ಕಿಚ್ಚನ ಸಿನಿ ಜರ್ನಿಗೆ 28 ವರುಷದ ಹರುಷ.. ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದವೆಂದ ಬಾದ್ ಷಾ
Team Udayavani, Jan 31, 2024, 12:23 PM IST
ಬೆಂಗಳೂರು: ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ 28 ವರ್ಷಗಳು ಕಳೆದಿವೆ. ಈ ಸಂಭ್ರಮವನ್ನು ಅವರ ಅಪಾರ ಅಭಿಮಾನಿಗಳ ಆಚರಿಸಿಕೊಳ್ಳುತ್ತಿದ್ದು, ಸಹ ಕಲಾವಿದರು ಕಿಚ್ಚನ ಈ ಜರ್ನಿಗೆ ಶುಭಾಶಯಗಳನ್ನು ಕೋರಿದ್ದಾರೆ.
ʼಸ್ಪರ್ಶʼದಿಂದ ಚಂದನವನದಲ್ಲಿ ನಾಯಕ ನಟನಾಗಿ ಕಾಲಿಟ್ಟ ಅವರು, ಇಂದು ಸಾವಿರಾರು ಹೆಜ್ಜೆಗಳನ್ನಿಟ್ಟು ಸಾಧನೆಯ ಶಿಖರವನ್ನೇರಿದ್ದಾರೆ. ಈ ಪಯಣದಲ್ಲಿ ಸೋಲು – ಗೆಲುವು ಎರಡರ ರುಚಿಯನ್ನು ಅಸ್ವಾದಿಸಿದ್ದು, ಕಿಚ್ಚನ ಪಯಣಕ್ಕಿಂದು 28 ವರ್ಷಗಳು ಪೂರ್ತಿಯಾದ ದಿನ.
ಈ ಬಗ್ಗೆ ಅವರು, ʼಎಕ್ಸ್ʼ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. “ಮನರಂಜನಾ ಕ್ಷೇತ್ರದಲ್ಲಿ 28 ವರ್ಷಗಳಾಗಿವೆ. ಇದೊಂದು ಅದ್ಭುತ ಪಯಣ. ಈ ಸಂದರ್ಭದಲ್ಲಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪೋಷಕರು, ಕುಟುಂಬ, ಬರಹಗಾರರು, ತಂತ್ರಜ್ಞರು, ನನ್ನ ಸಹ ಕಲಾವಿದರು, ನಿರ್ಮಾಪಕರು,ಮಾಧ್ಯಮ, ಮನರಂಜನಾ ವಾಹಿನಿಗಳು, ವಿತರಕರು,ಪ್ರದರ್ಶಕರು, ಸಿನಿಮಾ ಒಕ್ಕೂಟ ಹಾಗೂ ನನ್ನ ಪಯಣದ ಪ್ರತಿ ಹೆಜ್ಜೆಯಲ್ಲಿ ಜೊತೆಯಾದವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
“ನನ್ನ ಜೀವನದಲ್ಲಿ ನಾನು ಗಳಿಸಿರುವ ಅತ್ಯಮೂಲ್ಯ ಸಂಪಾದನೆ ಎಂದರೆ ಅದು ಫ್ಯಾನ್ಸ್. ಈ ಅಭಿಮಾನಿಗಳಿಗೆ ಪ್ರೀತಿ ಹಾಗೂ ಅಪ್ಪುಗೆಯನ್ನು ನೀಡುತ್ತೇನೆ. ಈ ಪಯಣದ ಪ್ರತಿ ಹೆಜ್ಜೆಯನ್ನು ನಾನು ಸಂತಷದಿಂದ ಕಳೆದಿದ್ದೇನೆ. ನಾನು ದೋಷರಹಿತನಲ್ಲ.ಪರಿಪೂರ್ಣನಲ್ಲ. ಅವಕಾಶಗಳು ಬಂದಾಗ ನನ್ನ ಕೈಲಾದಷ್ಟು ಪ್ರಯತ್ನವನ್ನು ಮಾಡಿದ್ದೇನೆ. ನಾನು ಹೇಗೆ ಇದ್ದೇನೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದ” ಎಂದು ಕಿಚ್ಚ ಬರೆದುಕೊಂಡಿದ್ದಾರೆ.
“ಕೆಲವು ವರ್ಷಗಳ ಹಿಂದೆ ಕಂಠೀರವ ಸ್ಟುಡಿಯೋಗೆ ಅಂಬರೀಷ್ ಮಾಮಾ ಅವರೊಂದಿಗೆ ಕ್ಯಾಮೆರಾ ಎದುರಿಸಲು ʼಬ್ರಹ್ಮʼ ಚಿತ್ರದ ಶೂಟಿಂಗ್ ಗೆ ಹೋಗಿದ್ದೆ. ಇದಕ್ಕೆ ಈಗ 28 ವರ್ಷ ತುಂಬಿದೆ. ಎಲ್ಲರಿಗೂ ಧನ್ಯವಾದ” ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಸದ್ಯ ಕಿಚ್ಚ ಸುದೀಪ್ ʼಮ್ಯಾಕ್ಸ್ʼ ಸಿನಿಮಾದ ಚಿತ್ರೀಕರಣದಲ್ಲಿ ಬರೆದುಕೊಂಡಿದ್ದಾರೆ.
Seems like just a few years bk that I stepped onto the floor of #Bramha at Kanteerava studio, with AmbrishMama, to face the camera. It’s already 28 years!!!!!
Feeling humbled. I just have love,respect and a lot of gratitude to each and everyone for this priceless gift. 🤗♥️ pic.twitter.com/Un6PsDN2Qk— Kichcha Sudeepa (@KicchaSudeep) January 31, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.