Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

Team Udayavani, Sep 25, 2024, 11:18 AM IST

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸುದೀಪ್‌ ನಟನೆಯ “ಮ್ಯಾಕ್ಸ್‌’ (Max Movie) ಸಿನಿಮಾ ಇಷ್ಟೊತ್ತಿಗೆ ತೆರೆಕಾಣಬೇಕಿತ್ತು. ಆದರೆ, ಯಾಕೋ ಯಾವುದೂ ಅಂದುಕೊಂಡಂತೆ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟೀಸರ್‌ ಬಿಟ್ಟಾಗ, “ಅಬ್ಬಾ ಅಂತೂ “ಮ್ಯಾಕ್ಸ್‌’ ಎಚ್ಚರವಾಗಿದೆ ಎಂದು ಸುದೀಪ್‌ (Kiccha Sudeep) ಅಭಿಮಾನಿಗಳು ಖುಷಿಪಟ್ಟರು.

ಜೊತೆಗೆ ಆಗಸ್ಟ್‌, ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌… ಈ ಮೂರರಲ್ಲಿ ಒಂದು ತಿಂಗಳಲ್ಲಂತೂ ಸಿನಿಮಾ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಎದುರು ನೋಡುತ್ತಲೇ ಇದ್ದರು. ಆದರೆ, “ಮ್ಯಾಕ್ಸ್‌’ ಸಿನಿಮಾದ ಬಿಡುಗಡೆಯ ಕುರಿತಾದ ಯಾವುದೇ ಸೂಚನೆ ಕೂಡಾ ಕಾಣುತ್ತಿಲ್ಲ. ಹಾಗಂತ ಇದು ಸುದೀಪ್‌ ಅವರ ಸಮಸ್ಯೆಯಲ್ಲ. ಏಕೆಂದರೆ ಅವರೇ ಹೇಳಿದಂತೆ ಅವರ ಕಡೆಯ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದಾರೆ. ಆದರೆ, ತಮಿಳುನಾಡಿನ ನಿರ್ಮಾಣ ಸಂಸ್ಥೆ ಮಾತ್ರ “ಮ್ಯಾಕ್ಸ್‌’ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವುದಂತೂ  ಸುಳ್ಳಲ್ಲ. ಈ ನಡುವೆಯೇ “ಮ್ಯಾಕ್ಸ್‌’ ತಂಡದ ನಡುವೆ ಸಣ್ಣದಾದ ಮನಸ್ತಾಪವಿದೆ, ಸಿನಿಮಾ ಬಿಡುಗಡೆ ತಡವಾಗಲು ಹಲವು ಕಾರಣಗಳಿವೆ ಎಂಬ ಮಾತು “ಸಿನಿಪಂಡಿತರ’ ಬಾಯಲ್ಲಿ ಓಡಾಡಲಾರಂಭಿಸಿದೆ. ಆದರೆ, ಸುದೀಪ್‌ ಮಾತ್ರ ಇವೆಲ್ಲವನ್ನು ಅಲ್ಲಗಳೆಯುತ್ತಾರೆ.

ಇತ್ತೀಚೆಗೆ ನಡೆದ “ಬಿಗ್‌ಬಾಸ್‌’ ಪತ್ರಿಕಾಗೋಷ್ಠಿಯಲ್ಲಿ ಮ್ಯಾಕ್ಸ್‌ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. “ನನ್ನ ಕಡೆಯ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದೇನೆ. ಅದು ಬಿಟ್ಟರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ನಿರ್ಮಾಣ ಸಂಸ್ಥೆ ತಮಿಳುನಾಡಿದು. ಅವರಿಗೆ ಅವರದ್ದೇ ಆದಂತಹ ಕೆಲವು ಸಮಸ್ಯೆಗಳಿವೆ. ನನ್ನ ಕಡೆಯಿಂದ ಏನಾಗಬೇಕೋ ಅದನ್ನು ಮುಗಿಸಿದ್ದೇನೆ. ಪ್ಯಾನ್‌ ಇಂಡಿಯಾ ಚಿತ್ರವಾದ್ದರಿಂದ ಸ್ವಲ್ಪ ತಡವಾಗುತ್ತಿದೆ. ಅದನ್ನು ಹೊರತುಪಡಿಸಿದರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಚಿತ್ರ ಮುಗಿದಿದೆ. ನಾನು ಸಹ ಈ ಚಿತ್ರಕ್ಕೆ ಪಾಲುದಾರ. ಪಾಲುದಾರರ ಮಧ್ಯೆ ಸಮಸ್ಯೆ ಇದ್ದರೆ ಚಿತ್ರ ಹೇಗೆ ಮುಗಿಯುವುದಕ್ಕೆ ಸಾಧ್ಯವಿದೆಯೇ? ಎಂದು ಪ್ರಶ್ನಿಸುತ್ತಾರೆ ಸುದೀಪ್‌. ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎನ್ನುವ ಸುದೀಪ್‌, “ಒಂದು ವೇಳೆ ನಮ್ಮ ನಡುವೆ ಸಮಸ್ಯೆಗಳಿದ್ದರೆ ಸಿನಿಮಾವನ್ನು ಒಟ್ಟಿಗೆ ನಡೆಸಿಕೊಂಡು ಬರಲು ಸಾಧ್ಯವಿಲ್ಲ. ನೆಗೆಟಿವ್‌ ಪ್ರಚಾರ ಕೂಡಾ ಪ್ರಚಾರವೇ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು’ ಎನ್ನುತ್ತಾರೆ.

ವಿಜಯ್‌ ಕಾರ್ತಿಕೇಯ ನಿರ್ದೇಶನದ ಆ್ಯಕ್ಷನ್‌ ಥ್ರಿಲ್ಲರ್‌ “ಮ್ಯಾಕ್ಸ್‌’ ಚಿತ್ರದಲ್ಲಿ ಕಿಚ್ಚ ಸುದೀಪ್‌, ವರಲಕ್ಷ್ಮೀ ಶರತ್‌ ಕುಮಾರ್‌, ಸಂಯುಕ್ತ ಹೊರನಾಡು, ಪ್ರಮೋದ್‌ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕಲೈಪುಲಿ ಎಸ್‌ ತನು ವಿ ಕ್ರಿಯೇಷನ್ಸ್‌ ಹಾಗೂ ಕಿಚ್ಚ ಸುದೀಪ್‌ ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಟಾಪ್ ನ್ಯೂಸ್

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

6-belthanagdy

ಬೆಳ್ತಂಗಡಿ:ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ

Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ

Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ

1-kangg

BJP; ಆಕ್ರೋಶದ ಬಳಿಕ ಹೇಳಿಕೆ ಹಿಂಪಡೆದುಕೊಂಡ ಕಂಗನಾ ರಣಾವತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rummy Aata Movie: ‘ರಮ್ಮಿ’ ಮೊಗದಲ್ಲಿ ನಗು

Rummy Aata Movie: ‘ರಮ್ಮಿ’ ಮೊಗದಲ್ಲಿ ನಗು

171

Nice Road Movie: ನೈಟ್‌ ರೋಡ್‌ ಸೆ.27ಕ್ಕೆ  ಬಿಡುಗಡೆ

Martin Movie: ಮಾರ್ಟಿನ್‌ಗೆ ಸಾಥ್‌ ನೀಡಿದ ಮೈತ್ರಿ ಮೂವೀ ಮೇಕರ್ಸ್

Martin Movie: ಮಾರ್ಟಿನ್‌ಗೆ ಸಾಥ್‌ ನೀಡಿದ ಮೈತ್ರಿ ಮೂವೀ ಮೇಕರ್ಸ್

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

5

City Lights Kannada Movie: ವಿಜಯ್‌ ‘ಸಿಟಿ ಲೈಟ್ಸ್‌’ಗೆ ವಿನಯ್‌ ಹೀರೋ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

2(2)

Vitla: ಟ್ರಾಫಿಕ್‌ ಜಾಮ್‌ ವಿಟ್ಲ ಪೇಟೆಯಲ್ಲಿ ನಿತ್ಯ ಸಂಕಟ

7-uv-fusion

Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.