹೀರ್ ಎನ್ನುವ ಪಾಕಿಸ್ತಾನದ ಐಎಸ್‌ಐ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಂದಹಾಗೆ, ಇದು
2012ರಲ್ಲಿ ತೆರೆಕಂಡ “ಏಕ್ತಾ ಟೈಗರ್’ ಚಿತ್ರದ ಮುಂದುವರಿದ ಭಾಗವಾಗಿದೆ.
ಈ ಚಿತ್ರವನ್ನು ಅಲಿ ಅಬ್ಟಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಲುವಿಗೆ ಜೋಡಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಉಳಿದಂತೆ ಗಿರೀಶ್ ಕಾರ್ನಾಡ್, ಪರೇಶ್ ರಾವಲ್ ನಟಿಸುತ್ತಿದ್ದು, ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಕೂಡಾ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರಂತೆ. ಹೀಗೆ ದೊಡ್ಡ ತಾರಾಗಣವಿರುವ,
ಬಹುನಿರೀಕ್ಷಿತ ಹಿಂದಿ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿರೋದು ಅವರ ಅಭಿಮಾನಿಗಳಿಗೆ ಖುಷಿ ನೀಡಿರುವುದಂತೂ ಸುಳ್ಳಲ್ಲ.
ಸುದೀಪ್‌ಗೆ ವಿಲನ್ ಪಾತ್ರ ಹೊಸತಲ್ಲ. ಈ ಹಿಂದೆ ರಾಜ್‌ಮೌಳಿ ನಿರ್ದೇಶನದ “ಈಗ’ ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ನಟಿಸಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಆ ಪಾತ್ರಕ್ಕಾಗಿ ಸುದೀಪ್‌ಗೆ ಪ್ರತಿಷ್ಠಿತ ನಂದಿ ಪ್ರಶಸ್ತಿ ಕೂಡಾ ಬಂದಿತ್ತು.
ಈಗ ಬಾಲಿವುಡ್ ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಕ್ಕೆ ಮತ್ತಷ್ಟು
ಹತ್ತಿರವಾಗಲಿದ್ದಾರೆ. ಅಂದಹಾಗೆ, ಈ ಪಾತ್ರದಲ್ಲಿ ಸುದೀಪ್ ಅವರ ಗೆಟಪ್ ಹೇಗಿರುತ್ತದೆ ಎಂಬ
ಕುತೂಹಲವಿದ್ದರೆ ನೀವು ಡಿಸೆಂಬರ್‌ವರೆಗೆ ಕಾಯಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.