ಫ್ಯಾಂಟಮ್‌ಗಾಗಿ ಮತ್ತೆ ಜಿಮ್‌ನತ್ತ ಕಿಚ್ಚ

ಸುದೀಪ್ ‌ವರ್ಕೌಟ್‌ ಫೋಟೋಗೆ ಫ್ಯಾನ್ಸ್‌ ಫಿದಾ

Team Udayavani, Nov 29, 2020, 10:04 AM IST

ಫ್ಯಾಂಟಮ್‌ಗಾಗಿ ಮತ್ತೆ ಜಿಮ್‌ನತ್ತ ಕಿಚ್ಚ

ಇತ್ತೀಚೆಗಷ್ಟೇ “ಫ್ಯಾಂಟಮ್‌’ ಚಿತ್ರತಂಡ, ಹೈದರಾಬಾದ್‌ನಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ಪೂರ್ಣಗೊಳಿಸಿ ಬೆಂಗಳೂರಿಗೆ ವಾಪಾಸ್ಸಾಗಿತ್ತು. ಸದ್ಯ ಚಿತ್ರತಂಡ, “ಫ್ಯಾಂಟಮ್‌’ ಕೊನೆ ಹಂತದ ಚಿತ್ರೀಕರಣಕ್ಕೆ ಲೊಕೇಶನ್‌ ಹುಡುಕಾಟ ಸೇರಿದಂತೆ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಇದರ ನಡುವೆಯೇ ನಟ ಸುದೀಪ್‌ ತಮ್ಮ ದೇಹವನ್ನು ಹುರಿಗೊಳಿಸಲು ಜಿಮ್‌ನತ್ತ ಮುಖ ಮಾಡಿದ್ದಾರೆ.

ಹೌದು, “ಫ್ಯಾಂಟಮ್‌’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟ ಸುದೀಪ್‌ ಸಖತ್‌ ರಗಡ್‌ ಆಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಬಾಡಿ ಬಿಲ್ಡ್‌ ಮಾಡಲು ಮುಂದಾಗಿದ್ದಾರೆ. ಈಗಾಗಲೇಕೆಲ ದಿನಗಳಿಂದ ಜಿಮ್‌ನಲ್ಲಿ ಪ್ರತಿದಿನ ಒಂದಷ್ಟು ಕಸರತ್ತು ಮಾಡುತ್ತಿರುವ ಸುದೀಪ್‌, ತಮ್ಮ

ಟ್ವಿಟ್ಟರ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಫೋಟೋವನ್ನು ಶೇರ್‌ ಮಾಡಿದ್ದಾರೆ. ಅಲ್ಲದೆ ಈ ಫೋಟೋದ ಜೊತೆಗೆ, “ಉತ್ತಮ ಆಹಾರ, ಶಿಸ್ತಿನ ಜೀವನ ಯಾವತ್ತಿಗೂ ಒಳ್ಳೆಯದೇ. “ಫ್ಯಾಂಟಮ್‌’ ಚಿತ್ರದಕ್ಲೈಮ್ಯಾಕ್ಸ್‌ಗಾಗಿ ನಾನು ಒಂದು ತಿಂಗಳು ವರ್ಕೌಟ್‌ ಮಾಡಿದ್ದೇನೆ. ಡಿಸೆಂಬರ್‌4 ರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’: ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ

ಈ ಹಿಂದೆ “ಪೈಲ್ವಾನ್‌’ ಚಿತ್ರದ ಪಾತ್ರಕ್ಕಾಗಿ ಸುದೀಪ್‌ ಜಿಮ್‌ನತ್ತ ಮುಖ ಮಾಡಿ ಬಾಡಿ ಬಿಲ್ಡ್‌ ಮಾಡಿದ್ದರು. “ಪೈಲ್ವಾನ್‌’ ಗೆಟಪ್‌ನಲ್ಲಿ ಮೊದಲ ಬಾರಿಗೆ ಸುದೀಪ್‌ ಅವರನ್ನು ಬಿಗ್‌ ಸ್ಕ್ರೀನ್‌ ಮೇಲೆ ನೋಡಿದ ಸಿನಿಪ್ರಿಯರು ಬೆರಗಾಗಿದ್ದರು. ಈಗ ಮತ್ತೂಮ್ಮೆ “ಫ್ಯಾಂಟಮ್‌’ಗಾಗಿ ಸುದೀಪ್‌ ದೇಹ ಹುರಿಗೊಳಿಸಲು ಸಿದ್ಧರಾಗುತ್ತಿದ್ದು, ಸುದೀಪ್‌ ಫ್ಯಾನ್ಸ್‌ ತಮ್ಮ ನೆಚ್ಚಿನ ನಟನ ಹೊಸಗೆಟಪ್‌ ಮೇಲೆ ಒಂದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ “ಫ್ಯಾಂಟಮ್‌ ‘ಗಾಗಿ ಸುದೀಪ್‌ ಮಾಡುತ್ತಿರುವ ಈ

ವರ್ಕೌಟ್‌ ಫೋಟೋ ಸೋಶಿಯಲ್‌ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿದ್ದು,ಕಿಚ್ಚನ ಅಭಿಮಾನಿಗಳು ಸುದೀಪ್‌ ಫಿಟ್‌ನೆಸ್‌ಕಂಡು ಫಿದಾ ಆಗಿದ್ದಾರೆ ಎಂದು ಹೇಳಬಹುದು.

ಸುದೀಪ್‌ ಜೊತೆ ಕತ್ರಿನಾ ಸ್ಟೆಪ್‌? :

ಇದೇ ಡಿಸೆಂಬರ್‌ ಮೊದಲವಾರದಿಂದ “ಫ್ಯಾಂಟಮ್‌’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.ಈ ಚಿತ್ರೀಕರಣದಲ್ಲಿ ಚಿತ್ರದಲ್ಲಿ ಬರುವ ಸ್ಪೆಷಲ್‌ ಸಾಂಗ್‌ ಒಂದನ್ನು ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಇನ್ನು ಈ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಲು ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್ ಅವರನ್ನು ತರೆತರುವ ಯೋಚನೆಯಲ್ಲಿದೆ ಚಿತ್ರತಂಡ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡ, “ಸಿನಿಮಾದಲ್ಲಿ ಬರುವ ಸ್ಪೆಷಲ್‌ ಹಾಡೊಂದನ್ನು ವಿಶೇಷವಾಗಿ ಚಿತ್ರೀಕರಿಸಲು ಪ್ಲಾನ್‌ ಮಾಡಿಕೊಂಡಿರುವುದು ನಿಜ. ಆದರೆ ಈ ಹಾಡಿನಲ್ಲಿ ಸುದೀಪ್‌ ಅವರ ಜೊತೆ ಯಾರು ನೃತ್ಯ ಮಾಡಲಿದ್ದಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ.ಕತ್ರಿನಾಕೈಫ್ ಅವರೊಂದಿಗೂ ಮಾತುಕತೆ ನಡೆಸಲಾಗಿದೆ.ಕತ್ರಿನಾ ಡೇಟ್‌ ಹೊಂದಾಣಿಕೆ ಆಗದಿದ್ದರೆ, ನೋರಾ ಫ‌ತೇಹಿ ಅವರನ್ನು ಕರೆತರಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದೆ.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

5

Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.