ಗುಮ್ಮ ಬಂತು ಗುಮ್ಮ…; ‘ವಿಕ್ರಾಂತ್ ರೋಣ’ನ ದರ್ಶನಕ್ಕೆ ದಿನಾಂಕ ಫಿಕ್ಸ್
Team Udayavani, Apr 2, 2022, 10:15 AM IST
“ಆ ಕಥೆಯಲ್ಲೊಬ್ಬ ಇದ್ನಂತೆ… ಒಂದು ಸೆಕೆಂಡ್ ನಲ್ಲಿ ರಪ್ಪಂತೆ ಹೋಗುತ್ತಲ್ಲ, ಅವನು ಬಂದಾಗ ಎಲ್ಲರಿಗೂ ಭಯವಾಗುತ್ತಲ್ಲ…. ‘ಗುಮ್ಮ…’.’” ಇದು ಅಜ್ಜಿ ಡೈರಿ ಹುಡುಕುವ ಮಕ್ಕಳ ಮಾತುಗಳು. ಅಜ್ಜಿ ಡೈರಿಯಲ್ಲಿರುವುದು ವಿಕ್ರಾಂತ್ ರೋಣನ ಕತೆ.
ಕಿಚ್ಚ ಸುದೀಪ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಇದರೊಂದಿಗೆ ಚಿತ್ರದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದೆ. ಹೌದು, ಅನೂಪ್ ಭಂಡಾರಿ ನಿರ್ದೇಶದನದ ‘ವಿಕ್ರಾಂತ್ ರೋಣ’ ಚಿತ್ರ ಜುಲೈ 28ರಂದು ವಿಶ್ವಾದ್ಯಂತ ಚಿತ್ರಮಂದರಿಗಳಲ್ಲಿ ತೆರೆಕಾಣಲಿದೆ.
ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಜೊತೆಗೆ ಇನ್ನೂ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗ ಆಯಾ ಭಾಷೆಯ ಟೀಸರ್ ಅನ್ನು ಅಲ್ಲಿನ ಸ್ಟಾರ್ ನಟರು ರಿಲೀಸ್ ಮಾಡಿದ್ದಾರೆ. ಹಿಂದಿ ಟೀಸರ್ ಅನ್ನು ಸಲ್ಮಾನ್ ಖಾನ್, ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ಸಿಂಬು ಹಾಗೂ ಮಲಯಾಳಂ ಟೀಸರ್ ಅನ್ನು ಮೋಹನ್ ಲಾಲ್ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ಬೆಡಗಿ Daksha Nagarkar ಹಾಟ್ & ಗ್ಲಾಮರಸ್ ಫೋಟೋ ಗ್ಯಾಲರಿ
ಈ ಮೊದಲು ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲ ಕ ದಾಖಲೆ ಬರೆದಿದ್ದ ಚಿತ್ರ, ಕನ್ನಡ, ಹಿಂದಿ, ತೆಲುಗು,ತಮಿಳು ಸೇರಿದಂತೆ ಒಟ್ಟೂ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರಹೊಮ್ಮಿರುವ ಈ ಚಿತ್ರ 3ಡಿ ಮೂಲಕವೂ ತೆರೆಗೆ ಬರಲಿದೆ.
The Devil will arrive on July 28th, 2022. #VikrantRonaJuly28 worldwide in 3D
All Languages Release Date Teasers –https://t.co/t2DA4bBABo@KicchaSudeep @nirupbhandari @neethaofficial@Asli_Jacqueline @JackManjunath @shaliniartss @Alankar_Pandian @ZeeStudios_ #VikrantRona
— Anup Bhandari (@anupsbhandari) April 2, 2022
ಚಿತ್ರದ ಹಾಡೊಂದರಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾರೆ. ಶಾಲಿನಿ ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂಧನ್ ರಾವ್ ಎಂಬ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಅನೂಪ್ ಭಂಡಾರಿ ನಿರ್ದೇಶನ, ಬಿ. ಅಜನೀಶ್ ಲೋಕ್ ನಾಥ್ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.