46ನೇ ಸಿನಿಮಾದ ಪ್ರೋಮೋ ಶೂಟ್.. ಕಿಚ್ಚನ ಬಿಗ್ ಅಪ್ಡೇಟ್‌ಗೆ ಖುಷ್ ಆದ ಫ್ಯಾನ್ಸ್
Team Udayavani, Apr 29, 2023, 9:26 AM IST
ಬೆಂಗಳೂರು: ವಿಕ್ರಾಂತ್ ರೋಣದ ಬಳಿಕ ಕಿಚ್ಚ ಸುದೀಪ್ ಯಾವ ಸಿನಿಮಾವನ್ನು ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು, ಈ ಕುರಿತಾಗಿ ಇತ್ತೀಚೆಗೆ ಅವರು ಒಂದು ಸುಳಿವನ್ನು ನೀಡಿದ್ದರು. ಮೂರು ಸ್ಕ್ರಿಪ್ಟ್ ಗಳನ್ನು ಆಯ್ದುಕೊಂಡಿದ್ದೇನೆ ಎಂದು ಹೇಳಿದ್ದರು. ಇದೀಗ ಈ ಬಗ್ಗೆ ಮತ್ತೊಂದು ಬಿಗ್ ಅಪ್ಡೇಡ್ ನೀಡಿದ್ದಾರೆ.
ಕಿಚ್ಚ ನಾಯಕನಾಗಿ ಮಿಂಚಿದ್ದ ʼವಿಕ್ರಾಂತ್ ರೋಣʼ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಮಾಯಿ ಮಾಡಿತ್ತು. ಇದಾದ ಬಳಿಕ ಉಪ್ಪಿ ಅವರ ʼಕಬ್ಬʼ ಚಿತ್ರದಲ್ಲಿ ಭಾರ್ಗವ ಭಕ್ಷಿಯಾಗಿ ಕಾಣಿಸಿಕೊಂಡಿದ್ದರು. ಕಿಚ್ಚನ 46ನೇ ಸಿನಿಮಾ ಯಾವುದೆನ್ನುವುದು ಸದ್ಯದ ಕುತೂಹಲ.
ಕಿಚ್ಚ46 ಬಗ್ಗೆ ಕೆಲ ಸಮಯದಿಂದ ಟ್ವೀಟ್, ಮಿಮ್ಸ್ ಗಳು ಹರಿದಾಡುತ್ತಿದೆ. ಇದು ನನಗೆ ತುಂಬಾ ಸ್ಪೆಷೆಲ್ ಎಂದು ಹೇಳಿ ಸದ್ಯ ಮೂರು ಸ್ಕ್ರಿಪ್ಟ್ ಗಳನ್ನು ಅಂದರೆ ಮೂರು ಸಿನಿಮಾಗಳನ್ನು ಫೈನಲ್ ಮಾಡಿದ್ದೇನೆ. ಈ ಕುರಿತು ಸಿದ್ದತೆಗಳು ನಡೆಯುತ್ತಿದೆ. ಮೂರು ಸ್ಕ್ರಿಪ್ಟ್ ಗಳಿಗೆ ಸಾಕಷ್ಟು ಪರಿಶ್ರಮಬೇಕು. ಈ ಕುರಿತು ಆಯಾ ಸಿನಿಮಾ ತಂಡ ಸಿದ್ದತೆಗಳನ್ನು ನಡೆಸುತ್ತಿದೆ. ಶೀಘ್ರದಲ್ಲಿ ಹೊಸ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಇತ್ತೀಚೆಗಷ್ಟೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
ಇದೀಗ ಈ ಬಗ್ಗೆ ಶನಿವಾರ ಮುಂಜಾನೆ (ಎ.29 ರಂದು) ಕಿಚ್ಚ ಟ್ವಿಟರ್ ನಲ್ಲಿ ಮತ್ತೊಂದು ಅಪ್ಡೇಡ್ ನೀಡಿದ್ದಾರೆ. “ನಾನು ಆಯ್ದುಕೊಂಡ ಮೂರು ಸಿನಿಮಾಗಳಲ್ಲಿ ಒಂದು ಸಿನಿಮಾದ ಪ್ರೋಮೋ ಶೂಟ್ ಇದೇ ಮೇ.22 ರಂದು ನಡೆಯಲಿದೆ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ. ಜೂ. 1 ರಂದು ಅದು ಲಾಂಚ್ ಆಗಲಿದೆ. ಈ ಸಿನಿಮಾ ಮಾಡಲು ತುಂಬಾ ಉತ್ಸುಕನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನು ಕೇಳಿದ ಕಿಚ್ಚನ ಅಭಿಮಾನಿಗಳು ಭಾರೀ ಖುಷ್ ಆಗಿದ್ದಾರೆ. ತಮ್ಮ ಮೆಚ್ಚಿನ ನಟನ ಸಿನಿಮಾದ ಟೈಟಲ್ ಯಾವುದಾಗಿರಬಹುದು, ನಿರ್ದೇಶಕರು ಯಾರಾಗಿರಬಹುದು ಎನ್ನುವ ಯೋಚನೆಯಲ್ಲಿ ನಿರತರಾಗಿದ್ದಾರೆ.
Happy to announce that the promo shoot of one of the three films I’m starting Wil go on floor on the 22nd of May. June 1st will be the launch.
🤗🤗❤️
A script n a genre that excited me and a film I’m looking forward to.— Kichcha Sudeepa (@KicchaSudeep) April 29, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.