Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Team Udayavani, Dec 26, 2024, 11:14 AM IST

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

ಬೆಂಗಳೂರು: ಕಿಚ್ಚ ಸುದೀಪ್‌ (Kiccha Sudeep) ಅವರ ʼಮ್ಯಾಕ್ಸ್‌ʼ (Max Movie) ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ರಾಜ್ಯದೆಲ್ಲೆಡೆ ಚಿತ್ರಕ್ಕೆ ಸಖತ್‌ ಪ್ರತಿಕ್ರಿಯೆ ಸಿಗುತ್ತಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ವಿಚಾರದಲ್ಲೂ ʼಮ್ಯಾಕ್ಸ್‌ʼ ಹಿಂದೆ ಬಿದ್ದಿಲ್ಲ. ಕನ್ನಡದ ʼಯುಐʼ ಚಿತ್ರವೂ ಭರ್ಜರಿ ರೆಸ್ಪಾನ್ಸ್‌ ಪಡೆಯುತ್ತಿದ್ದು, ಈ ನಡುವೆ ʼಮ್ಯಾಕ್ಸ್‌ʼ ರಿಲೀಸ್‌ ಆಗಿರುವುದು ಸಿನಿಮಂದಿಗೆ ಭರಪೂರ ಮನರಂಜನೆ ಸಿಕ್ಕಂತಾಗಿದೆ.

ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವೊಂದಕ್ಕೆ ಥ್ರಿಲ್ಲರ್‌ ಕಥೆಯೊಂದನ್ನು ಸೇರಿಸಿ ಅದನ್ನು ಸರಾಗವಾಗಿ ಹೇಳುವ ಮೂಲಕ “ಮ್ಯಾಕ್ಸ್‌’ ಸಿನಿಮಾ ಪ್ರೇಮಿಗಳಿಗೆ “ಮ್ಯಾಕ್ಸಿಮಮ್‌’ ಮನರಂಜನೆ ಒದಗಿಸುತ್ತದೆ. ಆ ಮೂಲಕ ಸುದೀಪ್‌ ಅವರ ಕ್ಯಾರೆಕ್ಟರ್‌ಗೆ ತಕ್ಕಂತೆ ನಿರ್ದೇಶಕ ವಿಜಯ್‌ ಕಾರ್ತಿಕೇಯ ಕಥೆಯನ್ನು ಹಣೆದಿರುವುದು ಪ್ರೇಕ್ಷಕರ ಮನ ಗೆದ್ದಿದೆ.

ಕಥೆ ಹೇಗಿದೆ?: ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಸುದೀಪ್‌ ಇಲ್ಲಿ ಪೊಲೀಸ್‌ ಆಫೀಸರ್‌. ಆದರೆ, ಆ ಕುರುಹು ಸಿನಿಮಾದಲ್ಲಿ ಸಿಗುವುದು ಕೇವಲ ಪೊಲೀಸ್‌ ಸ್ಟೆಷನ್‌ನಲ್ಲಿ ಮಾತ್ರ. ಏಕೆಂದರೆ ಸುದೀಪ್‌ ಒಂದೇ ಒಂದು ದೃಶ್ಯದಲ್ಲೂ ಪೊಲೀಸ್‌ ಕಾಸ್ಟ್ಯೂಮ್‌, ಮ್ಯಾನರಿಸಂನಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಮರುದಿನ ಬೆಳಗ್ಗೆ ಡ್ನೂಟಿಗೆ ರಿಪೋರ್ಟ್‌ ಮಾಡಿಕೊಳ್ಳಬೇಕಾದ ಮ್ಯಾಕ್ಸ್‌ ಮುಂಚಿನ ದಿನ ರಾತ್ರಿಯೇ ಸ್ಟೆಷನ್‌ ಎಂಟ್ರಿಯಾಗುತ್ತಾನೆ. ಅಲ್ಲಿಂದ ಗೇಮ್‌ ಶುರು. ದುಷ್ಟರನ್ನು ಮಟ್ಟ ಹಾಕುತ್ತಾ, ಪೊಲೀಸ್‌ ಖದರ್‌ ತೋರಿಸುವುದೇ “ಮ್ಯಾಕ್ಸ್‌’ ಕಥೆ. ಮೊದಲೇ ಹೇಳಿದಂತೆ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದ್ದರಿಂದ ಟೈಮ್‌ ಟು ಟೈಮ್‌ ಇಲ್ಲಿ ಗೇಮ್‌ ಬದಲಾಗುತ್ತಾ ಸಾಗುವ ಮೂಲಕ ಚಿತ್ರ ಪ್ರೇಕ್ಷಕರನ್ನು ತಮ್ಮ ಜೊತೆಗೆ ಹೆಜ್ಜೆ ಹಾಕಿಸುತ್ತದೆ.

ಮೊದಲ ದಿನದ ಗಳಿಕೆ ಎಷ್ಟು?: ಭಾರೀ ನಿರೀಕ್ಷೆ ಹುಟ್ಟಿಸಿದ ʼಮ್ಯಾಕ್ಸ್‌ʼ ಬಾಕ್ಸಾಫೀಸ್‌ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಅಡ್ವಾನ್ಸ್‌ ಬುಕಿಂಗ್‌ ವಿಚಾರದಲ್ಲಿ ಸದ್ದು ಮಾಡಿದ ʼಮ್ಯಾಕ್ಸ್‌ʼ ಟ್ರೇಡಿಂಗ್ ವೆಬ್ ಪೋರ್ಟಲ್ ಸ್ಯಾಕ್ನಿಲ್ಕ್ ಪ್ರಕಾರ ಮೊದಲ ದಿನ 8.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವಿತರಕರ ಪ್ರಕಾರ ಈ ಲೆಕ್ಕಚಾರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಸುಮಾರು 950 ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ರಿಲೀಸ್‌ಗೂ ಮುನ್ನ ಕರ್ನಾಟಕದಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲಾಗಿತ್ತು. ಆ ಮೂಲಕ 2.50 ಕೋಟಿ ರೂ. ಗಳಿಸಿತ್ತು.

ವೀಕೆಂಡ್ ನಲ್ಲಿ ʼಮ್ಯಾಕ್ಸ್‌ʼಗೆ ರೆಸ್ಪಾನ್ಸ್‌ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸುದೀಪ್‌ ಜತೆ ವರಲಕ್ಷ್ಮೀ ಶರತ್‌ ಕುಮಾರ್‌, ಸುನಿಲ್‌, ಉಗ್ರಂ ಮಂಜು, ಸಂಯುಕ್ತಾ, ಸುಕೃತಾ, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ.

ಟಾಪ್ ನ್ಯೂಸ್

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.